
ತುಮಕೂರು: ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜ್ (ಎಸ್‍ಎಸ್‍ಐಟಿ) ಕ್ಯಾಂಪಸ್‍ನಲ್ಲಿ ಫೆ.23ರಂದು ನೂತನವಾಗಿ ಪರಂ ವಾಟರ್ಸ್ ಘಟಕವನ್ನು ಬೆಳಗ್ಗೆ 11ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಇದೇ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಸಭಾಂಗಣ, ಎಐಎಂಎಲ್ ಮತ್ತು ಸಿಎಸ್ ಲ್ಯಾಬ್‍ಗಳು ಉದ್ಘಾಟನೆಯಾಗಲಿದೆ.

ರಾಜ್ಯ ಸರ್ಕಾರದ ಗೃಹ ಸಚಿವರು ಹಾಗೂ ಸಾಹೇ ವಿವಿಯ ಕುಲಾಧಪತಿಗಳಾದ ಸವ್ಯಸಾಚಿ ಡಾ.ಜಿ. ಪರಮೇಶ್ವರ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕನ್ನಿಕಾ ಪರಮೇಶ್ವರಿ ಅವರು ಪರಮ್ ವಾಟರ್ಸ್ ಮತ್ತು ಸಭಾಂಗಣ, ಎಐಎಂಎಲ್ ಮತ್ತು ಸಿಎಸ್ ಲ್ಯಾಬ್‍ಗಳು ಉದ್ಘಾಟನೆ ಮಾಡಲಿದ್ದಾರೆ. ಎಲ್ಲಾ ವಿಭಾಗಗಳ ಡೀನ್‍ಗಳು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪರಮ್ ಪ್ಯಾಕೇಜ್ಡ್ ಕುಡಿಯುವ ನೀರುನ್ನು ಸ್ವಚ್ಛವಾದ , ಪರಿಶುದ್ಧ ನೀರನ್ನು ತಲುಪಿಸುವ ಗುರಿಯಿಂದ ಪರಮ್ ವಾಟರ್ಸ್ ಘಟಕ ಉದ್ಘಾಟನೆಯಾಗಲಿದೆ. ಉದ್ಘಾಟನೆ ಪ್ರಯುಕ್ತ ವಿಶೇಷ ಬಿಡುಗಡೆ ಕೊಡುಗೆಗಳನ್ನು ನೀಡಲಾಗುತ್ತಿದೆ. 100 ಕೇಸ್ ಖರೀದಿಸಿದರೆ, 10ಕೇಸ್‍ಗಳನ್ನು ಪಡೆಯಬಹುದು. ಇದು ಕೇವಲ ಸೀಮಿತ ಸಮಯದ ಅವಧಿಯ ಕೊಡುಗೆ. ನೀವು ಪರಮ್ ವಾಟರ್ಸ್ ಅನ್ನು ಏಕೆ ಖರೀದಿಸಬೇಕೆಂದರೆ ಶುದ್ಧತೆ ಮತ್ತು ಗುಣಮಟ್ಟದ ಭರವಸೆ, ನೈರ್ಮಲ್ಯವಾಗಿ ಸಂಸ್ಕರಿಸಿದ ಬಾಟಲ್‍ಗಳಿಲ್ಲಿ ಲಭ್ಯವಾಗಲಿದೆ.