ನ.19 ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಆಯೋಗದ ಪ್ರಥಮ ವರದಿ ಸಲ್ಲಿಕೆಯ ಸುವರ್ಣ ಮಹೋತ್ಸವ ಸವಿನೆನಪಿಗಾಗಿ ಆಯೋಗದ ಮೊದಲ ಅಧ್ಯಕ್ಷರಾದ ಎಲ್.ಜಿ.ಹಾವನೂರು ಅವರ ಪ್ರತಿಮೆ ಅನಾವರಣವನ್ನು ಬೆಂಗಳೂರು ವಸಂತ ನಗರದ ಮಿಲ್ಲರ್ಸ್ ಬ್ಯಾಂಕ್ ಬೆಡ್ ಏರಿಯಾದ ದೇವರಾಜ ಅರಸು ಭವನದಲ್ಲಿ ನವೆಂಬರ್ 19ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಎಲ್.ಜಿ.ಹಾವನೂರು ಅವರ ಪ್ರತಿಮೆ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿದ್ದು, ಅಧ್ಯಕ್ಷತೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್.ತಂಗಡಗಿ ವಹಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಸಚಿವರುಗಳಾದ ರಾಮಲಿಂಗರೆಡ್ಡಿ, ಕೆ.ಜೆ.ಜಾರ್ಜ್, ದಿನೇಶ್ ಗುಂಡುರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್, ವಿರೋಧ ಪಕ್ಷದ ನಾಯಕರುಳಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಶಾಸಕರಾದ ರಿಜ್ವಾನ್ ಹರ್ಷದ್, ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಭಾಗವಹಿಸುವರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಎಲ್.ಜಿ.ಹಾವನೂರು ಪ್ರತಿಮೆ ಕೊಡುಗೆದಾರರಾದ ಪ್ರೊ.ರವಿವರ್ಮಕುಮಾರ್ ಉಪಸ್ಥಿತರಿರುವರು, ಈ ಸಂದರ್ಭದಲ್ಲಿ ಪುರಾತತ್ವ ಶಾಸ್ತ್ರಜ್ಞರು ಹಾಗೂ ಶಿಲ್ಪಿಗಳಾದ ಪುಟ್ಟಸ್ವಾಮಿ ಗುಡಿಗಾರ ಅವರನ್ನು ಸನ್ಮಾನಿಸಲಾಗುವುದು

Leave a Reply

Your email address will not be published. Required fields are marked *