ಜುಲೈ 16ರಂದು ತುಮಕೂರು ಗ್ರಾಮಾಂತರ ಮಾಜಿ ಶಾಸಕರಿಂದ ಜನ ಸಂಪರ್ಕ ಸಭೆ

ತುಮಕೂರು ಗ್ರಾಮಾಂತರ: ಜುಲೈ 16ರ ಮಂಗಳವಾರ, ಬೆಳಗ್ಗೆ 10:30 ರಿಂದ, ಮದ್ಯಾಹ್ನ 3 ಗಂಟೆಯ ವರೆಗೆ ತುಮಕೂರು ಗ್ರಾಮಾಂತರ ನಿಕಟ ಪೂರ್ವ ಶಾಸಕರು, ಡಿ.ಸಿ ಗೌರಿಶಂಕರ್” ರವರ, ಸಮ್ಮುಖದಲ್ಲಿ, “ಜನ ಸಂಪರ್ಕ” ಕಾರ್ಯಕ್ರಮವನ್ನು ತುಮಕೂರು ಗ್ರಾಮಾಂತರದ “ಕಾಂಗ್ರೆಸ್ ಕಛೇರಿ”, ಶೆಟ್ಟಿಹಳ್ಳಿ ರಿಂಗ್ ರಸ್ತೆ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.

ತುಮಕೂರು ಗ್ರಾಮಾಂತರದ ನಾಗರಿಕರು ಹಾಗು, ರೈತರು,ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು & ಪಕ್ಷದ ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದ್ದು ಈ ಜನ ಸಂಪರ್ಕ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಒಳಪಟ್ಟಂತೆ ಯಾವುದೇ ಅಧಿಕಾರಿಗಳ ಹತ್ತಿರ ಕೆಲಸಗಳು ಇರಬಹುದು, ಮತ್ತು ನಿಮ್ಮ ಕುಂದು ಕೊರತೆಗಳನ್ನು ಬಗೆ ಹರಿಸಿಕೊಳ್ಳಬಹುದಾಗಿದೆ. ಹಾಗೂ ಈ ಕಾರ್ಯಕ್ರಮದಲ್ಲಿ, ದೇವಸ್ಥಾನಗಳಿಗೆ ಹಣ ಕೇಳಲು ಅವಕಾಶ ಇರುವುದಿಲ್ಲ, ಮತ್ತು ಊರ ಹಬ- ನಾಮಕರಣ, ಮತ್ತು ಇತರ ಕಾರ್ಯಕ್ರಮಗಳಿಗೆ, “ಡಿ.ಸಿ ಗೌರಿಶಂಕರ್” ರವರನ್ನು ಆಹ್ವಾನಿಸಲು ಅವಕಾಶವಿರುತ್ತದೆ.

ಕುಂದು ಕೊರತೆಗೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ಮಾಜಿ ಶಾಸಕರ ಕಾರ್ಯಾಲಯ ತಿಳಿಸಿದೆ.

Leave a Reply

Your email address will not be published. Required fields are marked *