ತುಮಕೂರು ವಿವಿಯಲ್ಲಿ ನೂತನ ಸಂಶೋಧನ ನೀತಿ: ಕುಲಪತಿ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವು ಸಂಶೋಧನೆಗೆ ವಿಶೇಷ ಪ್ರೋತ್ಸಾಹ ನೀಡುವ ಉದ್ದೇಶದಿಂದ ತನ್ನದೇ ಆದ ಸಂಶೋಧನ ನೀತಿಯನ್ನು ಜಾರಿಗೆ ತಂದಿದೆ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಯೋಜನಾ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ (ಪಿ.ಎಂ.ಇ.ಬಿ) ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶದ (ಐ.ಕ್ಯೂ.ಎ.ಸಿ) ವತಿಯಿಂದ ಶುಕ್ರವಾರ ಆಯೋಜಿಸಿದ್ದ, ವೈಜ್ಞಾನಿಕ ಸಂಶೋಧನಾ ಪ್ರಬಂಧ ಬರವಣಿಗೆಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.

ತುಮಕೂರು ವಿಶ್ವವಿದ್ಯಾನಿಲಯವು ಸಂಶೋಧನೆಯಲ್ಲಿ ಉನ್ನತಿಯನ್ನು ಸಾಧಿಸಿ ದೇಶದಲ್ಲೇ ಉತ್ತಮ ವಿಶ್ವವಿದ್ಯಾನಿಲಯ ಎನಿಸಿಕೊಳ್ಳಬೇಕು ಎಂಬ ಕನಸಿದೆ. ಇದಕ್ಕೆ ಪೂರಕವಾಗಿ ವಿವಿಯ ಸಂಶೋಧನ ನೀತಿ ಕೆಲಸ ಮಾಡಲಿದೆ ಎಂದರು.

ವಿಶ್ವವಿದ್ಯಾನಿಲಯದ ಅಧ್ಯಾಪಕರ ಪ್ರಬಂಧಗಳು ವಿಶ್ವಮಟ್ಟದ ಶ್ರೇಷ್ಠ ನಿಯತಕಾಲಿಕೆಗಳು ಪ್ರಕಟವಾದರೆ ವಿಶೇಷ ಸಂಭಾವನೆ ನೀಡಲಾಗುವುದು. ಅಧ್ಯಾಪಕರು ಗುಣಮಟ್ಟದ ಪುಸ್ತಕಗಳನ್ನು ಬರೆದರೆ ವಿವಿಯೇ ಪ್ರಕಟಣೆಯ ಖರ್ಚು ವೆಚ್ಚಗಳನ್ನು ಭರಿಸಲಿದೆ ಎಂದರು.

ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಅಂಡ್ ಪಾಲಿಸಿ ರಿಸರ್ಚ್ ಇನ್ಸ್‍ಟಿಟ್ಯೂಟಿನ ಸಂಶೋಧನ ವಿಜ್ಞಾನಿ ಡಾ. ಎ. ಕೆ. ಚಕ್ರವರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ಕುಲಸಚಿವೆ ನಾಹಿದಾ ಜûಮ್ ಜûಮ್, ಐ.ಕ್ಯೂ.ಎ.ಸಿ ನಿರ್ದೇಶಕ ಪೆÇ್ರ. ರಮೇಶ್ ಬಿ., ಪಿ.ಎಂ.ಇ.ಬಿ ನಿರ್ದೇಶಕ ಪೆÇ್ರ. ಬಿ.ಟಿ ಸಂಪತ್ ಕುಮಾರ್, ಡಾ. ಡಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *