ಎನ್‍ಎಸ್‍ಎಸ್ ಶಿಬಿರಗಳು ನಾಯಕತ್ವ ಗುಣಗಳನ್ನು ಬೆಳಸುತ್ತವೆ

ತಿಪಟೂರು: ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೆÇೀಷಕ ಸಂಘದ ಅಧ್ಯಕ್ಷರಾದ ಬಿಲ್ಲೆಮನೆ ಚಂದ್ರಶೇಖರ್ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ 2023-24ನೇ ಸಾಲಿನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ನಿಮ್ಮ ಜೀವನವನ್ನು ಧೈರ್ಯದಿಂದ ಎದುರಿಸಲು ಮತ್ತು ನಿಮ್ಮ ಕಾಲ ಮೇಲೆ ನೀವು ನಿಲ್ಲಲು ಇಂತಹ ಶಿಬಿರಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

2007ರಲ್ಲಿ ಪ್ರಾರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಾಲ್ಕು ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿರುವುದು ಕಲ್ಪತರುನಾಡಿನ ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಿ ಕಾಲೇಜಿಗೆ ಮತ್ತು ನಿಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರು ತಂದುಕೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಪೆÇ್ರ. ಕುಮಾರಸ್ವಾಮಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧೀಜಿಯವರ ಕನಸಿನ ಯೋಜನೆಯಾಗಿತ್ತು. ಗ್ರಾಮದ ಸ್ವಚ್ಛತೆ, ಅಭಿವೃದ್ಧಿ, ಗ್ರಾಮೀಣ ಜನರಿಗೆ ಅರಿವು ಮೂಡಿಸುವುದು ಈ ಯೋಜನೆಯ ಗುರಿಯಾಗಿದೆ. ಈ ಗುರಿಯನ್ನು ನೀವು ತಲುಪಿದ್ದೀರಿ, ಇದರ ಜತೆಗೆ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೊಬಗನ್ನು ಪರಿಚಯಿಸುವುದು, ನಾಯಕತ್ವ ಗುಣಗಳನ್ನು ಬೆಳೆಸಲು ಎನ್‍ಎಸ್‍ಎಸ್ ಸಹಕಾರಿಯಾಗಿದೆ ಎಂದರು.

ಅರಣ್ಯ ಸಮಿತಿಯ ಅಧ್ಯಕ್ಷ ನಾಗರಾಜು ಮಾತನಾಡಿ, ಇಂದು ಜಗತ್ತಿನಲ್ಲಿ ಒಬ್ಬರನ್ನು ಬಲಿಯಾಗಿಸಿ ಇನ್ನೊಬ್ಬರ ಬದುಕುವ ಸ್ಥಿತಿಗೆ ತಲುಪಿರುವುದನ್ನು ಹೋಗಲಾಡಿಸಬೇಕಾಗಿದೆ. ಸ್ವಾಮಿ ವಿವೇಕಾನಂದರ ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳು ಅನುಸರಿಸಿದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ ಎಂದರು.

ಸಮಾರಂಭದಲ್ಲಿ ಆದಿನಾಯಕನಹಳ್ಳಿ ಗ್ರಾಮದ ದೇವಾಲಯದ ಉಸ್ತುವಾರಿ ಚಂದ್ರಣ್ಣ, ಟಿ. ಜಯರಾಜ ಸಿಂಗ್, ಕೆಂಪೇಗೌಡರು, ಹೊನ್ನೇಗೌಡರು, ಅಂತಾರಾಷ್ಟ್ರೀಯ ಅಥ್ಲೆಟಿಕ್ ಶಿವಾನಂದ್ ಎಚ್.ಜೆ., ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ.ಎಂ.ಆರ್. ಚಿಕ್ಕೆಹೆಗ್ಗಡೆ, ಡಾ. ಸ್ಮಿತಾ, ಡಾ. ಶಶಿಕುಮಾರ್, ಪೆÇ್ರ. ಭಾರತಿ.ವೈ.ಕೆ., ಡಾ. ಎಲ್.ಎಂ. ವೆಂಕಟೇಶ್, ಜ್ಯೋತಿ, ಸುರೇಶ್, ಡಾ. ರಾಜಶೇಖರ್, ಪತ್ರಿಕೋದ್ಯಮದ ಉಪನ್ಯಾಸಕರಾದ ಶಂಕರಪ್ಪ.ಎಚ್.ಎನ್. ಲಿಖಿತ್, ಶಶಿಕುಮಾರ್ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಮತ್ತು ಆದಿನಾಯಕನಹಳ್ಳಿಯ ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *