ಪತ್ರಕರ್ತ ಹೆಬ್ಬೂರು ಪರಮೇಶ್ ಅವರಿಗೆ ಒನಕೆ ಓಬವ್ವ ಪ್ರಶಸ್ತಿ

ತುಮಕೂರು : ಸುವರ್ಣಪ್ರಗತಿ ಪತ್ರಿಕೆ ಸಂಪಾದಕರಾದ
ಹೆಚ್.ಎಸ್.ಪರಮೇಶ್ ರವರು ಒನಕೆ ಓಬವ್ವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರಿನವರಾದ ಹೆಚ್.ಎಸ್.ಪರಮೇಶ್ ರವರು ಹಿಂದೆ ತುಮಕೂರುವಾರ್ತೆ ಸಂಪಾದಕರಾಗಿದ್ದ ಹೆಚ್.ಎಸ್.ರಾಮಣ್ಣನವರ ಪತ್ರಿಕೆಯಲ್ಲಿ ಫ್ರೂಫ್ ರೀಡರ್, ವರದಿಗಾರ, ಮುದ್ರಕರಾಗಿ ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು, ನಂತರ ಪತ್ರಿಕಾ ಕ್ಷೇತ್ರದ ಎಲ್ಲಾ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

2012 ರಲ್ಲಿ ಇವರದೇ ಮಾಲೀಕತ್ವದ ಶ್ರೀ ಲಕ್ಷ್ಮೀನರಸಿಂಹ ಆಫ್ ಸೆಟ್ ಪ್ರಿಂಟರ್ಸ ಪ್ರಾರಂಭಿಸಿದರು.
ನಂತರ 2014 ರಲ್ಲಿ ಇವರದೇ ಸಂಪಾದತ್ವದ ಸುವರ್ಣಪ್ರಗತಿ ಎಂಬ ದಿನಪತ್ರಿಕೆ ಪ್ರಾರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಮಾಜಿಕವಾಗಿ,ತುಳಿತಕ್ಕೆ ಒಳಗಾದವರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿ, ತಮ್ಮ ಪತ್ರಿಕೆಯಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಕನ್ನಡ ನಾಡು,ನುಡಿ, ಭಾಷೆ ಗಾಗಿ ಅನೇಕ ಹೋರಾಟದ ಸಂಘಟನೆಗಳಲ್ಲಿ ಭಾಗವಹಿಸಿದ್ದಾರೆ.
ಪತ್ರಿಕೋದ್ಯಮ ಜೊತೆಗೆ ರಂಗ ಕಲೆಯನ್ನು ಮೈಗೂಡಿಸಿಕೊಂಡಿರುವ ಇವರು ಸಮಾಜದ ಶ್ರೇಯೋಭಿವೃದ್ಧಿ ಶ್ರಮಿಸುತ್ತಿದ್ದಾರೆ.

ಇವರ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2019 ರಲ್ಲಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, 2024 ರಲ್ಲಿ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪತ್ರಿಕೋದ್ಯಮ ಜೊತೆಗೆ ಜಿಲ್ಲೆಯಲ್ಲಿ ಒನಕೆ ಓಬವ್ವ ಜಯಂತಿ ಸಂಘಟನೆಗೆ ಶ್ರಮಿಸಿರುವ ಇವರನ್ನು ನವೆಂಬರ್ 11 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ತುಮಕೂರು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಯುವ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತ ಹೆಬ್ಬೂರು ಪರಮೇಶ್ ಅವರಿಗೆ ಒನಕೆ ಓಬವ್ವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಮತ್ತೊಂದು ಗರಿಮೆ ಮೂಡಿದಂತಾಗಿದೆ.

ಹೆಚ್.ಎಸ್.ಪರಮೇಶ್ವರ್ ಅವರು ಒನಕೆ ಓಬವ್ವ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಮೈತ್ರಿನ್ಯೂಸ್ ಬಳಗವು ತುಂಬು ಪ್ರೀತಿಯಿಂದ ಅಭಿನಂದಿಸಿದೆ.

Leave a Reply

Your email address will not be published. Required fields are marked *