ತುಮಕೂರು : ಮೀಸಲಾತಿಯನ್ನು ಇಷ್ಟು ದಿನ ಹೆಚ್ಚು ಉಂಡವರು ಬಹಿರಂಗ ಚರ್ಚೆಗೆ ಬರುವಂತೆ ಮೀಸಲಾತಿ ಪಡೆದಿರುವ ಸಚಿವರುಗಳಿಗೆ ಅಲೆಮಾರಿ ಸಮುದಾಯದ ಹಂದಿಜೋಗಿ ಸಂಘ ಆಗ್ರಹಿಸಿದೆ.

ಅಲೆಮಾರಿ ಸಮುದಾಯಗಳು ಇಂದಿಗೂ ಒಂದು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿಯಿದ್ದು, ಅವರಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸವಲತ್ತುಗಳು ದೊರೆತ್ತಿರುವುದಿಲ್ಲ. ಅಲೆಮಾರಿಗಳಿಗೆ ಒಂದೂರಿಲ್ಲ, ಕೇರಿಯಿಲ್ಲ, ಮನೆಯಿಲ್ಲ, ಗುಡಿಸಲು, ಡೇರಿಗಳೇ ಅವರಿಗೆ ವಾಸ ಸ್ಥಾನ, ಅವರು ಇಂದಿಗೂ ಹಂದಿ ಸಾಕಾಣಿಕೆ, ಭಿಕ್ಷಾಟನೆ, ಬಾಚಣಿಕೆ ಮಾರಾಟ, ಕೂದಲು ಮಾರಾಟ, ಮುಂತಾದ ಕಸುಬುಗಳನ್ನು ಮಾಡಿಕೊಂಡು ಊರಿಂದ ಊರಿಗೆ ಅಲೆಯುವವರಾಗಿದ್ದರೆ.
ಎಷ್ಟೋ ಜನಕ್ಕೆ ಶಿಕ್ಷಣ ಇಲ್ಲದಿರುವುದರಿಂದ ಅವರಿಗೆ ಮೀಸಲಾತಿ ಇದೆ, ನಾವು ಅಲೆಮಾರಿಗಳು, ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ಸಹ ತಿಳಿದಿಲ್ಲ, ಇಂತಹ ಸಮುದಾಯದ ಮೀಸಲಾತಿಯನ್ನು ಸ್ಪರ್ಶ ಜಾತಿಗಳೊಂದಿಗೆ ಸೇರಿಸಿ ಪಡೆದುಕೊಳ್ಳಿ ಎಂದು ಸಿದ್ದರಾಮಯ್ಯ ಸಂಪುಟದ ಸಚಿವರುಗಳು ಬೀದಿ ರಂಪ ಮಾಡಿ ಸೇರಿಸಿರುವುದು ಘನ ಘೋರವಾದ ಅನ್ಯಾಯವೆಂದು ಸಂಘ ಖಂಡಿಸಿದೆ.

ಹೆಚ್ಚು ಮೀಸಲಾತಿ ಪಡೆದುಕೊಂಡಿರುವ, ಪಡೆಯುತ್ತಿರುವ ಸಚಿವರುಗಳಿಗೆ ಮಾನವೀಯತೆಯ ಮನುಷ್ಯ ಗುಣವಿದ್ದರೆ, ಅವರು ಮನುಷ್ಯರಾಗಿದ್ದರೆ ಅಲೆಮಾರಿ ಸಮುದಾಯಕ್ಕೆ ನೀಡಬೇಕಾದ ಒಳಮೀಸಲಾತಿ ನೀಡಿ ಪುಣ್ಯ ಕಟ್ಟಿಕೊಂಡು ಅಲೆಮಾರಿಗಳು ಸಮಾಜದಲ್ಲಿ ಮನುಷ್ರಂತೆ ಬಾಳಲು ಅನುಕೂಲ ಮಾಡಿ ಕೊಡಲಿ.
ಮೀಸಲಾತಿ ಕಲ್ಪಿಸಿದಂದಿನಿಂದ ಇಂದಿನವರೆಗೂ ರಾಜಕೀಯ ಮೀಸಲಾತಿಯಾಗಲಿ, ಉದ್ಯೋಗ ಮೀಸಲಾತಿಯಾಗಲಿ ಪಡೆದುಕೊಳ್ಳದೆ ಕತ್ತಲೆಯಲ್ಲಿ ಕೊಳೆಯುತ್ತಿವೆ, ಇಂತಹ ಸಮುದಾಗಳ ಸಂವಿಧಾನ ಬದ್ಧ ಹಕ್ಕು ರಣ ಹದ್ದು ಕಿತ್ತುಕೊಂಡಂತೆ ಕಿತ್ತುಕೊಂಡಿರುವುದು ಕರುಣೆ, ಪ್ರೀತಿ, ಮೈತ್ರಿ ಇಲ್ಲದವರಾಗಿದ್ದು, ಮಾನ್ಯ ಮೀಸಲಾತಿಯಡಿ ಆಯ್ಕೆಯಾಗಿರುವ ಸಚಿವರುಗಳು ಧಮ್ಮಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಅಲೆಮಾರಿ ಸಮುದಾಯಗಳು ಸವಾಲು ಹಾಕಿವೆ.
ನಿಮಗೂ ಹೃದಯವಿದ್ದರೆ ಈ ತಾರತಮ್ಯವನ್ನು ಸರಿ ಪಡಿಸಿ ಸಾಮಾಜಿಕ ನ್ಯಾಯಕ್ಕೆ ಮುಂದಾಗುವಂತೆ ಹಂದಿಜೋಗಿ ಸಂಘ ಆಗ್ರಹಿಸಿದೆ.
ನೀವು ಈ ರೀತಿ ಅನ್ಯಾಯ ಮಾಡುವುದಿದ್ದರೆ ನಿವೃತ್ತ ನ್ಯಾಮೂರ್ತಿ ನಾಗಮೋಹ ದಾಸ್ ಆಯೋಗವನ್ನು ಏಕೆ ಮಾಡಿದ್ರೆ, ಮಾಡಿದ್ದರಿಂದ ಯಾರಿಗೆ ಲಾಭ ಆಯಿತು, ಯಾರು ಹೆಚ್ಚು ರಾಜಕೀಯ ಅಧಿಕಾರ, ಉದ್ಯೋಗದ ಅಧಿಕಾರ ಪಡೆದಿದ್ದಾರೋ ಅವರಿಗೆ ಹೆಚ್ಚು ಲಾಭವಾಗಿದೆ.
ಒಳಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಅಲೆಮಾರಿ ಸಮುದಾಯಕ್ಕೆ ಸರಿಪಡಿಸದಿದ್ದರೆ ಅದರ ಫಲವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ವಂಚನೆ ಹೇಗಾಗಿದೆ ಎಂಬುದು ಈ ಕೆಳಗಿನಂತೆಇದೆ.
ಸ್ವರ್ಗ ಹಾಳಾದರೂ ಸರಿಯೇ, ಆದರೆ ನ್ಯಾಯ ಸಿಗಲಿ’ (Fiat justitia ruat caelum) ಎನ್ನುವ ನ್ಯಾಯಪ್ರಜ್ಞೆಯನ್ನು ಮರೆತ ಸರ್ಕಾರದ ವಂಚನೆಗಳು
ಅತಿ ಹಿಂದುಳಿದಿರುವಿಕೆಗೆ ಆದ್ಯತೆ ಕೊಡುವ ಒಳಮೀಸಲಾತಿ ಕುರಿತ ಸುಪ್ರೀಂಕೋರ್ಟ್ ತೀರ್ಪಿನ preferential reservation ನೀತಿಯನ್ನು ಉಲ್ಲಂಘಿಸಲಾಗಿದೆ.
ನಾಗಮೋಹನದಾಸ್ ವರದಿಯನ್ನು ನಿರ್ಲಕ್ಷಿಸಲಾಗಿದೆ.(ಇದಕ್ಕಾಗಿ 17 ಕೋಟಿ ವೆಚ್ಚ ಮಾಡಿ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದೇಕೆ? ಸಮೀಕ್ಷೆ ನಡೆಸಿದ್ದೇಕೆ?)
ಅಂಚಿನಲ್ಲಿರುವ ಸಮುದಾಯಗಳು ಕೇಂದ್ರದತ್ತ ಚಲಿಸುವ ಸಾಮಾಜಿಕ ನ್ಯಾಯದ ಆಶಯವನ್ನು ಅಂಚಿನಿಂದಲೇ ತಳ್ಳಲಾಗಿದೆ
ಕೊನೆಗೂ ತಮ್ಮ ರಾಜಕಾರಣದ ಮೇಲಾಟಕ್ಕೆ ಅತಿ ಹಿಂದುಳಿದ ಸಮುದಾಯಗಳನ್ನು ಬಲಿ ಮಾಡಿದ್ದೀರಿ.
ಎಂಪಿರಿಕಲ್ ದತ್ತಾಂಶ ಎನ್ನುವ ತಾತ್ವಿಕತೆಯೇ ನಗೆಪಾಟಲಿಗೆ ಈಡಾಗಿದೆ. ಇದರ ಹೆಸರಿನಲ್ಲಿ ಅತಿ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯದ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ
ಕಡೆಗೂ ಈ 6, 6, 5 ಹಂಚಿಕೆ ಸುಪ್ರೀಂಕೋರ್ಟ್ ನಲ್ಲಿ ನಿಲ್ಲುತ್ತದೆಯೇ ಎನ್ನುವ ಚಿಂತನೆಯನ್ನು ಸಹ ಮಾಡಲಿಲ್ಲವೇ?
ಮಾನ್ಯ ಮುಖ್ಯಮಂತ್ರಿಗಳೇ ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ನೀವು ಈಗ ಮಾಡಿದ್ದೇನು? ದನಿ ಇಲ್ಲದವರಿಗೆ ದನಿಯಾಗುವುದು ಅಂದರೆ ಅವರ ಪ್ರಾತಿನಿಧ್ಯ ಅವಕಾಶವನ್ನು ಕಿತ್ತುಕೊಳ್ಳುವುದು ಎಂದರ್ಥವೇ? ಠಿಡಿeಜಿeಡಿeಟಿಣiಚಿಟ ಡಿeseಡಿvಚಿಣioಟಿ ಗೆ ತಿಲಾಂಜಲಿ ಇಟ್ಟು ಸಾಧಿಸಿದ್ದೇನು?
ಮಾನವೀಯ ನೆಲೆಯೊಳಗೆ ಮೀಸಲಾತಿ ಹೆಚ್ಚು ಪಡೆದಿರುವ ಸಮುದಾಯಗಳು ಚಿಂತಿಸಿ, ಅಲೆಮಾರಿ ಸಮುದಾಯಗಳ ಹಕ್ಕನ್ನು ನೀಡಿದರೆ ಅಂಬೇಡ್ಕರ್ ಅವರ ಸಮಾನತೆಯನ್ನು ಕಾಪಾಡಿದಂತಾಗುತ್ತದೆ ಎಂದು ಹಂದಿಜೋಗಿ ಸಂಘ ಆಗ್ರಹಿಸಿದೆ.
59 ಸಣ್ಣ ಜಾತಿಗಳ ಅನ್ನಕ್ಕೆ ಕಲ್ಲು ಬಿದ್ದರೆ, ಅವರನ್ನು ಬೀದಿಗೆ ತಣ್ಣಿದರೆ ಇಂದಲ್ಲ ನಾಳೆ ಅವರ ಬತ್ತಿದ ಕಣ್ಣೀರು, ಹಸಿವು ಸುಮ್ಮನೆ ಬಿಡಲಾರದು ಎಂದು ಎಚ್ಚರಿಸಿದ್ದಾರೆ.