ಸ್ವಾತಂತ್ರ್ಯ ತಂದು ಕೊಡುವಲ್ಲಿ ನೆಹರು ಪಾತ್ರ ಮಹತ್ವದ್ದು-ಹೆಚ್.ಕೆಂಚಮಾರಯ್ಯ

ತುಮಕೂರು:ವಿದೇಶದಲ್ಲಿ ಕಲಿತಿದ್ದರು,ದೇಶದ ಸ್ವಾತಂತ್ರಕ್ಕಾಗಿ ಮಹಾತ್ಮಗಾಂಧಿಯೊಂದಿಗೆ ಸೇರಿ ದೇಶಕ್ಕೆ ಸ್ವಾತಂತ್ರ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪಂಡಿತ ಜವಹರಲಾಲ್ ನೆಹರು, ಅಪ್ಪಟ್ಟ ದೇಶ ಪ್ರೇಮ ಹೊಂದಿದ್ದ ನಾಯಕ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೆಚ್. ಕೆಂಚಮಾರಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ದೇಶದ ಮೊದಲ ಪ್ರಧಾನಿ ಪಂಡಿತ ಜವಹರಲಾಲ್ ನೆಹರು ಅವರು 61ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ,ಸಾವಿರಾರು ಕೋಟಿ ರೂಗಳ ಆಸ್ತಿಯನ್ನು ಸರಕಾರಕ್ಕೆ ದಾನ ನೀಡಿ,ದೇಶವನ್ನು ಸುಭೀಕ್ಷವಾಗಿ ಕಟ್ಟಲು ಕಟ್ಟಿಬದ್ದರಾಗಿ ದುಡಿದವರು ಪಂಡಿತ ನೆಹರು.ಪಂಚವಾರ್ಷಿಕ ಯೋಜನೆಗಳು, ಅಲಿಪ್ತ ನೀತಿಯ ಮೂಲಕ ಭಾರತ ಎಲ್ಲ ರಂಗದಲ್ಲಿಯೂ ಉನ್ನತ್ತಿ ಸಾಧಿಸಲು ಕಾರಣರಾದರು.ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.

ಬಿಜೆಪಿ ಪಕ್ಷದವರು ನೆಹರು ಕುಟುಂಬವನ್ನು ಬದ್ದ ವೈರಿಗಳಂತೆ ಭಾವಿಸಿ,ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯ.ತಮ್ಮ ಪತ್ನಿ ಕಮಲ ನೆಹರು ಅವರ ಅನಾರೋಗ್ಯದ ನಡುವೆಯೂ ದೇಶದ ಸ್ವಾತಂತ್ರಕ್ಕಾಗಿ 9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಅಪ್ಪಟ ಸ್ವಾತಂತ್ರ ಸೇನಾನಿ.ಸ್ವಾತಂತ್ರ ಹೋರಾಟದಲ್ಲಿ ಪಟೇಲರು ಮಂಜೂಣಿ ಯಲ್ಲಿದ್ದರೂ ಕೂಡ, ಅವರ ಆನಾರೋಗ್ಯವನ್ನು ಪರಿಗಣಿಸಿ, ಅವರಿಗೆ ಪ್ರಧಾನಿ ಅವಕಾಶ ನೀಡಲಿಲ್ಲ.ಸ್ವಾತಂತ್ರ ಬಂದ ಕೇವಲ ಮೂರು ವರ್ಷಗಳಲ್ಲಿಯೇ ಪಟೇಲರು ಸಾವನ್ನಪ್ಪಿದರು.ಇತಿಹಾಸ ಗೊತ್ತಿಲ್ಲದ ಬಿಜೆಪಿಗರು ಸುಳ್ಳನ್ನೇ ಸತ್ಯವೆಂದು ನಂಬಿಸಲು ಹೋರಾಡುತ್ತಿದ್ದಾರೆ.ಪಟೇಲ್‍ರು ರಕ್ಷಣಾ ಮಂತ್ರಿಯಾಗಿದ್ದಾಗ ಆರ್.ಎಸ್.ಎಸ್‍ನ್ನು ಬ್ಯಾನ್ ಮಾಡಿದ್ದರು.ಈ ಸತ್ಯವನ್ನು ಎಲ್ಲರಿಗೂ ತಿಳಿಸಬೇಕಿದೆ.ಬಿಜೆಪಿಯ ಹುನ್ನಾರಗಳ ವಿರುದ್ದ ಕಾಂಗ್ರೆಸ್ ಪಕ್ಷ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಕೆಂಚಮಾರಯ್ಯ ನುಡಿದರು.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ರಾಹುಲ್‍ಗಾಂಧಿ ಅವರು ಏಕಾಂಕಿಯಾಗಿ ನಿರಂತರ ಹೋರಾಟ ನಡೆಸುತಿದ್ದಾರೆ.ಭಾರತ ಜೋಡೋ ಯಾತ್ರೆ, ಭಾರತ್ ನ್ಯಾಯಯಾತ್ರೆ ಮೂಲಕ ಬಿಜೆಪಿಯ ದೇಷದ ವಿರುದ್ದ ಪರಸ್ವರ ಪ್ರೀತಿಯ, ಬೆಸೆಯುವ ಹೋರಾಟ ನಡೆಸುತಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟಾಚಾರವಿದೆ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಭ್ರಷ್ಟಾಚಾರ ಮಾಡಿದವರನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ.ಚಲವಾದಿ ನಾರಾಯಣಸ್ವಾಮಿಯನ್ನು ದಲಿತ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತದೆ.ಯಾವ ಮನುವಾದದ ವಿರುದ್ದ ಅಂಬೇಡ್ಕರ್ ಹೋರಾಟ ಮಾಡಿದ್ದರೋ, ಆದೇ ಮನುವಾದವನ್ನು ಅಪ್ಪಿಕೊಂಡು, ಅವರ ಚಡ್ಡಿಗಳನ್ನು ಹೊತ್ತು ಮೆರವಣಿಗೆ ನಡಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಂಚಮಾರಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ ಮಾತನಾಡಿ,ದೇಶಕ್ಕೆ ಸ್ವಾತಂತ್ರ ಬಂದಾಗ ಬಡತನವನ್ನೇ ಹೊದ್ದು ಮಲಗಿದ್ದ ರಾಷ್ಟ್ರವನ್ನು ತನ್ನ ದೂರದೃಷ್ಠಿ ನಾಯಕತ್ವದಿಂದ ಮುಂದುವರೆದ ರಾಷ್ಟ್ರಗಳ ಪಾಲಿಗೆ ಕೀರ್ತಿ ನೆಹರು ಅವರಿಗೆ ಸಲ್ಲುತ್ತದ್ತೆ.ಅಂದು ನೆಹರು ಕುಟುಂಬ ಕಟ್ಟಿ ಭದ್ರ ತಳಹದಿಯ ಮೇಲೆ,ಇಂದು ಭಾರತ ಒಂದೊಂದೇ ಆಭಿವೃದ್ದಿ ಕಾಣಲು ಸಾಧ್ಯವಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಸಿಮೆಂಟ್ ಮಂಜಣ್ಣ, ನರಸೀಯಪ್ಪ, ಷಣ್ಮುಖಪ್ಪ, ಶಿವಾಜಿ ಅವರುಗಳು ಮಾತನಾಡಿದವರು. ಈ ವೇಳೆ ಹಿರಯರಾದ ರೇವಣ್ಣ ಸಿದ್ದಯ್ಯ,ಸಂಜೀವಕುಮಾರ್,ಸಿದ್ದಲಿಂಗೇಗೌಡ,ತುಮುಲ್ ನಿರ್ದೇಶಕ ನಾಗೇಶಬಾಬು, ಗಂಗಾಧರ್,ಸುಜಾತ, ಆದಿಲ್,ಇರ್ಫಾನ್, ಕವಿತಾ, ಸೌಭಾಗ್ಯ, ಲಕ್ಷ್ಮಿದೇವಮ್ಮ,ಸಿಂಡಿಕೇಟ್ ಸದಸ್ಯ ಶಿವಣ್ಣ, ಓ.ಸಿ.ಕೃಷ್ಣಪ್ಪ, ಕೆಂಪಣ್ಣ, ಕೈದಾಳ ರಮೇಶ್,ಭಾಗ್ಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *