ಲಿಂಗ ತಾರತಮ್ಯ ಬೇಡ: ನಹೀದಾ ಜಮ್ ಜಮ್

ತುಮಕೂರು: ಸಮಾಜದಲ್ಲಿ ಲಿಂಗ ತಾರತಮ್ಯ ಬೇಡ. ಸಮಾಜ ಪುರುಷ ಪ್ರಧಾನ ವಾಗಬಾರದು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಸಾಮಥ್ರ್ಯ ಮೀರಿ ಕೆಲಸ ನಿರ್ವಹಿಸುತ್ತಿದ್ದು, ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸತತ ಪ್ರಯತ್ನ ಮಾಡಿದರೆ ಗುರಿ ಸರಳವಾಗಿ ತಲುಪಬಹುದು ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲ ಸಚಿವರಾದ ನಹೀದಾ ಜಮ್ ಜಮ್ ಅವರು ಕರೆ ನೀಡಿದರು.

ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಎಚ್ ಎಂ ಗಂಗಾಧರಯ್ಯ ಸ್ಮಾರಕ ಉಪನ್ಯಾಸಮಾಲೆ-12ರಲ್ಲಿ “ಮಹಿಳಾ ಸಬಲೀಕರಣ ಒಂದು ಚರ್ಚೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳಾ ಸಬಲೀಕರಣದ ಕುರಿತಾಗಿ ಇಂದಿನ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದರು.

ತುಮಕೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ. ಜ್ಯೋತಿ ಅವರು, ಜಗತ್ತಿನಲ್ಲಿ ಮೊದಲಿಗೆ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು ಹೆಣ್ಣು ಮಕ್ಕಳು. ಪುರುಷರು ಆಹಾರ ಹುಡುಕಿಕೊಂಡು ಅಲೆದಾಡುವಾಗ ಮಹಿಳೆಯರು ಅವರು ಇರುವ ಸ್ಥಳದಲ್ಲೇ ಬೀಜಗಳನ್ನು ಭಿತ್ತಿ ಉಳುಮೆ ಮಾಡಿ ಆಹಾರ ಸಿದ್ಧಪಡಿಸುತ್ತಿದ್ದರು. ಇಂದು ಶಿಕ್ಷಣದಲ್ಲೂ ಕೂಡಾ ಹೆಣ್ಣು ಮಕ್ಕಳು ಮುಂಚೂಣಿಯಲ್ಲಿದ್ದಾರೆ. ಆರ್ಥಿಕವಾಗಿ, ರಾಜಕೀಯವಾಗಿ ಮಹಿಳೆಯರು ಮುಂದೆ ಬರಬೇಕು ಎಂದು ತಿಳಿಸಿದರು.


ಎಸ್ ಎಸ್ ಐ ಟಿ ಯ ಗಣಕ ತಂತ್ರಜ್ಞಾನದ ಮುಖ್ಯಸ್ಥರಾದ ಡಾ. ರೇಣುಕಾಲತಾ ಎಸ್ ಅವರು, ಹೆಣ್ಣು ಮಕ್ಕಳು ಎರಡು ಕಾರ್ಯ ಕ್ಷೇತ್ರದಲ್ಲಿ ಸಮಾನವಾಗಿ ಕೆಲಸ ನಿರ್ವಹಿಸುತ್ತಾರೆ, ಒಂದು ವೃತ್ತಿಪರದಲ್ಲಿ ಮತ್ತೊಂದು ಕುಟುಂಬವನ್ನು ನೋಡಿಕೊಳ್ಳುವುದರಲ್ಲಿ. ಪ್ರಸ್ತುತ ದೇಶದ ರಾಷ್ಟ್ರಪತಿ ಮಹಿಳೆಯಾಗಿರುವುದು ಹೆಮ್ಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ರಮೇಶ್ ಮಣ್ಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಯ್ರ್ರಮದಲ್ಲಿ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ ಪಿ, ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಲತಾ ಬಿ ಎಸ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ ಟಿ ಮುದ್ದೇಶ್, ಅಧ್ಯಾಪಕರಾದ ಪ್ರೊ ಸಯ್ಯದ್ ಬಾಬು, ಆಶಾ ಎಚ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *