ಖ್ಯಾತ ನಟಿ, ನಿರೂಪಕಿ ಅಪರ್ಣಾ ವಸ್ತಾರೆ(51) ಅವರು ಗುರುವಾರ (ಜುಲೈ 11)ರಾತ್ರಿ ವಿಧಿವಶರಾಗಿದ್ದಾರೆ.
ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿಯವರಾದ ಇವರು, ಇವರ ತಂದೆ ಬೆಂಗಳೂರಿನ ಲ್ಲಿ ನೆಲಿಸಿದ್ದರು.
ಇವರ ತಾತ ಪಂಚನಹಳ್ಳಿ ತೋಟದ ಮನೆಯಲ್ಲಿ ವಾಸವಿದ್ದರು. ನಾಗರ ಹಾವನ್ನು ಸಾಕಿದ್ದ ಇವರ ತಾತ ಕೊಬ್ಬರಿ ಚೀಲದಡಿ ಮಲಗಿದ್ದ ಹಾವನ್ನು ತುಳಿದಾಗ ಕಚ್ಚಿ ಮೃತ ಪಟ್ಟಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅಪರ್ಣಾ ಬೆಂಗಳೂರಿನ ಬನಶಂಕರಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿ ಮೂಲದವರಾಗಿದ್ದರು.
ಅಪರ್ಣಾ ಅವರು ದೂರದರ್ಶನದಲ್ಲಿ ನಿರೂಪಕಿಯಾಗಿ, ರೇಡಿಯೋ ಜಾಕಿಯಾಗಿ ಕನ್ನಡದ ಜನಪ್ರಿಯ ಮುಖವಾಗಿದ್ದರು. 1990 ರ ದಶಕದಲ್ಲಿ ದೂರ ದರ್ಶನದಲ್ಲಿ ದಲ್ಲಿ ಪ್ರಸಾರವಾದ ವಿವಿಧ ಕಾರ್ಯಕ್ರಮಗಳ ನಿರೂಪಕಿಯಾಗಿ ಕೆಲಸ ಮಾಡಿದ್ದರು . 1984 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ಮಸಣದ ಹೂವು ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 2015 ಮತ್ತು 2021 ರ ನಡುವೆ ಕಾಮಿಡಿ ಶೋ, ಮಜಾ ಟಾಕೀಸ್‌ನಲ್ಲಿ ವರಲಕ್ಷ್ಮಿ ಪಾತ್ರವನ್ನು ನಿರ್ವಹಿಸಿಯೂ ಜನಪ್ರಿಯರಾಗಿದ್ದರು.
ಅಪರ್ಣಾ ಅವರು ಮೂಡಲ ಮನೆ ಮತ್ತು ಮುಕ್ತ ಮುಂತಾದ ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಯಾಗಿ ಕೆಲಸ ಮಾಡಿದ್ದಾರೆ . 2013 ರಲ್ಲಿ, ಅವರು ETV ಕನ್ನಡದಲ್ಲಿ ಪ್ರಸಾರವಾದ ಕನ್ನಡ ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.
ನಮ್ಮ ಮೆಟ್ರೋಗೆ ಧ್ವನಿಯನ್ನು ನೀಡಿದ್ದ ಅಪರ್ಣ ಅವರು ಪಂಚನಹಳ್ಳಿಗೆ ಹೆಸರು ತಂದಿದ್ದ ಇವರು, ಅವರ ಸಾವಿನಿಂದ ಪಂಚನಹಳ್ಳಿಗೆ ಮತ್ತೊಂದು ಅಘಾತವಾಗಿದೆ, ಏಕೆಂದರೆ ನನ್ನ ಊರಿನ ನಾವು ಎತ್ತಿ ಆಡಿಸಿದ್ದ ಸಂಚಾರಿ ವಿಜಯ್ ಸತ್ತಾಗ ಅಪರ್ಣಾ ತಮ್ಮ ಊರು ಪಂಚನಹಳ್ಳಿಯ ಬಗ್ಗೆ ಅಭಿಮಾನದಿಂದ ಮಾತನಾಡಿದ್ದರು.
ನಮ್ಮ ಮೆಟ್ರೋ ಗೆ
ರೈಲು ಹತ್ತುವಾಗ/ಇಳಿಯುವಾಗ ಎಚ್ಚರವಿರಲಿ, ಬಾಗಿಲುಗಳು ಬಲಕ್ಕೆ/ಎಡಕ್ಕೆ ತೆರೆಯಲಿದೆ ಎಂಬ ಧ್ವನಿ ನೀಡಿ ಇಹಲೋಕದ ಪಯಣ ಮುಗಿಸಿದ ಅಪರ್ಣ ರವರು…
ಅಪರ್ಣಾ ನೆನೆದು ಪತಿ ನಾಗರಾಜ್ ವಸ್ತಾರೆ ಕಣ್ಣೀರಿಟ್ಟಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ ಪತ್ನಿಯ ಮನದಾಳ ಮಾತು ಹೇಳಿಕೊಂಡಿದ್ದಾರೆ. ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನ ಬಿಳ್ಕೊಡಲಿಕ್ಕೆ ಇಷ್ಟ ಪಡುತೀನಿ. ಆಗಂತ ನನಗೆ ಸೇರುಕ್ಕೆ ಮುಂಚೆನೇ ಹೆಚ್ಚಾಗಿ ಅಪರ್ಣಾ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾ ಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ ಎಲ್ಲವನ್ನು ಹೇಳುವಂತೆ ತಿಳಿಸಿದ್ದರು.
ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಆರು ತಿಂಗಳು ಬದುಕಬಹುದು ಅಂತಾ ಹೇಳಿದ್ದರು. ಅವಳು ಛಲಗಾತಿ ನಾನು ಬದುಕ್ತೀನಿ ಅಂತಾ ಇದ್ಲು, ಅಲ್ಲಿಂದ ಜನವರಿವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ದಳು. ಫೆಬ್ರವರಿಯಿಂದ ಸೋತಿದ್ದಳು, ಒಂದೂವರೇ ವರ್ಷದಿಂದ ಛಲದಿಂದ ಬದುಕಿದ್ದಳು. ಅವಳು ದೀರೆ, ಇಷ್ಟು ದಿನ ಬದುಕಿದ್ದಾಳೆ. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಇಬ್ಬರು ಜಂಟಿಯಾಗಿ ಸೋತಿದೀವಿ ಎಂದು ಭಾವುಕರಾದರು.
ಇಂದು ಬೆಳಗ್ಗೆ 7:30 ಗಂಟೆ ಕರೆದುಕೊಂಡು ಬರುತ್ತೇನೆ, ಮನೆ ಬಳಿ 11:30 ರವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. 12 ಗಂಟೆಗೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತದೆ. ಬನಶಂಕರಿ ಎರಡನೇ ಹಂತದಲ್ಲಿರೋ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.