ತುಮಕೂರು : ವಿವಿಧ ಕ್ಷೇತ್ರಗಳಿಂದ ವಿವಿಧ ಪ್ರಶಸ್ತಿಗಳಿಗೆ ಪುರಸ್ಕøತರಾದವರಿಗೆ ತುಮಕೂರಿನ ಕನ್ನಡ ಜನಮನ ವೇದಿಕೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದವರಿಂದ ‘ನಮ್ಮನ್ನು ನಾವು ಗೌರವಿಸಿಕೊಳ್ಳೋಣ’ ಅಭಿನಂದನಾ ಕಾರ್ಯಕ್ರಮವನ್ನು ನವೆಂಬರ್ 23ರಂದು ಸಂಜೆ 4ಗಂಟೆಗೆ ಟೌನ್ ಹಾಲ್ ವೃತ್ತದ ಮುರುಘರಾಜೇಂದ್ರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಚರಕ ಆಸ್ಪತ್ರೆಯ ಡಾ||ಬಸವರಾಜು ವಹಿಸಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಮಕೂರು ವಿ.ವಿ.ಯ ಕುಲಸಚಿವರಾದ ಶ್ರೀಮತಿ ನಾಹಿದ ಝಮ್ ಝಮ್, ಚಿಂತಕರಾದ ಪ್ರೊ.ಕೆ.ದೊರೈರಾಜ್, ಸಾಹಿತಿ ನಟರಾಜ್ ಬೂದಾಳ್, ದಸಂಸನ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ, ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ,ಹೆಚ್.ಶಿವಕುಮಾರ್, ಕೈಗಾರಿಕೋದ್ಯಮಿ ಡಿ.ಟಿ.ವೆಂಕಟೇಶ್, ಕವಿ ವಿ.ಎಲ್.ನರಸಿಂಹಮೂರ್ತಿ ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿ ಪುರಸ್ಕøತರಾಗಿರುವ ಅಗ್ರಹಾರ ಕೃಷ್ಣಮೂರ್ತಿ, ಪ್ರಭು ಹರಸೂರು, ಶ್ರೀಮತಿ ವಡ್ಡಗೆರೆ ಕದರಮ್ಮ, ಕರೀಗೌಡ ಬೀಚನಹಳ್ಳಿ, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುಕುಂದ.ಎಲ್, ತುಂಬಾಡಿ ರಾಮಣ್ಣ, ಎಂ.ಸಿ.ನರಸಿಂಹಮೂರ್ತಿ, ಜಿ.ವಿ.ಆನಂದಮೂರ್ತಿ, ವಾಣಿ ಸತೀಶ್, ಶ್ರೀಮತಿ ಮಲ್ಲಿಕಾ ಬಸವರಾಜು, ಸಿದ್ದಗಂಗಯ್ಯ ಹೊಲತಾಳು, ನಟರಾಜ್ ಹೊನ್ನವಳ್ಳಿ, ವೆಂಕಟಾಚಲ.ಹೆಚ್.ವಿ., ಮಿರ್ಜಾ ಬಶೀರ್, ಶ್ರೀಮತಿ ಪಾವಗಡ ಸಣ್ಣರಂಗಮ್ಮ, ಎಸ್.ಗಂಗಾಧರಯ್ಯ, ರವೀಶ್.ಕೆ.ಎಂ., ವಿಷ್ಣುಕುಮಾರ್.ಎಸ್., ಯಶವಂತ್ ಕಲ್ಮನೆ ಇವರುಗಳನ್ನು ಸನ್ಮಾನಿಸಲಾಗುವುದು ಸಂಚಾಲನ ಸಮಿತಿ ತಿಳಿಸಿದೆ.