ಆಗಸ್ಟ್ 28ರಂದು ಬಿ. ಚನ್ನಪ್ಪಗೌರಮ್ಮ “ವಚನ ಸಾಹಿತ್ಯ ಪ್ರಶಸ್ತಿ’’ ಪ್ರದಾನ

ತುಮಕೂರು : ಆಗಸ್ಟ್ 28ರ ಬುಧವಾರ ಬೆಳಿಗ್ಗೆ 10-30 ಕ್ಕೆ ಡಾ. ಬಿ.ಸಿ. ಶೈಲಾನಾಗರಾಜ್ ಸಾಹಿತ್ಯ ಭವನ ಪ್ರಗತಿ ಬಡಾವಣೆ, ಮರಳೂರು, ತುಮಕೂರು. ಇಲ್ಲಿ ಶೈನಾ ಅಧ್ಯಯನ ಸಂಸ್ಥೆ ವಚನ ಅಧ್ಯಯನ ಮತ್ತು ಸಂಶೋದನಾ ಕೇಂದ್ರ, ತುಮಕೂರು ಇವರುಗಳು ಬಿ. ಚನ್ನಪ್ಪಗೌರಮ್ಮ ``ವಚನ ಸಾಹಿತ್ಯ ಪ್ರಶಸ್ತಿ’’ ಪ್ರದಾನ ಸಮಾರಂಭ ಮತ್ತು ನುಡಿನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಪ್ರಜಾಪ್ರಗತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಎಸ್. ನಾಗಣ್ಣ ನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತುಮಕೂರು ಜಿಲ್ಲೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಪ್ರಶಸ್ತಿ ಪುರಸ್ಕøತರಾಗಿರುತ್ತಾರೆ. ಸಾಹಿತಿಗಳಾದ ಡಾ. ಬಿ.ಸಿ. ಶೈಲಾನಾಗರಾಜ್ ನುಡಿನಮನ ಸಲ್ಲಿಸಲಿದ್ದಾರೆ.  ತುಮಕೂರು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷರಾದ ಟಿ. ಮುರುಳಿಕೃಷ್ಣಪ್ಪ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಧ್ಯಕ್ಷರಾದ ಕೆ.ಎಸ್. ಸಿದ್ಧಲಿಂಗಪ್ಪ, ತಿಪಟೂರು ಕದಳಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಎಂ.ಎಸ್. ಸ್ವರ್ಣಗೌರಿ, ಸಮಾಜ ಸೇವಕರಾದ ಶ್ರೀಮತಿ ಸರ್ವಮಂಗಳ ಶಿವರುದ್ರಪ್ಪ  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಂಗಳೂರು ಎಲೆಕ್ಟ್ರೋಲೈನ್ ಮಾಲೀಕರಾದ ಬಿ.ಸಿ. ಸೋಮಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ರುದ್ರಮೂರ್ತಿ ಎಲೆರಾಂಪುರ, ಎಸ್. ರಾಜಶೇಖರ್, ಭವಾನಮ್ಮ ಗುರುಮಲ್ಲಪ್ಪ, ಲಕ್ಷ್ಮೀನರಸಿಂಹಶೆಟ್ಟರು, ನಾಗರತ್ನ ಈಶ್ವರಯ್ಯ, ಸರ್ವಮಂಗಳ ಇವರುಗಳಿಂದ ವಚನ ಗಾಯನವಿರುತ್ತದೆ. ಶೈನಾ ಅಧ್ಯಯನ ಸಂಸ್ಥೆ ಅಧ್ಯಕ್ಷರಾದ ದೊಂಬರನಹಳ್ಳಿ ನಾಗರಾಜ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.

Leave a Reply

Your email address will not be published. Required fields are marked *