ಕವಯತ್ರಿ ಬಿ.ಸಿ.ಶೈಲಾನಾಗರಾಜು ತಂದೆ ಬಿ.ಚನ್ನಪ್ಪ ನಿಧನ

ತುಮಕೂರು : ಕವಯತ್ರಿ, ಸಾಹಿತಿಯಾದ ಡಾ. ಬಿ.ಸಿ.ಶೈಲಾನಾಗರಾಜುರವರ ತಂದೆ ಬಿ.ಚನ್ನಪ್ಪ (95ವರ್ಷ) ಆಗಸ್ಟ್ 1 ರಾತ್ರಿ 11.30ರಲ್ಲಿ ನಿಧನ ಹೊಂದಿದ್ದಾರೆ.

ಬಿ.ಚನ್ನಪ್ಪನವರು ತುಮಕೂರು ತಾಲ್ಲೂಕಿನ ಸೋರೆಕುಂಟೆ ಸಮೀಪದ ಬೊಮ್ಮೇಗೌಡನಪಾಳ್ಯದವರಾಗಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಬೆಳ್ಳಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ನಿವೃತ್ತಿ ಹೊಂದಿದ್ದರು.

ಬಿ.ಚನ್ನಪ್ಪನವರಿಗೆ ಪತ್ನಿ ಗೌರಮ್ಮ,ಮಗಳಾದ ಕವಯತ್ರಿ ಬಿ.ಸಿ.ಶೈಲಾನಾಗರಾಜು, ಗಂಡುಮಕ್ಕಳಾದ ಬಿ.ಸಿ.ಸೋಮಪ್ರಸಾದ್, ಬಿ.ಸಿ.ಪ್ರಭುಪ್ರಸಾದ್ ಸೊಸೆಯಂದಿರು, ಮೊಮ್ಮಕಳನ್ನು ಅಗಲಿದ್ದಾರೆ.

ಸಾರ್ವಜನಿಕ ದರ್ಶನಕ್ಕೆ ಮೃತರ ಸ್ವಗೃಹವಾದ ತುಮಕೂರಿನ ಎಸ್.ಐ.ಟಿ.ಬಡಾವಣೆಯ 29ನೇ ಕ್ರಾಸ್‍ನ ಪ್ರಶಾಂತ ನಿಲಯದಲ್ಲಿ ಇಡಲಾಗಿದೆ. ಅಂತಿಮ ಸಂಸ್ಕಾರವು ಮಧ್ಯಾಹ್ನ 1ಗಂಟೆಯ ನಂತರ ಕುಣಿಗಲ್ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *