ಜ.1ರಂದು ಖಾಯಮಾತಿಗಾಗಿ ಸಿದ್ಧಗಂಗಾ ಮಠದಿಂದ ಅತಿಥಿ ಉಪನಾಸ್ಯಕರ ಪಾದಯಾತ್ರೆ

ತುಮಕೂರು : ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಸುಧಾಕರ್ ಅವರು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದ್ದು, ಅತಿಥಿ ಉಪನ್ಯಾಸಕ ಬೇಡಿಕೆ ಸೇವಾ ಭದ್ರತೆ ಅಥವಾ ಸೇವಖಾಯ ಮಾತಿಯನ್ನು ಬಿಟ್ಟು ,ಸರ್ಕಾರ ಇಡಿ ಗಂಟು, ಪುಡಿಗೆಂಟು ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸುವಲು ಅತಿಥಿ ಉಪನ್ಯಾಸಕರ ಕಣ್ಣವರೆÀಸುವ ತಂತ್ರ ಮಾಡುತ್ತಿರುವುದು ಖಂಡಿಸಿ ನಾವು ಜನವರಿ ದಿ.1 ರಂದು ಬೆಳಗ್ಗೆ 10-30ಕ್ಕೆ ಸಿದ್ದಗಂಗಾ ಮಠದಿಂದ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಆರಂವಾಗಲಿದ್ದೆ ಎಂದು ಜಿಲ್ಲಾಧ್ಯಕ್ಷ ಡಾ. ಧರ್ಮವೀರ ಕೆ.ಎಚ್.ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಎದುರು 38ನೇ ದಿನವೂ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿ ಮುಂದುವರೆದಿದ್ದು ಇಂದಿನ ಪ್ರತಿಭಟನೆಯಲ್ಲಿ ಎಚ್.ಡಿ ಕೋಟೆಯ ಉಪನ್ಯಾಸಕ ಹಠಾತ್ತಾಗಿ ನಿನ್ನೆ ರಾತ್ರಿ ಮೃತಪಟ್ಟಿದ್ದು ಮೃತರÀ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿ, ಶ್ರದ್ಧಾಂಜಲಿ ಸಲ್ಲಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ರಾಜ್ಯ ಸರ್ಕಾರ ನಮ್ಮ ಒಂದೇ ಒಂದು ಬೇಡಿಕೆಯಾದ ಸೇವಖಾಯ ಮಾತಿಯನ್ನು ಬಿಟ್ಟು ನಮಗೆ ಹಿಡಿಗಂಟು ,ವೇತನ ಹೆಚ್ಚಳ ,ಆರೋಗ್ಯ ವಿಮೆ ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಕುತಂತ್ರವನ್ನು ಖಂಡಿಸಿ, ನಮ್ಮ ಸೇವಖಾಯತಿ ಆಗುವವರೆಗೂ ತಮ್ಮ ಪ್ರತಿಭಟನೆಯನ್ನು ಬಿಡುವುದಿಲ್ಲ ಎಂದು ಎಚ್ಚರಿಸುತ್ತಾ. ಈಗಾಗಲೇ ಪೂರ್ವ ನಿರ್ಧಾರವಾಗಿದ್ದಂತೆ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ ಪಾದಯಾತ್ರೆಯನ್ನು ಜನವರಿ ಒಂದನೇ ತಾರೀಕು ರಾಜ್ಯಾದ್ಯಂತ ಎಲ್ಲಾ ಅತಿಥಿ ಉಪನ್ಯಾಸಕರು ಇಲ್ಲಿ ಸಮಾವೇಶಗೊಂಡು ಇಲ್ಲಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಪಾದಯಾತ್ರೆ ಮಾಡಿ ನಂತರ ಅಮರನಾಥ ಉಪವಾಸ ಸತ್ಯಾಗ್ರಹವನ್ನು ಆಚರಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಯ ಮತ್ತು ರಾಜ್ಯಾಧ್ಯಕ್ಷರಾದ ಹನುಮಂತಗೌಡ ಕಲ್ಮನಿಯವರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಜನವರಿ 1 ರಂದ್ದು ಬೆಳ್ಳಗೆ 10.30 ಕ್ಕೆ ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಅವರು ನಮ್ಮ ಪಾದಯಾತ್ರೆಗೆ ಚಾಲನೆ ನೀಡಲಿದ್ದು, ವಿವಿಧ ಸಂಘಟನೆಗಳ ಹೋರಾಟಗಾರರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಜೊತೆಗೆ, ರಾಜ್ಯದ್ಯಂತ ಎಲ್ಲ ಜಿಲ್ಲೆಗಳಿಂದ ಸುಮಾರು 3.ಸಾವಿರ ಅತಿಥಿ ಉಪನ್ಯಾಸಕರು ಬರುವ ನಿರೀಕ್ಷೆಯಿದ್ದು. ಬಸ್ಸು, ಟ್ರೈನ್, ಹಾಗೂ ವಿವಿಧ ವಾಹನಗಳ ಮೂಲಕ ಸಿದ್ದಗಂಗಾ ಮಠಕ್ಕೆ ಬಂದು ಸೇರಲಿದ್ದಾರೆ. ಇಲ್ಲಿಂದ ನಮ್ಮ ಪಾದಯಾತ್ರೆ ದಾವಸ್ ಪೇಟೆಯಲ್ಲಿ ಒಂದನೇ ತಾರೀಕು ರಾತ್ರಿ ತಂಗಿ, ನಂತರ ಎರಡನೇ ತಾರೀಕು ನೆಲಮಂಗಲದ ಶ್ರೀ ಸಿದ್ದಗಂಗಾ ಪದವಿ ಕಾಲೇಜಿನಲ್ಲಿ ವಾಸ್ತವ್ಯೆ ಹುಡಿ ನಂತರ ಮೂರನೇ ತಾರೀಕು ಬೆಂಗಳೂರು ನಗರವನ್ನು ಪ್ರವೇಶಿಸಿ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಮಾಡಿ. ದಿ.4 ರಂದ್ದು ಬೆಂಗಳೂರಿನಲ್ಲಿ ಬೃಹತ್ತಾದ ಸಮಾವೇಶವನ್ನು ನಡೆಯಲ್ಲಿದೆ ಎಂದು ಜಿಲ್ಲಾಧ್ಯಕ್ಷರಾದ ಡಾ. ಧರ್ಮವೀರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *