ತುಮಕೂರು: ಕಷ್ಟ, ಸುಖಗಳ ನಡುವೆ ಅನೇಕ ಸವಾಲುಗಳನ್ನು ಎದುರಿಸಿ, ಇಳಿಯ ವಯಸ್ಸಿನಲ್ಲಿಯೂ ಹೊಂದಾಣಿಕೆಯಿಂದ ಬದುಕು ನಡೆಸುತ್ತಿರುವ ದಂಪತಿಗಳು ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ ಆಯೋಜಿಸಿರುವ49ನೇ ವರ್ಷದ ಗಣಪತಿ ಉತ್ಸವದಲ್ಲಿ ಹಮ್ಮಿಕೊಂಡಿದ್ದ ಹಳೆಬೇರು, ಹೊಸ ಚಿಗುರು ಕಾರ್ಯಕ್ರಮದಲ್ಲಿ 75 ವರ್ಷ ಪೂರೈಸಿದ ಹಿರಿಯ ದಂಪತಿಗಳಿಗೆ ಅಭಿನಂದಿಸಿ ಮಾತನಾಡುತಿದ್ದ ಅವರು,ಒತ್ತಡದಲ್ಲಿ ಸಣ್ಣ ಪುಟ್ಟ ವಿಚಾರಕ್ಕು ವಿಚ್ಚೇಧನಕ್ಕೆ ಮುಂದಾಗುವ ಕಿರಿಯರು, ಹಿರಿಯರನ್ನು ನೋಡಿ ಕಲಿಯಬೇಕಾಗಿದೆ ಎಂದರು.
ನಗರದ ಹೃದಯ ಭಾಗವಾದ ವಿನಾಯಕನಗರದಲ್ಲಿರುವ ಶ್ರೀಸಿದ್ದಿವಿನಾಯಕ ಸೇವಾ ಮಂಡಳಿ ಹಳೆಯ ಸೇವಾ ಸಂಸ್ಥೆ,ಯಾವ, ತಂಟೆ, ತಕರಾರು ಇಲ್ಲದೆ, ಪ್ರತಿ ವರ್ಷ ತಮ್ಮ ಸೇವಾ ಕೈಂಕರ್ಯಗಳನ್ನು ನಡೆಸುತ್ತಾ, ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆಗೆ, ಹಿರಿಯರನ್ನು ಗೌರವಿಸುವ ಮೂಲಕ ನಮ್ಮ ಸಂಸ್ಕøತಿ, ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದೆ.ಈ ಪೆಂಡಾಲ್‍ಗೆ ಭೇಟಿ ನೀಡಿದರೆ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರೆಯಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.ಪ್ರತಿವರ್ಷ ಒಂದೊಂದು ಥೀಮ್ ಇಟ್ಟುಕೊಂಡು ಗಣೇಶನ ವಿವಿಧ ಪೌರುಷ ಮತ್ತು ಪವಾಡಗಳನ್ನು ದೃಶ್ಯ ರೂಪದಲ್ಲಿ ತೋರಿಸುವ ಮೂಲಕ ಭಕ್ತಿಯೇ ಪ್ರಧಾನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ನಿಜಕ್ಕೂ ಇಂದೊಂದು ಸಂತೋಷದ ವಿಚಾರ ಎಂದರು.
ಹಾಲಪ್ಪ ಪ್ರತಿಷ್ಠಾನದ ಶ್ರೀಮತಿ ಕಲ್ಪನಾ ಹಾಲಪ್ಪ ಮಾತನಾಡಿ,ಸಿದ್ದಿವಿನಾಯಕ ಸೇವಾ ಮಂಡಳಿಯವರ ಪ್ರತಿವರ್ಷ ಒಂದು ಹೊಸ ವಿಷಯವನ್ನು ಇಟ್ಟುಕೊಂಡು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.ಈ ಬಾರಿ ಹಳೆ ಬೇರೆ, ಹೊಸ ಚಿಗುರು ಕೂಡಿದರೆ ಮರಸೊಬಗು ಎಂಬಂತೆ 75 ವರ್ಷಗಳ ಸಾರ್ಥಕ ಬದುಕು ಕಂಡಿರುವ ಹಿರಿಯ ದಂಪತಿಗಳನ್ನು ಅಭಿನಂದಿಸುವ ಮೂಲಕ ಕಿರಿಯರಿಗೆ ಮಾದರಿಯಾಗಿ ತೋರಿಸಿದ್ದಾರೆ.ತಮ್ಮ ದಾಂಪತ್ಯ ಜೀವನದಲ್ಲಿ ಕಷ್ಟು ಸುಖಃಗಳನ್ನು ಹಂಚಿಕೊಂಡು, ಪರಸ್ವರ ಹೊಂದಾಣಿಕೆಯಿಂದ ಬದುಕು ನಡೆಸುತ್ತಿರುವ ಇವರಿಂದ ನಾವುಗಳು ಕಲಿಯುವಂತಹದ್ದು ಬಹಳಷ್ಟಿದೆ.ಇವರ ಜೀವನ ಮತ್ತಷ್ಟು ಸುಖಃಕರವಾಗಿರಲಿ, ನೂರು ವರ್ಷ ಬಾಳುವಂತಾಗಲಿ ಎಂದು ಶುಭ ಹಾರೈಸಿದರು.
ಶ್ರೀಸಿದ್ದಿವಿನಾಯಕ ಸೇವಾ ಮಂಡಳಿಯ ಉಪಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ,ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಲ್ಪಟ್ಟಿದ್ದ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಅಮೃತ ಹಸ್ತದಿಂದ ಆರಂಭವಾದ ಸಿದ್ದಿವಿನಾಯಕ ಸೇವಾ ಮಂಡಳಿ 49ನೇ ವರ್ಷದ ಕಾರ್ಯಕ್ರಮವನ್ನು ಆಯೋಜಿಸಿದೆ.ಈ ಬಾರಿ ಹಾಲಪ್ಪ ಪ್ರತಿಷ್ಠಾನದ ಸಹಕಾರದಲ್ಲಿ ಹಿರಿಯರು,ಕಿರಿಯರ ಸಮಾಗಮಕ್ಕಾಗಿ ಹಳೆಬೇರು, ಹೊಸ ಚಿಗುರು ಎಂಬ ವಿನೂತನ ಕಾರ್ಯಕ್ರಮದ ಮೂಲಕ 75 ವರ್ಷ ಪೂರೈಸಿದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಗುತ್ತಿದೆ.ಕಳೆದ ವರ್ಷ ಸುಮಾರು 75 ಜನ ಗಭೀರ್ಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.ಇಂದು ಸನ್ಮಾನಗೊಳ್ಳುತ್ತಿರುವ ಎಲ್ಲಾ ಹಿರಿಯರ ಪರವಾಗಿ ಹಾಲಪ್ಪ ದಂಪತಿಗಳಿಗೆ ಶುಭ ಕೋರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಿವಿನಾಯಕ ಸೇವಾ ಮಂಡಳಿಯ ಅಧ್ಯಕ್ಷ ಟಿ.ಆರ್.ನಾಗೇಶ್ ಮಾತನಾಡಿ, ಇಂದಿನ ಸಾಂಸ್ಕøತಿಕ ಕಾರ್ಯಕ್ರಮ ಹಳೆಬೇರು,ಹೊಸ ಚಿಗುರು ಎಂಬುದಾಗಿದೆ.ಇಂದು 75 ವರ್ಷ ತುಂಬಿದ 25 ಹಿರಿಯ ದಂಪತಿಗಳಿಗೆ, ಹಾಗೆಯೇ ಮದುವೆಯಾಗಿ ಒಂದು ವರ್ಷವಾಗಿರುವ 25 ಕಿರಿಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.ಇದರ ಪ್ರಮುಖ ಉದ್ದೇಶ, ದಾಂಪತ್ಯವನ್ನು ಗಟ್ಟಿಗೊಳಿಸುವುದು.ಆ ಮೂಲಕ ಭಾರತೀಯ ಸಂಸ್ಕøತಿ, ಪರಂಪರೆಯನ್ನು ಎತ್ತಿ ಹಿಡಿಯುವುದಾಗಿದೆ.ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಪ್ರಾರಂಭಿಸಿದ ಈ ಗಣಪತಿ ಪ್ರತಿಷ್ಠಾನ ಕಾರ್ಯ ಇಂದಿಗೂ ಮುಂದುವರೆದುಕೊಂಡು ಬಂದಿದೆ.ವರ್ಷದಿಂದ ವರ್ಷಕ್ಕೆ ಅಭಿವೃದ್ದಿ ಹೊಂದುತ್ತಾ ಬಂದಿದೆ.ಕಳೆದ ಮೂರು ವರ್ಷಗಳಿಂದ ಹಾಲಪ್ಪ ದಂಪತಿಗಳು ನಮ್ಮ ಜೊತೆ ಕೈಜೋಡಿಸಿ, ಕೆಲಸ ಮಾಡುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಶ್ರೀಸಿದ್ದಿವಿನಾಯಕ ಸೇವಾ ಮಂಡಳಿಯ ಅಧ್ಯಕ್ಷರಾದ ನಾಗೇಶ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಜಗಜೋತಿ ಸಿದ್ದರಾಮಯ್ಯ.ಟಿ.ಎಸ್,ಸಹಕಾರ್ಯದರ್ಶಿ ಎ.ಆರ್.ಶ್ರೀನಾಥ್, ಖಜಾಂಚಿ ನಟರಾಜು, ನಿರ್ದೇಶಕರಾದ ರೇಣುಕಾ ಪರಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.