ತುಮಕೂರು: ದೇಶದಲ್ಲಿ ಕಾರ್ಮಿಕರು ದುಡಿಯುವ ಮತ್ತು ಬಡವರ ಪರವಾಗಿ ಬೀದಿಗಿಳಿದು ಸರ್ಕಾರ ಸ್ಥಳೀಯ ಆಡಳಿತಗಳನ್ನ ಟೀಕೆಸುತ್ತ ಪ್ರತಿಭಟನೆಗಳ ಮೂಲಕ ಎಚ್ಚರಿಕೆ ಗಂಟೆಯಾಗಿರುವ ಸಿಪಿಐ ಪಕ್ಷ ಶತಮಾನದ ಹೊಸ್ತಿಲಲ್ಲಿ ಇದ್ದು ಅದರ ಸೈದ್ಧಾಂತಿಕ ನಿಲುವುಗಳ ಪ್ರಣಾಳಿಕೆಯನ್ನು ಜನರು ಒಪ್ಪಿಕೊಂಡರೆ ಮುಂಬರುವ ದಿನಗಳಲ್ಲಿ ಸುಧಾರಿತವಾದ ಆಡಳಿತವನ್ನು ದೇಶದಲ್ಲಿ ಕಾಣಬಹುದು ಎಂದು ಹಿರಿಯ ಚಿಂತಕ ಡಾ.ಜಿ ರಾಮಕೃಷ್ಣ ಅವರು ತಿಳಿಸಿದರು.
ನಗರದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಭಾರತ ಕಮಿನಿಸ್ಟ್ ಪಕ್ಷದ ನೂರು ವರ್ಷಗಳ ಶತಮಾನದ ಸಂಭ್ರಮದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉದ್ಘಾಟನೆ ಮಾಡಿ ಮಾತನಾಡಿದ ಜಿ.ರಾಮಕೃಷ್ಣ ಅವರು ಸಿಪಿಐ ಪಕ್ಷಕ್ಕೆ ನೂರು ವರ್ಷಗಳು ಇದ್ದರೆ ಇದರ ಜೊತೆಯಲ್ಲಿ ಪಕ್ಷವನ್ನ ಕಟ್ಟಿ ಬೆಳೆಸಿದ ರೇವಣ್ಣ ಅವರು ಶತಮಾನದ ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ ಜನರು ಸಿಪಿಐ ಪಕ್ಷದ ಪ್ರಜ್ಞಾಶಿಲಾ ಕಾರ್ಯಕ್ರಮಗಳನ್ನ ಗುರುತಿಸಿ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪಕ್ಷ ಸಂಘಟನೆಗೆ ಮುಂದಾಗ ಬೇಕಿದೆ ಎಂದು ತಿಳಿಸಿದರು.
ಸಿಪಿಐ ಪಕ್ಷದ ಪ್ರಣಾಳಿಕೆ ಚಿಂತನೆ ಹೋರಾಟಗಳು ದುಡಿಯುವ ವರ್ಗದ ಜನಪರ ಕಾಳಜಿಯನ್ನ ಹೊಂದಿವೆ ಆದರೆ ನಮ್ಮ ದೇಶವನ್ನ ದುರಾಡಳಿತದಿಂದ ವಿವಿಧ ಸರ್ಕಾರದವರು ಲೂಟಿ ಹೊಡೆಯುವವರನ್ನ ನೋಡಿದರೆ ವಿಷಾದವೆನಿಸುತ್ತದೆ ಮಿತ್ರ ಪಕ್ಷಗಳು ಸಿಪಿಐ ಪಕ್ಷವನ್ನ ಬಲಪಡಿಸಿ ಜನಸಾಮಾನ್ಯರ ರಕ್ಷಣೆಗೆ ಮುಂದಾಗಬೇಕೆಂದು ನುಡಿದರು.
ಮಾರ್ಕ್ಸ್ ಮತ್ತು ಲೆನಿನ್ ವಾದವನ್ನು ಒಪ್ಪಿಕೊಂಡ ಅಂದಿನ ಜನನಾಯಕರು 1924ರಲ್ಲಿ ಸಿಪಿಐ ಪಕ್ಷವನ್ನ ಒಗ್ಗೂಡಿಕೊಂಡು ಸಂಘಟನೆ ಮಾಡಿದರು ಸಂದರ್ಭದಲ್ಲಿ ಜೈಲುವಾಸ, ನೇಣುಗಂಬ ಅನುಭವಿಸಿ ಅನೇಕರು ಜೀವವನ್ನೇ ಕಳೆದುಕೊಂಡರು ಆದರೆ ಇವರ ಮುಖ್ಯ ಉದ್ದೇಶ ದುಡಿಯುವ ವರ್ಗ ಮತ್ತು ಕಾರ್ಮಿಕರನ್ನು ರಕ್ಷಣೆ ಮಾಡುವುದು ಆಗಿತ್ತು ಸ್ವಾತಂತ್ರ್ಯಕ್ಕಾಗಿ ದುಡಿದ ಚಂದ್ರಶೇಖರ್ ಅಜಾದ್ ಅವರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದು ಸಿಪಿಐ ಪಕ್ಷದ ಸೈಂಧಾಂತಿಕ ನಿಲುವುಗಳನ್ನು ಒಪ್ಪಿಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ಬಂಡವಾಳ ಶಾಹಿ ಆಡಳಿತದ ವಿರುದ್ಧವಾಗಿ ಸಿಪಿಐ ಪಕ್ಷದ ನೂರು ವರ್ಷಗಳ ಹೋರಾಟ ಗುರ್ತಿಸಿ ಜನರು ಎಚ್ಚರಗೊಳ್ಳ ಹೇಳಬೇಕಿದೆ ಎಂದು ತಿಳಿಸಿದರು.
ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಸಾತಿ ಸುಂದರೇಶ್ ಅವರು ಮಾತನಾಡಿ 1925 ರಲ್ಲಿ ಕಾನ್ಪುರದಲ್ಲಿ ಜನ್ಮತಾಳಿದ ಸಿಪಿಐ ಪಕ್ಷ ರಾಜ್ಯದಾದ್ಯಂತ ಶತಮಾನದ ಸಂಭ್ರಮವನ್ನು ರೈತರು ದುಡಿಯುವ ವರ್ಗ ಕಾರ್ಮಿಕದ ನಡುವೆ ಆಚರಣೆ ಮಾಡುತ್ತಾ 1950ರಲ್ಲಿ ರಾಜ್ಯದಲ್ಲಿ ಪಕ್ಷ ಸ್ಥಾಪನೆಗೊಂಡಿದೆ ಪಕ್ಷ ಸಂಘಟಿಸುವ ಸಂದರ್ಭದಲ್ಲಿ ಬ್ರಿಟಿಷ್ ಅವರು ಅನೇಕರನ್ನ ಜೈಲಿಗೆ ಕಳಿಸಿದ್ದಾರೆ, ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ಬಡವರ ಆಶ್ವತ್ಥರಗಳನ್ನ ಈಡೇರಿಸದೇ ಹಣ ಮಾಡುವ ದಾರಿಯನ್ನು ಮಾತ್ರ ಯೋಚನೆ ಮಾಡುತ್ತಿದೆ ಇನ್ನೂ ನಮ್ಮ ರಾಜ್ಯದಲ್ಲಿ 10 ಲಕ್ಷ ಜನರು ಭೂಮಿ ಇಲ್ಲದೆ ಪರದಾಡುತ್ತಿದ್ದಾರೆ ವಿದೇಶದ ಬಿಳಿಯರು ನಮ್ಮ ದೇಶದ ಕರಿಯರಿಗೆ ಅಧಿಕಾರ ಕೊಟ್ಟು ಹೋಗಿರುವ ಪರಿಣಾಮವಾಗಿ ಬಂಡವಾಳ ಶಾಹಿ ಆಡಳಿತ ಬಡವರ ಮೇಲೆ ದಬ್ಬಾಳಿಕೆಯ ನಡೆಸುತ್ತಾ ಬ್ರಿಟಿಷರಿಗಿಂತ ಕ್ರೂರವಾದ ಆಡಳಿತವನ್ನು ನೀಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದರು.
ಶೇಕಡ ಒಂದರಷ್ಟು ಜನ ಆಸ್ತಿ ಇಲ್ಲದೆ ಸೂರು ಇಲ್ಲದೆ ಬದುಕು ಸವೆಸುತ್ತಿದ್ದರೆ ಶೇಕಡ 60ರಷ್ಟು ಜನರು ಆಸ್ತಿ ಹೊಂದಿರುವವರು ಶಿಕ್ಷಣ ಅಧಿಕಾರದ ಮದದಿಂದ ಅವರನ್ನ ದಬ್ಬಾಳಿಕೆ ಮಾಡುತ್ತಿದ್ದಾರೆ ಕೆಲವರು ಭಾವನಾತ್ಮಕ ವಿಷಯಗಳಿಂದ ದೇಶದ ಜನರನ್ನ ಹಾಳು ಮಾಡುತ್ತಿದ್ದು ನಮ್ಮ ದೇಶದಲ್ಲಿ ಇಂದಿಗೂ ಬಡತನ ಮತ್ತು ಹಸುವಿನ ಸೂಚ್ಯಂಕ ಕಡಿಮೆಯಾಗಿಲ್ಲ ನಮ್ಮ ದೇಶದಲ್ಲಿ ಇನ್ನೂ ಬಡತನ ಇದು ರಾಜ್ಯದಲ್ಲಿ 27 ಲಕ್ಷ ಕುಟುಂಬಗಳು ಸ್ವಂತ ಮನೆ ಇಲ್ಲದೆ ಪರದಾಡುತ್ತಿದ್ದಾರೆ ಇನ್ನು ಶೇಕಡ 47ರಷ್ಟು ಜನರಿಗೆ ಭೂಮಿಯ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದರು.
ಹಿರಿಯ ಪರಿಸರವಾದಿ ಸಿ ಯತಿರಾಜ್ ಅವರು ಮಾತನಾಡಿ ನಮ್ಮ ದೇಶದಲ್ಲಿ ಭ್ರಮೆಗೆ ಒಳಗಾಗಿರುವ ಜನರು ಉತ್ತಮ ಅಧಿಕಾರ ನೀಡುವ ಪಕ್ಷಗಳನ್ನ ಆಡಳಿತಕ್ಕೆ ತರುವುದಿಲ್ಲ ಅದರ ಜೊತೆಗೆ ಮೇಲಿನಿಂದ ಮೇಲೆ ಒತ್ತಡ ಏರಿ ತಾಂತ್ರಿಕವಾಗಿ ಹಾಳು ಮಾಡುವ ಯೋಜನೆಗಳನ್ನು ಜನರು ಒಪ್ಪಿಕೊಳ್ಳುತ್ತಾರೆ ಇನ್ನು ಮುಂದಾದರೂ ಇನ್ನು ಮುಂದಾದರೂ ಸಿಪಿಐ ಪಕ್ಷದ ಜನಪರ ಹೋರಾಟಗಳನ್ನು ಒಪ್ಪಿಕೊಂಡು ಜನರು ಅದಕ್ಕೆ ಬೆಂಬಲ ನೀಡಿ ಬಡವರು ಮತ್ತು ದುಡಿಯುವ ವರ್ಗವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಶತಮಾನ ಸಂಭ್ರಮದ ಅಧ್ಯಕ್ಷತೆ ವಹಿಸಿದ್ದ ಸಿಪಿನ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಗಿರೀಶ್ ಅವರು ಮಾತನಾಡಿ ದುಡಿಯುವರ ಕಾರ್ಮಿಕರ ಬಡವರ ರೈತರ ಪರವಾಗಿ ಸಿಬಿಐ ಪಕ್ಷ ಪ್ರತಿನಿತ್ಯ ಹೋರಾಟಗಳನ್ನು ನಡೆಸುತ್ತದೆ ಬಂದಿದೆ ಇಂದಿನ ಸಿ ಪಿ ಪಕ್ಷದ ಹೋರಾಟಗಳನ್ನು ಸಾಕ್ಷಿಕರಿಸಲು ಪಕ್ಷ ಅಸ್ತಿತ್ವಕ್ಕೆ ಬಂದು ನೂರು ವರ್ಷಗಳು ತಂದಿದ್ದು ಈ ಸಂದರ್ಭವನ್ನ ನಾವು ಆಚರಣೆ ಮಾಡುತ್ತಿದ್ದೇವೆ ಶತಮಾನದ ಸಂಭ್ರಮಕ್ಕೆ ಸಾಕ್ಷಿಯಾಗುವದರ ಜೊತೆಗೆ ಈ ಸಂಭ್ರಮವನ್ನು ಯಶಸ್ವಿಗೊಳಿಸಲು ಅನೇಕರು ಶ್ರಮಿಸಿದ್ದಾರೆ ಮಿತ್ರ ಪಕ್ಷಗಳು ಸಾರ್ಥ ನೀಡಿದೆ ಹೀಗಾಗಿ ಜನರು ಎಚ್ಚೆತ್ತುಕೊಂಡು ಮುಂಬರುವ ದಿನಗಳಲ್ಲಿ ಸಮ ಸಮಾಜದ ನಿರ್ಮಾಣ ಮತ್ತು ಉತ್ತಮ ಆಡಳಿತಕ್ಕಾಗಿ ಸಿಪಿಐ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗ ಬೇಕಿದೆ ಎಂದು ಮನವಿ ಮಾಡಿದರು.
ಸಿ ಪಿಐ ಪಕ್ಷದ ನೂರು ವರ್ಷಗಳ ಶತಮಾನದ ಈ ಸುಸಂದರ್ಭದಲ್ಲಿ ಟೌನ್ ಹಾಲ್ ವೃತ್ತದಿಂದ ಕನ್ನಡ ಭವನ ವರೆಗೂ ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು ಸಾಗಿ ಬಂದರು.
ಈ ಸಂದರ್ಭದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರಾದ ಟಿ ಆರ್ ರೇವಣ್ಣ, ಸಿಪಿಐಎಂ ಪಕ್ಷದ ಎನ್ ಕೆ ಸುಬ್ರಹ್ಮಣ್ಯ, ಎಸ್ ಯು ಸಿ ಐ ಸಿ ಯ ಎಸ್ ಎನ್ ಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಏ ಗೋವಿಂದರಾಜು, ಎಐಟಿಯು ಸೀನ ಕಂಬೇಗೌಡ, ಸಿಪಿಐ ಪಕ್ಷದ ಜಿಲ್ಲಾ ಖಜಾಂಚಿ ಅಶ್ವತ್ ನಾರಾಯಣ, ಚಂದ್ರಶೇಖರ್, ರವಿಪ್ರಸಾದ್, ಆರ್ ಗೋವಿಂದರಾಜು, ರಮೇಶ್, ಜಾಫರ್, ಬಸವರಾಜು ಸೇರಿದಂತೆ ಇತರರು ಶತಮಾನದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.