ತಾಂತ್ರಿಕತೆ ರೂಡಿಸಿಕೊಂಡಲ್ಲಿ ಉತ್ತಮ ಪತ್ರಕರ್ತರಾಗಬಹುದು-ಕೆ.ಜೆ.ಮರಿಯಪ್ಪ

ತುಮಕೂರು: ಪತ್ರಕರ್ತರು ತಾಂತ್ರಿಕತೆಯನ್ನು ಮಾಧ್ಯಮ ಕ್ಷೇತ್ರದಲ್ಲಿ ರೂಢಿಸಿಕೊಂಡರೆ ಉತ್ತಮ ಪತ್ರಕರ್ತರಾಗಿ ಹೊರಬಹುದು ಎಂದು ಪ್ರಜಾವಾಣಿ ವರದಿಗಾರರಾದ ಕೆ.ಜಿ.ಮರಿಯಪ್ಪ ಹೇಳಿದರು.

ಅವರು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು “ಕನ್ನಡ ಪತ್ರಿಕಾ ದಿನಾಚರಣೆಯನ್ನು ಎಸ್‍ಎಸ್‍ಐಟಿ ಕ್ಯಾಂಪಸ್‍ನ 2ಡಿ ಲ್ಯಾಬ್‍ನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳು ಹೊರ ತಂದಿದ್ದ ತಂತ್ರಜ್ಞಾನ ಆಧಾರಿತ ಎರಡು ವಿಶೇಷ ಕಾರ್ಯಕ್ರಮಗಳ ಸಾಂಕೇತಿಕ ಪ್ರದರ್ಶನವನ್ನು ಬಿಡುಗಡೆಗೊಳಿಸಿ ವೀಕ್ಷಿಸಿ ಮಾತನಾಡಿದರು.

ಟೆಕ್ನಾಲಜಿಯು ಶೀಘ್ರವಾಗಿ ಮಾಹಿತಿ ಹಾಗೂ ಸುದ್ದಿಗಳನ್ನು ತಿಳಿದುಕೊಳ್ಳಲು ಪ್ರಯೋಜನಕಾರಿಯಾಗಿದೆ. ಈ ತಂತ್ರಜ್ಞಾನದ ಪ್ರಭಾವದಿಂದ ಪತ್ರಕರ್ತರ ಆಲೋಚನೆ, ಬರವಣಿಗೆಯ ಶೈಲಿ ಬದಲಾಗುತ್ತಿದೆ ಎಂದರು.

ಮಾಧ್ಯಮಗಳು ಇವುಗಳ ಪ್ರಭಾವದಿಂದ ಬೇರೆ ಬೇರೆ ರೀತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ. ಇಂದು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಾಗರಿಕ ಪತ್ರಿಕೋದ್ಯಮ ಹೆಚ್ಚಾಗುತ್ತಿದೆ. ಹಾಗೂ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಿಗೆ ಹೊಸ ಹೊಸ ವಿಚಾರಗಳನ್ನು ನೀಡುವಂತಹದ್ದು ಬಹುದೊಡ್ಡ ಸವಾಲಾಗಿದೆ. ಹಾಗಾಗಿ ಪತ್ರಕರ್ತರು ಓದುಗರ ಅಭಿರುಚಿಗೆ ಅನುಗುಣವಾಗಿ ಹೊಸ ಹೊಸ ಮಾಹಿತಿಗಳನ್ನು ನೀಡುವಂತಹ ಕೌಶಲ್ಯ ಪತ್ರಿಕೋದ್ಯಮದ ಯಾವುದೇ ಕ್ಷೇತ್ರದಲ್ಲಿ ಆದರೂ ಉದ್ಯೋಗವನ್ನು ಪಡೆಯಬಹುದು ಎಂದು ಅವರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಿಳಿಸಿದರು.

ಅತಿಥಿಯಾಗಿ ಭಾಗವಹಿಸಿದದೂರದರ್ಶನ ಜಿಲ್ಲಾ ವರದಿಗಾರರಾದ ಈರಣ್ಣ ಅವರು ಮಾತನಾಡಿ ಇತ್ತೀಚಿನ ವಿದ್ಯಾಮಾನದಲ್ಲಿ ತಂತ್ರಜ್ಞಾನದಿಂದ ಸಮಾಜ ಬದಲಾವಣೆ ಹೊಂದುತ್ತಿದ್ದರೂ ಸಹ ಮುದ್ರಣ ಮಾಧ್ಯಮ ಎನ್ನುವಂತಹದ್ದು ತನ್ನ ಗಟ್ಟಿ ನೆಲೆಯನ್ನ ಹೊಂದಿದೆ. ಸರ್ಕಾರವನ್ನ ತಿದ್ದಿ ತೀಡಿ ಸುಸಜ್ಜಿತ ಸಮಾಜವನ್ನಾಗಿ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದರು.

ಇಂದು ಹಳೆಗನ್ನಡ ಪದಗಳು ಕಣ್ಮರೆಯಾಗುತ್ತಿವೆ. ಕೇವಲ ಕೆಲವೇ ಪತ್ರಿಕೆಗಳಲ್ಲಿ ಮಾತ್ರ ಕಾಣಸಿಗುತ್ತಿವೆ. ಇಂದಿನ ಜನರು ನಿರೀಕ್ಷಿಸುತ್ತಿರುವಂತಹದ್ದು ಅಥವಾ ಪತ್ರಿಕೋದ್ಯಮದಲ್ಲಿ ಇಂದು ಅಗತ್ಯವಾಗಿ ಬೇಕಾಗಿರುವಂತಹದ್ದು ಸಾಹಿತ್ಯದ ಜ್ಞಾನ, ಮತ್ತು ಬರವಣಿಗೆ. ಹಾಗಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಪತ್ರಕರ್ತರಾಗಿ ರೂಪುಗೊಳ್ಳಲು ಬರವಣಿಗೆ ಮತ್ತು ಸಾಹಿತ್ಯವನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ ಮುದ್ದೇಶ್, ಎಸ್.ಎಸ್.ಐ.ಬಿ. ಎಂ ನ ಪ್ರಾಂಶುಪಾಲರಾದ ಡಾ. ಮಮತ ಜಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ, ಶ್ವೇತಾ, ಎಂ.ಪಿ, ಕಿರಣ್ ಕೆ. ಎನ್, ವಿನ್ಯಾಸಗಾರಾರಾದ ಶಿವಕುಮಾರ್ ಎಸ್, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಎಸ್‍ಎಸ್‍ಸಿಎಂಎಸ್‍ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *