ತುಮಕೂರು: ಒಳ್ಳೆ ಅಭ್ಯಾಸ ರೂಡಿಸಿಕೊಂಡು ವಿದ್ಯಾರ್ಥಿಗಳು ಪಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಬಿ. ನಂಜುಂಡಪ್ಪ ಅವರು ಕರೆ ನೀಡಿದರು
ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಚಟುವಟಿಕೆ ಕ್ರೀಡೆ, ಎನ್‍ಎಸ್‍ಎಸ್, ಎನ್‍ಸಿಸಿ ಚಟುವಟಿಕೆಗಳ ‘ಗಾನ ಕಲಾ ಸಂಭ್ರಮ -28ರ ವಿಜೇತರಿಗೆ ಸಹುಮಾನ ವಿತರಿಸಿ ಅವರು ಮಾತನಾಡಿದರು.
ಪ್ರಾರಂಭಿಕ ಹಂತದಲ್ಲಿ ಎಲ್ಲವೂ ಕಷ್ಟ. ಆದರೆ ಅದನ್ನು ಕೈ ಬಿಡದೆ ಸತತ ಪ್ರಯತ್ನದಲ್ಲಿದ್ದರೆ ಗುರಿ ತಲುಪಲು ಸಾಧ್ಯ. ಸಮಾಜ ಎಂದರೆ ತರ ತರಹದ ಮಾನವ ಗುಣಗಳು ಇರುತ್ತವೆ. ಜಾತಿ-ಜನಾಂಗ ,ಧರ್ಮದ ಬೇದ-ಭಾವ ಇಲ್ಲದೆ ಐಕ್ಯತೆಗೆ ನಾವು ಹೊಂದಿಕೊಳ್ಳಬೇಕು ಎಂದು ಬಿ. ನಂಜುಂಡಪ್ಪ ಹೇಳಿದರು.
ಏಕಾಗ್ರತೆ, ಭಾವಶುದ್ಧಿ, ತನ್ವಯತೆ ಇವೆಲ್ಲವೂ ಅಳವಡಿಸಿಕೊಂಡರೆ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿ ಆಗಲು ಸಾಧ್ಯ. ಎμÉ್ಟೀ ಹಣ, ಆಸ್ತಿ, ಸಂಪತ್ತು ಇದ್ದರು ನೆಮ್ಮದಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕುಣಿಗಲ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಗೋವಿಂದರಾಯ ಎಂ ಮಾತನಾಡಿ, ಅವರು ಸೋಲು ಗೆಲುವಿನ ಮೆಟ್ಟಿಲು. ಸಂಗೀತ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಆಸಕ್ತಿದಾಯಕವಾದ ಪಠ್ಯದಲ್ಲಿ ನಾವು ತೊಡಗಿ ಉನ್ನತ ಸ್ಥಾನಕ್ಕೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಯಾವ ರೀತಿ ಹೇಗೆ ಸ್ಪರ್ಧಿಸಬೇಕು ಹಾಗೂ ಯಾವ ರೀತಿ ಹಾಡಬೇಕೆಂದು ಸ್ಪರ್ಧಿಸಿದ ಸ್ಪರ್ಧಿಗಳೆಲ್ಲರೂ ಆತ್ಮವಿಶ್ವಾಸದಿಂದ ಸ್ಪರ್ಧಿಸಬೇಕು ಎಂದು ಗಮಕಿ ಶ್ರೀಮತಿ ಸೀತಾ ಲಕ್ಷ್ಮಿ ಶರ್ಮ ತಿಳಿಸಿದರು.
ಪ್ರಾಂಶುಪಾಲರಾದ ಡಾ. ಹೇಮಲತಾ .ಪಿ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಚಿತ್ರಕಲಾವಿದರು ಚನ್ನರಾಯಪಟ್ಟಣಶಿವ ಶಂಕರಪ್ಪ ಜಿಎಸ್, ಪ್ರೊ. ಹನುಮಂತ ರಾಯಪ್ಪ ಜಿ, ಸಹ ಆಡಳಿತಾಧಿಕಾರಿಗಳಾದ ಕೆ.ಎಚ್.ಖಲಂದರ ಪಾಶ, ಸಾಂಸ್ಕøತಿಕ ವಿಭಾಗದ ಕಾರ್ಯದರ್ಶಿಗಳಾದ ಪ್ರೊ. ರಮೇಶ್ ಮಣ್ಣೆ, ಹಾಗೂ ಬೋಧಕರು-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಜನಪದ ಗೀತೆ ,ಭಾವಗೀತೆ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.