ಪಾವಗಡ ಸೋಲಾರ್ ಪಾರ್ಕ್ 2ನೇ ಹಂತದ 2000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಯೋಜನೆ 2 ವರ್ಷದಲ್ಲಿ ಪೂರ್ಣ:

ತುಮಕೂರು : ಪಾವಗಡ ಸೋಲಾರ್ ಪಾರ್ಕ್‍ನ ಎರಡನೇ ಹಂತವನ್ನು ಮುಂದಿನ 2 ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಜಿಲ್ಲೆಯ ತಿರುಮಣಿ ಸೋಲಾರ್ ಪಾರ್ಕ್‍ನ ಕೆಎಸ್‍ಪಿಡಿಸಿಎಲ್ ಕಚೇರಿಯಲ್ಲಿ ಇಂದು ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರ್ಯೆತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪಾವಗಡ ತಾಲೂಕ್ ಚರಿತ್ರೆ ಸೃಷ್ಟಿಸುವ ಭಾಗವಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಸೋಲಾರ್ ಪಾರ್ಕ್ ಆಗಲು ಸ್ಥಳೀಯ ರೈತರ ಸಹಕಾರ ಕಾರಣ. ಏಕೆಂದರೆ ಅವರು ಜಮೀನಿನಲ್ಲಿ ಅವಕಾಶ ಕೊಟ್ಟಿರುವುದರಿಂದ ಸೋಲಾರ್ ಪಾರ್ಕ್ ಮಾಡಲಾಗಿದೆ. ಪಾವಗಡ ಹಿಂದುಳಿದ ಪ್ರದೇಶ ಆದರೆ ದೇವರು ಯಥೇಚ್ಚ ಸೂರ್ಯನ ಶಕ್ತಿಯನ್ನು ಈ ಭಾಗಕ್ಕೆ ನೀಡಿದ್ದಾರೆ ಎಂದರು.

ರೈತರಿಗೆ ಅನ್ ಲೈನ್ ಮೂಲಕ ರಿಯಾಯಿತಿ ಶೆ. 80% ದರದಲ್ಲಿ ಸೋಲಾರ್ ಪಂಪ್ ಸೆಟ್ ನೀಡಲಾಗುತ್ತಿದೆ ಹಾಗೂ ಮನೆ ಮನೆಗೂ ಸೌರ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ವಾತಾವರಣಕ್ಕೆ ಪೂರಕವಾದ ಬೆಳೆಗಳನ್ನು ಬೆಳೆಯಲು ರೈತರಿಗೆ ಅವರು ಕರೆ ನೀಡಿದರು. ರಾಜ್ಯದ ವಿದ್ಯುತ್ ಸಮಸ್ಯೆ ನೀಗಿಸಿ, ವಿದ್ಯುತ್ ಸ್ವಾವಲಂಬನೆ ಸಾಧಿಸಲು 2000 ಮೆ.ವ್ಯಾ. ಸಾಮಥ್ರ್ಯದ 2ನೇ ಹಂತದ ನೂತನ ಯೋಜನೆಗೆ ಸ್ಥಳೀಯರ ಸಹಕಾರ ಅಗತ್ಯವಾಗಿದ್ದು,

ಸ್ವಯಂ ಪ್ರೇರಣೆಯಿಂದ ಭೂಮಿಯನ್ನು ಭೋಗ್ಯಕ್ಕೆ ಕೊಡಲು ಮುಂದೆ ಬಂದಿರುವ ರೈತರಿಗೆ ಧನ್ಯವಾದ,” ಎಂದರು. ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಕನಸಿನ ಫಲ ಪಾವಗಡ ಸೋಲಾರ್ ಪಾರ್ಕ್ ಆಗ ವಿಶ್ವದಲ್ಲೇ ನಂಬರ್ ಒನ್ ಆಗಿತ್ತು. ಈಗ ನಾವು4ನೇ ಸ್ಥಾನದಲ್ಲಿದ್ದು, ಮತ್ತೆ ನಂಬರ್ ಒನ್ ಸ್ಥಾನಕ್ಕೇರುವ ಸಂಕಲ್ಪ ಮಾಡಿ ಅದಕ್ಕಾಗಿ ಅಗತ್ಯ ರೂಪುರೇಷೇಗಳ ಸಿದ್ದಪಡಿಸಿ ಯೋಜನೆಗಳ ಜಾರಿಗೊಳಿಸಿದ್ದೆವೆ ” ಎಂದರು.

ಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ: ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವ್ಯಾಸಂಗ ಮಾಡುತ್ತಿರುವ ಸೂರ್ಯಮಿತ್ರ ಕೌಶಲ ತರಬೇತಿ ಪಡೆದ ಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ತರಬೇತಿ ಪೂರ್ಣಗೊಂಡ 30 ಜನ ಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.

ಶಾಸಕ ಹೆಚ್.ವಿ ವೆಂಕಟೇಶ್ ಮಾತನಾಡಿ, ರೈತರಿಂದ ಸದರಿ ಸರ್ಕಾರದ ಯೋಜನೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ ಎಂದರು. ಸದರಿ ಯೋಜನೆಯಡಿ ರೈತರಿಗೆ ದೊರೆಯುವಂತಹ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆ.ಆರ್. ಇ.ಡಿ.ಎಲ್ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ದೇಶಾದ್ಯಂತ ಬರಗಾಲ ಬಂದಿದೆ ರೈತರಿಗೆ ನೀರಿನ ಅವಶ್ಯಕತೆ ಇದೆ. ರೈತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ತಿಳಿಸಿದರು.

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಮಾತನಾಡಿ, ಏμÁ್ಯದಲ್ಲಿ ಪಾವಗಡ ಸೋಲಾರ್ ಪಾರ್ಕ್ ಪ್ರಥಮ ಸ್ಥಾನದಲ್ಲಿದೆ. ಸೋಲಾರ್ ಪಾರ್ಕ್ 6 ಹಳ್ಳಿಗಳ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲಾಗಿರುವುದರಿಂದ ಸೌರಶಕ್ತಿ ಆಧಾರಿತ ಹೊಸ ತಂತ್ರಜ್ಞಾನದ ಅವಶ್ಯಕತೆ ಇದೆ ಎಂದರು.

ನಂತರ ಪಾವಗಡ ಸೋಲಾರ್ ಪಾರ್ಕ್‍ನ ಸುತ್ತಮುತ್ತಲಿನ ಗ್ರಾಮಕ್ಕೆ ಭೇಟಿ ನೀಡಿ ಮತ್ತು ರೈತರ ಜಮೀನುಗಳ ಸ್ಥಳ ಪರಿಶೀಲನೆ ಮಾಡಿದರು.

ಮಾಜಿ ಶಾಸಕ ವೆಂಕಟರಮಣಪ್ಪ, ಕೆ.ಆರ್.ಇ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ, ಕೆ.ಎಸ್.ಪಿ.ಡಿ.ಸಿ.ಎಲ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಅಮರನಾಥ್, ಉಪ ವ್ಯವಸ್ಥಾಪಕ ಪ್ರಕಾಶ್, ತರಬೇತಿ ವಿಭಾಗದ ಮುಖ್ಯಾಧಿಕಾರಿ ಸಂಜಯ್, ಸೋಲಾರ್ ಪಾರ್ಕ್ ಪದಾಧಿಕಾರಿಗಳು, ರೈತ ಮುಖಂಡರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *