ತುಮಕೂರು:ನಗರದ ಜಿಲ್ಲಾ ಛಲವಾದಿ ಮಹಾಸಭಾವತಿಯಿಂದ ಛಲವಾದಿ ಸಾಂಸ್ಕøತಿಕ ಭವನದಲ್ಲಿ ನಡೆದ ಮುಖಂಡರುಗಳ ಸಭೆಯಲ್ಲಿ ಏಪ್ರಿಲ್ 14 ರ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಒಳಮೀಸಲಾತಿಯ ಸಮೀಕ್ಷೆ ಕುರಿತಂತೆ ಸಭೆ ನಡೆಸಿ, ಹಲವಾರು ವಿಚಾರಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಅಚಿತಿಮವಾಗಿ ಪ್ರತಿಸಾರಿಯಂತೆ ಈ ಬಾರಿ ಡಾ.ಬಿ ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತ್ತು .
ಒಳಮೀಸಲಾತಿ ವಿಚಾರದಲ್ಲಿ ತುಮಕೂರು ಜಿಲ್ಲೆಯ ಪ್ರತಿ ಗ್ರಾಮ. ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ನಮ್ಮ ಸಮುದಾಯದ ಬಂಧುಗಳನ್ನು ಬೇಟಿಯಾಗಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಿ, ಜಾತಿ ಪ್ರಮಾಣ ಪತ್ರವನ್ನು ಹೊಂದಿರುವ ತುಮಕೂರು ಜಿಲ್ಲೆಯ ಛಲವಾದಿ ಸಮುದಾಯದ ಕುಲಬಾಂಧವರು ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಒಳಮೀಸಲಾತಿಯ ಜಾತಿ ಸಮೀಕ್ಷೆಯ ಉಪಜಾತಿ ಕಾಲಂನಲ್ಲಿ” ಛಲವಾದಿ ” ಎಂದು ನಮೂದಿಸಲು ತೀರ್ಮಾನಿಸಲಾಯಿತ್ತು .
ಜಿಲ್ಲೆಯಲ್ಲಿ ಒಳಮೀಸಲಾತಿ ಬಗ್ಗೆ ಸಮುದಾಯಕ್ಕೆ ಮಾಹಿತಿಯನ್ನು ನೀಡಲು ಮತ್ತು ಕರಪತ್ರಗಳನ್ನು ತಲುಪಿಸಲು ಜಿಲ್ಲಾ ಮಟ್ಟದಲ್ಲಿ ಒಳಮೀಸಲಾತಿಯ ಉಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ತಾಲೂಕು ಹೋಬಳಿ ಮಟ್ಟದ ಸಮಿತಿ ರಚಿಸಲು ಸೂಚಿಸಲಾಯಿತು.ಅದಷ್ಟು ಶೀಘವಾಗಿ ಜಿಲ್ಲಾ ತಾಲೂಕು, ಸರಕಾರಿ,ಅರೆಸರಕಾರಿ,ನಿವೃತ್ತ ನೌಕರರ ಸಭೆಯನ್ನು ಸಮುದಾಯದ ಹಿರಿಯರ ಮಾರ್ಗದರ್ಶನ ಕರೆಯಲು ತೀರ್ಮಾನಿಸಲಾಯಿತ್ತು . ಸಭೆಯಲ್ಲಿ ಛಲವಾದಿ ಸಮುದಾಯದ ಜಿಲ್ಲಾ,ತಾಲ್ಲೂಕಿನ ಮುಖಂಡರು ಹಾಜರಿದ್ದರು.