ತುಮಕೂರು:ಭಾರತ್ ಸಂಚಾರ ನಿಗಮ ಲಿಮಿಟೆಡ್‍ನ 25ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಇಂದು ರೇಣುಕಾ ವಿದ್ಯಾಪೀಠದ 5-10 ವರ್ಷದ ಮಕ್ಕಳಿಗೆ ಸ್ಮಾರ್ಟ ಲರ್ನಿಂಗ್ ಯೂಸ್ ಬಿಎಸ್‍ಎನ್‍ಎಲ್ ಭಾರತ್ ಫೈಬರ್ ಎಂಬ ವಿಷಯ ಕುರಿತು ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ರೇಣುಕಾ ವಿದ್ಯಾಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆಗೆ ಬಿ.ಎಸ್.ಎನ್.ಎಲ್‍ನ ಡಿ.ಎಂ. ದಿಗಂಬರಕುಮಾರ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು,ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಭಾರತ್ ಸಂಚಾರ ನಿಗಮ ನಿಯಮಿತದ ಉತ್ಪಾಧನೆಗಳನ್ನು ಪರಿಚಯಿಸುವುದು ಹಾಗೂ ಅವುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅಕ್ಟೋಬರ್ 01ರ ಬಿಎಸ್‍ಎನ್‍ಎಲ್ ದಿನದ ಅಂಗವಾಗಿ ರಾಷ್ಟ್ರದಾದ್ಯಂತ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಪ್ರಥಮ ಬಹುಮಾನವಾಗಿ 8500 ರೂ ಮೌಲ್ಯದ ಬಿ.ಎಸ್.ಎನ್.ಎಲ್ 5ಜಿ ಕನೆಕ್ಷನ್, ದ್ವಿತೀಯ ಬಹುಮಾನವಾಗಿ 4250 ಬೆಲೆಯ ಆರು ತಿಂಗಳ 5ಜಿ ಸಂಪರ್ಕ ಮತ್ತು ಮೂರನೇ ಬಹುಮಾನವಾಗಿ 2100 ರೂ ಬೆಲೆಯ ಮೂರು ತಿಂಗಳ 5ಜಿ ಸಂಪರ್ಕವನ್ನು ನೀಡಲಾಗುತ್ತಿದೆ.ಬಿ.ಎಸ್.ಎನ್.ಎಲ್ ಮಾರುಕಟ್ಟೆಯ ವಿಸ್ತರಣೆಯ ಜೊತೆ ಜೊತೆಗೆ, ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ.ಇಂದು ವಿಜೇತ ಮಕ್ಕಳಿಗೆ ಅಕ್ಟೋಬರ್ 01 ರಂದು ನಡೆಯುವ ಬಿ.ಎಸ್.ಎನ್.ಎಲ್. ಡೇ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಈ ವೇಳೆ ಬಿಎಸಎನ್‍ಎಲ್ ಡಿಜಿಎಂ ಪ್ರತಿಭಾ.ಕೆ.ಬಿ, ಎಜಿಎಂ ಅಣ್ಣಾದೊರೈ ಆರ್.ಪಿ, ಜಿಟಿಒ ಲಕ್ಷ್ಮಿಸಾಗರ್ ನಾಯಕ್, ಎಂ.ಟಿ. ಅನೂಫ್ ಬಿ, ರೇಣುಕಾ ವಿದ್ಯಾಪೀಠದ ಕಾರ್ಯದರ್ಶಿ ನಾಗರಾಜು, ಜಂಟಿ ಕಾರ್ಯದರ್ಶಿ ಶಶಿಧರನ್, ಮುಖ್ಯೋಪಾಧ್ಯಾಯರಾದ ದೇವಿಕಾ ಅವರುಗಳು ಪಾಲ್ಗೊಂಡಿದ್ದರು.