ಅಂಗಾಂಗ ದಾನಕ್ಕೆ ಅರಿವು ಮೂಡಿಸಿ ಜೀವ ಉಳಿಸುವ ಕಾರ್ಯವಾಗಬೇಕಿದೆ, ತುಮಕೂರಿನಲ್ಲಿ ಕಿಡ್ನಿ ಸಂಬಂಧಿತ ಓಪಿಡಿ

ತುಮಕೂರು, : ಅಂಗಾಂಗ ದಾನವು ಇಂದು ಭಾರತದ ಅತ್ಯಂತ ನಿರ್ಣಾಯಕ ಸಾರ್ವಜನಿಕ ಆರೋಗ್ಯ ಅಗತ್ಯಗಳಲ್ಲಿಒಂದಾಗಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಅಂಗಾಂಗ ದಾನಕ್ಕೆ ಅರಿವು ಮೂಡಿಸಿ, ಜೀವ ಉಳಿಸುವ ಕಾರ್ಯವಾಗಬೇಕೆದೆ ಎಂದು ಮಿಲ್ಲರ್ಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಮೂತ್ರಪಿಂಡ ತಜ್ಞರು, ಅಂಗಾಂಗ ಕಸಿ ವೈದ್ಯರು ಮತ್ತು ಸಲಹೆಗಾರರಾದ ಡಾ. ರಾಜೀವ್ ಇ.ಎನ್. ಹಾಗೂ ತುರ್ತು ಆರೈಕೆ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರರಾದ ಡಾ.ವಿಜಯಕುಮಾರ್ ಅನಯ್ಯರೆಡ್ಡಿ ಅವರು ಮೂತ್ರಪಿಂಡದ ಕಸಿಯ ಮಹತ್ವವನ್ನು ವಿವರಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರತಿ ವರ್ಷ, ಲಕ್ಷಾಂತರ ರೋಗಿಗಳು ಅಂಗಾಂಗ ವೈಫಲ್ಯಕ್ಕೆ ಗುರಿಯಾಗುತ್ತಾರೆ. ಆದರೆ ಸೀಮಿತ ಅರಿವು, ಕಡಿಮೆ ದಾನಿಗಳ ನೋಂದಣಿ ಮತ್ತು ಲಭ್ಯತೆಯಲ್ಲಿನ ಅಂತರಗಳಿಂದಾಗಿ ಇವರಲ್ಲಿ ಕೇವಲ ಸಣ್ಣ ಪ್ರಮಾಣದ ಜನರು ಮಾತ್ರ ಸಮಯೋಚಿತವಾಗಿ ಅಂಗಾಂಗ ಕಸಿಯನ್ನು ಪಡೆಯಬಲ್ಲರು. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ನಿರಂತರವಾಗಿ ಹೆಚ್ಚುತ್ತಿರುವ ಪ್ರಯತ್ನಗಳ ಹೊರತಾಗಿಯೂ, ಲಭ್ಯತೆ ಮತ್ತು ಅಗತ್ಯದ ನಡುವಿನ ಅಂತರವು ಗಮನಾರ್ಹವಾಗಿ ಮುಂದುವರೆದಿದೆ. ಈ ನಿಟ್ಟಿನಲ್ಲಿ ಸಮುದಾಯ ಮಟ್ಟದ ಭಾಗವಹಿಸುವಿಕೆ ಮತ್ತು ಶಿಕ್ಷಣವು ಅತ್ಯಂತ ಮಹತ್ವಪೂರ್ಣವಾಗಿದೆ. ಅಂಗಾಂಗ ಕಸಿಯಲ್ಲಿ ಕರ್ನಾಟಕವು ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. 2025ರಲ್ಲಿ, 166 ಅಂಗಾಂಗ ದಾನಿಗಳು 800ಕ್ಕೂ ಹೆಚ್ಚು ಅಂಗಾಂಗ ಮತ್ತು ಅಂಗಾಂಶ ಕಸಿಯನ್ನು ಸಾಧ್ಯವಾಗಿಸಿದ್ದಾರೆ. ಆದಾಗ್ಯೂ, ಸುಮಾರು 4,700 ರೋಗಿಗಳು ಮೂತ್ರಪಿಂಡಗಳಿಗಾಗಿ ಕಾಯುತ್ತಿದ್ದಾರೆ ಮತ್ತು ಇನ್ನೂ ಅನೇಕರು ಯಕೃತ್ತು, ಹೃದಯ ಮತ್ತು ಶ್ವಾಸಕೋಶದ ಕಸಿಗಾಗಿ ಕಾಯುತ್ತಿದ್ದಾರೆ, ದಾನಿಗಳ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವು ಇಂದಿನ ತುರ್ತಾಗಿ ಉಳಿದಿದೆ ಎಂದು ತಿಳಿಸಿದರು.

. ‘ಡಯಾಲಿಸಿಸ್ ಪ್ರಕ್ರಿಯೆಯು ಬದುಕುಳಿಯಲು ನೆರವಾಗುತ್ತದೆಯಾದರೂ ದೀರ್ಘಕಾಲೀನವಾಗಿ ಫಲಿತಾಂಶಗಳು ಅಪೇಕ್ಷಣೀಯವಾಗಿರುವುದಿಲ್ಲ.. ಅದೇ ಮೂತ್ರಪಿಂಡ ಕಸಿ ಮಾಡಿದಲಿ… ರೋಗಿಗಳಿಗೆ ಕೇವಲ 2-3 ತಿಂಗಳಲ್ಲಿ ಕೆಲಸಕ್ಕೆ ಮರಳಲು ಅವಕಾಶವನ್ನು ದೊರೆಯುತ್ತದೆ. ಇದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತೆ ಉತ್ಪಾದಕ ಜೀವನವನ್ನು ಆರಂಭಿಸಲು ಅನುವು ಮಾಡಿಕೊಡುತ್ತದೆ,” ಎಂದು ಹೇಳಿದರು.

“ಸುಧಾರಿತ ಮೂಲಸೌಕರ್ಯ, ವಿಶೇಷ ಮೂತ್ರಪಿಂಡ ತಜ್ಞರ ತಂಡ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಸಮಗ್ರ ಆರೈಕೆಯೊಂದಿಗೆ, ಮುಂಬರುವ ಅನೇಕ ವರ್ಷಗಳವರೆಗೆ ಅಂತಹ ರೋಗಿಗಳ ಆರೋಗ್ಯ ಮತ್ತು ಕಸಿಗೆ ಒಳಗಾದ ಅಂಗಾಂಗಗಳ ಉತ್ತಮ ಕಾರ್ಯನಿರ್ವಹಣೆಯನ್ನು ಕಾಯ್ದುಕೊಳ್ಳಲು ನಾವು ರೋಗಿಗಳಿಗೆ ಅನುವು ಮಾಡಿಕೊಡುತ್ತೇವೆ, ” ಎಂದು ಡಾ. ರಾಜೀವ್ ಹೇಳಿದರು.

ಪ್ರಮುಖ ಸವಾಲುಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ವಿಜಯ್ ಕುಮಾರ್ ಅವರು, “ಭಾರತದಲ್ಲಿ, ಮೆದುಳಿನ ಸಾವನ್ನು (ಬ್ರೆನ್ ಸೈಮ್ ಡೆತ್) ಕಾನೂನುಬದ್ದವಾಗಿ ಸಾವು ಎಂದು ಗುರುತಿಸಲಾಗಿದ್ದರೂ, ಆರೋಗ್ಯ ವಲಯದ ಕಾರ್ಯನಿರ್ವಹಿಸುವ ಅನೇಕರಿಗೂ ಸಹ ಬಗ್ಗೆ ತಿಳಿವಳಿಕೆ ಕಡಿಮೆ ಇದೆ ಎಂದು ಹೇಳಿದರು. ಧಾರ್ಮಿಕ ನಂಬಿಕೆಗಳು, ಆರೋಗ್ಯ ರಕ್ಷಣೆಯಲ್ಲಿ ಅಪನಂಬಿಕೆ ಮತ್ತು ಕುಟುಂಬ ರ್ಕರದ ಒತ್ತಡಗಳು ಸಹ ಪ್ರಮುಖ ಅಡೆತಡೆಗಳಾಗಿ ಉಳಿದಿವೆ. ಇದಲ್ಲದೆ, ವೈದ್ಯಕೀಯ-ಕಾನೂನು ಔಪಚಾರಿಕತೆಗಳು, ವಿಶೇಷವಾಗಿ ಅಪಘಾತ ಪ್ರಕರಣಗಳಲ್ಲಿ ಕಡ್ಡಾಯ ಮರಣೋತ್ತರ ಪರೀಕ್ಷೆಯು ದೇಹವನ್ನು ಹಸ್ತಾಂತರಿಸುವಲ್ಲಿ ವಿಳಂಬಕ್ಕೆ ಕಾರಣವಾಗುತ್ತವೆ. ಕುಟುಂಬಗಳು ದಾನಕ್ಕೆ ಒಪ್ಪಿಗೆ ನೀಡುವುದನ್ನು ನಿರುತ್ಸಾಹಗೊಳಿಸುತ್ತವೆ,’ ಎಂದು ಹೇಳಿದರು.

ಜನರಲ್ಲಿ ವಿಶ್ವಾಸ ಮೂಡಿಸುವುದು ಮತ್ತು ಪಾರದರ್ಶಕ, ಗೌರವಯುತ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಡಾ. ವಿಜಯ್ ಕುಮಾರ್ ಪ್ರತಿಪಾದಿಸಿದರು. “ಮೆದುಳಿನ ಸಾವು ಸಂಭವಿಸಿದ ಕ್ಷಣವನ್ನು ಗುರುತಿಸುವುದು ನಿರ್ಣಾಯಕವಾಗಿದೆ ಸಮಯೋಚಿತ ಒಪ್ಪಿಗೆಯು ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡುವುದರಿಂದ ಮೆದುಳಿನ ಸಾವು ಎಂದರೇನೆಂದು ಅರ್ಥಮಾಡಿಕೊಳ್ಳಲು ಕುಟುಂಬಗಳಿಗೆ ಸ್ಪಷ್ಟ ಮಾರ್ಗದರ್ಶನ ಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ. ಈಗಾಗಲೇ ಸಾಮಾನ್ಯವಾಗಿದ್ದ ರಕ್ತಪರಿಚಲನಾ ಮರಣದ ನಂತರ ಅಂಗಾಂಗ ದಾನವು ಈಗ ಭಾರತದ ಕೆಲವು ಕೇಂದ್ರಗಳಲ್ಲಿ ಪ್ರಾರಂಭವಾಗಿದೆ. ಇದು ಮುಂಬರುವ ವರ್ಷಗಳಲ್ಲಿ ದಾನಿಗಳ ಸಮೂಹವನ್ನು ವಿಸ್ತರಿಸಲು ಮತ್ತಷ್ಟು ಸಹಾಯ ಮಾಡುವ ನಿರೀಕ್ಷೆಯಿದೆ,” ಎಂದು ಹೇಳಿದರು.

ಉತ್ತಮ ಸೌಲಭ್ಯಗಳು ಮತ್ತು ಸುಧಾರಿತ ಫಲಿತಾಂಶಗಳ ನೆರವಿನಿಂದ ಅಂಗಾಂಗ ಕಸಿಯ ನಂತರ ರೋಗಿಗಳ ಜೀವನದ ಗುಣಮಟ್ಟವು ಆರೋಗ್ಯಯುತ ಮತ್ತು ಹೆಚ್ಚು ತೃಪ್ತಿದಾಯಕವಾಗಿರುತ್ತದೆ ಎಂದು ಕುಟುಂಬಗಳಿಗೆ ಭರವಸೆ ನೀಡಬಹುದಾಗಿದೆ, ಈ ಹಿನ್ನಲೆಯಲ್ಲಿ ತುಮಕೂರಿನ ಸಿದ್ದಗಂಗಾ ಡಯಾಗ್ನೋಸ್ಟಿಕ್ ನಲ್ಲಿ ಕಿಡ್ನಿ ಸಂಬಂಧಿತ ಓಪಿಡಿಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *