ಮಾರ್ಚ್ 3 ರಂದು ಕವಿ ಕೆ.ಬಿ.ಸಿದ್ದಯ್ಯ ಅವರ ತೊಗಲ ಮಂಟಪ ಖಂಡಕಾವ್ಯ ಜನಾರ್ಪಣೆ

ಚಲನ ಪ್ರಕಾಶನ ಸಹಕಾರಿ ಮತ್ತು ಕೆ.ಬಿ. ಬಳಗದ ವತಿಯಿಂದ ಮಾರ್ಚ್ 3 ರಂದು ಬೆಳಗ್ಗೆ 10.15ಕ್ಕೆ ತುಮಕೂರಿನ ಕನ್ನಡಭವನದಲ್ಲಿ ದಿವಂಗತ ಕವಿ ಕೆ.ಬಿ.ಸಿದ್ದಯ್ಯ ಅವರ ತೊಗಲ ಮಂಟಪ ಖಂಡಕಾವ್ಯ ಜನಾರ್ಪಣೆ ಸಮಾರಂಭವನ್ನು ಏರ್ಪಡಿಸಲಾಗಿದೆ.

ಸಮಾರಂಭವನ್ನು ಹಿರಿಯ ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕರ್ನಾಟಕದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೇಂದ್ರ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ಸಂಸ್ಕೃತಿಕ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಿ.ಎಂ.ಪುಟ್ಟಯ್ಯ ಭಾಗಿಯಾಗಲಿದ್ದಾರೆ.

ಅಲ್ಲದೆ ಹಿರಿಯ ಲೇಖಕಿ ಸವಿತಾ ನಾಗಭೂಷಣ್, ಸಂಸ್ಕೃತಿ ಚಿಂತಕ ಕೋಟಗಾನಹಳ್ಳಿ ರಾಮಯ್ಯ, ಹಿರಿಯ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ ಡಾ.ಬಸವರಾಜು . ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ ಪಾಲ್ಗೊಳ್ಳಲಿದ್ದಾರೆ.

ಅಣ್ಣನ ಹೆಜ್ಜೆ ಗುರುತು ಹಿಡಿಯುವಲ್ಲಿ
ಚಲನ ಪ್ರಕಾಶನ ಸಹಕಾರಿ ಅಣ್ಣನ ಅಂದರೆ ನನ್ನ ತಂದೆ ಕೆ ಬಿ ಸಿದ್ದಯ್ಯನವರ ಕನಸಿನ ಪ್ರಕಾಶನ, ಕೆ.ಎಂ. ಶಂಕರಪ್ಪ, ವಿ ಚಿಕ್ಕವೀರಯ್ಯ, ಜಿ ವಿ ಆನಂದಮೂರ್ತಿ, ತುಂಬಾಡಿ ರಾಮಯ್ಯ ನವರ ಪೆÇ್ರೀತ್ಸಾಹದೊಂದಿಗೆ ಅಣ್ಣ ತನ್ನ ಮೊದಲ ಖಂಡಕಾವ್ಯ ಬಕಾಲವನ್ನು 1989ರಲ್ಲಿ ಪ್ರಕಟಿಸಿದರು. ನಂತರ ನಾಲ್ಕು ಶ್ರೇಷ್ಠ ಸತ್ಯಗಳು ಪುಸ್ತಕ 1994ರಲ್ಲಿ ಬೆಳಕು ಕಂಡಿತು. ಪ್ರಕಾಶನಕ್ಕೆ ಎಚ್.ಜಿ.ಸಣ್ಣಗುಡ್ಡಯ್ಯ, ಪ್ರೊ.ನಾಗವಾರ ಕಾಳೇಗೌಡ, ಕೆ.ಪಿ.ನಟರಾಜ್ ಇನ್ನೂ ಮುಂತಾದವರ ಅಕ್ಕರೆಯ ಸಹಕಾರ ಸ್ಮರಣೀಯ, ಆಣ್ಣ ಮತ್ತು ಸೋದರ ಅನಿಕೇತನ ಟಿ ಎಸ್ ನೆನಪಿನಲ್ಲಿ ಈ ಪ್ರಕಾಶನವನ್ನು ಕೇಬಿ ಕುಟುಂಬವೇ ಮುಂದುವರಿಸಲು ನಿರ್ಧರಿಸಲಾಗಿದೆ. ‘ಚಲನ ಪ್ರಕಾಶನ ಸಹಕಾರಿ’ಯ ಮೊದಲ ಹೆಜ್ಜೆಯಾಗಿ ತೊಗಲ ಮಂಟಪ ಕೃತಿಯನ್ನು ಪ್ರಕಟಿಸುವುದರ ಮೂಲಕ ಮರು ಚಾಲನೆ ನೀಡುತ್ತಿದ್ದೇವೆ. ‘ತೊಗಲ ಮಂಟಪ’ ಶೀರ್ಷಿಕೆ ಅಣ್ಣ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದರಿಂದ ಅವರದೇ ಪುಸ್ತಕಕ್ಕೆ ಅವರೇ ಇಟ್ಟಂತಹ ಹೆಸರಾಗಿದೆ.

ಅಣ್ಣನೆ ಹೇಳುತ್ತಿದ್ದಂತೆ-ಅಣ್ಣನ ಕಾವ್ಯ ಒಬ್ಬ ಕಲಾವಿದನ ಈ ಚಿತ್ರವಿದ್ದಂತೆ, ಒಂದು ಚಿತ್ರ … ನೋಡಿದರೆ ಆ ಚಿತ್ರವನ್ನು ರಚಿಸುವಾಗ ಕಲಾವಿದ ಎಲ್ಲಿಂದ ಶುರುಮಾಡಿ ಎಲ್ಲಿಗೆ ಮುಗಿಸಿರುತ್ತಾನೆ ಎಂದು ಎಂದು ಹೇಳಲಾಗುವುದಿಲ್ಲವೋ, ಅದೇ ರೀತಿ ಅವರ ಖಂಡಕಾವ್ಯವೂ ಕೂಡ ಸಹ ಶುರು ಮತ್ತು ಕೊನೆಯಿಲ್ಲದ್ದು, ಓದುಗ ಎಲ್ಲಿಂದ ಓದಿಸಿಕೊಳ್ಳುತ್ತಾನೋ ಅದೇ ಶುರು, ಅಲ್ಲಿಗೆ ನಿಲ್ಲಿಸುತ್ತಾನೋ ಅದೇ ಕೊನೆ’ ಎಂಬಂತೆ ತೊಗಲ ಮಂಟಪವು ಇದೆ. ಪೂರ್ಣವಾಗಬೇಕಿತ್ತೋ ಅಥವಾ ಇμÉ್ಟೀ ಕಾವ್ಯವೋ? ಯಾವಾಗ ಬರೆದು ಮುಗಿಸಿತ್ತೋ? ತಿಳಿದಿಲ್ಲ, ಅಣ್ಣ ಹೇಗೆ ಬರೆದಿದ್ದರೋ ಹಾಗೆಯೇ ಯಾವುದೇ ಬದಲಾವಣೆ ಇಲ್ಲದೆ ಅವರದ್ದೇ ಕೈಬರಹ ಸಹಿತ ಪ್ರಕಟಿಸಿದ್ದೇವೆ.

ಕಾಗದದಲ್ಲಿದ್ದ ಕೈಬರೆಹದ ಕಾವ್ಯವನ್ನ ಪುಸ್ತಕವಾಗಿಸುವಲ್ಲಿ ನನ್ನ ಜೊತೆಗೆ ಹಲವರು ಶ್ರಮಪಟ್ಟಿದ್ದಾರೆ. ಇದನ್ನು ಜೋಪಾನ ಮಾಡಿ ಇಟ್ಟಿದ್ದ ಅಮ್ಮ ಶ್ರೀಮತಿ ಗಂಗರಾಜಮ್ಮನಿಗೆ ಇದರ ಎಲ್ಲ ಗೌರವ ಸಲ್ಲಬೇಕು. ಈ ಕಾವ್ಯವನ್ನು ಪ್ರಕಟ ಮಾಡಬೇಕೆಂದುಕೊಂಡಾಗ ಇದನ್ನು ಓದಿ, ಶೋಧಿಸಿ, ಪುಸ್ತಕಕ್ಕೆ ಒಂದು ಚೌಕಟ್ಟನ್ನು ರೂಪಿಸಿ ಪುಸ್ತಕ ವಿಶೇಷವಾಗಿ ಹೊರ ತರಬೇಕೆಂದು ಅದರ ಆಯವನ್ನು ರೂಪಿಸುವಲ್ಲಿ ಮುಖ್ಯಪಾತ್ರ ವಹಿಸಿದ ರವಿಕುಮಾರ ನೀಹ ಅವರಿಗೆ ನನ್ನ ಧನ್ಯವಾದಗಳು, ಅಣ್ಣನ ಕೊನೆಯ ಕಾವ್ಯಕ್ಕೆ ಆಪ್ತವಾದ ಬರಹ ಬರೆದು ಅಂದ ಹೆಚ್ಚಿಸಿದ ನಾಡಿನ ಸಾಕ್ಷಿಪ್ರಜ್ಞೆಗಳಾದ ಡಾ. ಅಗ್ರಹಾರ ಕೃಷ್ಣಮೂರ್ತಿ, ಡಾ. ಬಂಜಗೆರೆ ಜಯಪ್ರಕಾಶ್ ಅವರಿಗೆ ವಂದನೆಗಳು. ಅಣ್ಣನ ಕೈ ಬರಹದಲ್ಲಿದ್ದ ಕಾವ್ಯವನ್ನು ಟೈಪಿಸಿದ ಮೂರ್ತಿ ತಿಮ್ಮನಹಳ್ಳಿ, ಸಹಕರಿಸಿದ ಡಾ. ಶಿವಣ್ಣ ತಿಮ್ಲಾಪುರ, ಕಂಟಲಗೆರೆ ಸಣ್ಣಹೊನ್ನಯ್ಯ, ಕೊಟ್ಟ ಶಂಕರ್, ಪಲ್ಲವಿ ಟಿ.ಎಸ್.ಶಿವಾನಂದ್, ಲಕ್ಷಮಣ್.ಪಿ.ಎನ್., ಗೋಪಾಲ್ ಹಾಗೂ ಕೆ.ಬಿ.ಹಿತೈಶಿಗಳಿಗೆ ಧ್ಯವಾದಗಳು

ಈ ತೊಗಲ ಮಂಟಪ ಖಂಡಕಾವ್ಯದ ಮುಖಪುಟಕ್ಕೆ ಕಲಾಕೃತಿ ಒದಗಿಸಿದ ಮನುಚಕ್ರವರ್ತಿಯವರಿಗೆ, ಒಳಪುಟದ ರೇಖಾಚಿತ್ರ ಗಳನ್ನು ಒದಗಿಸಿದ ರಮೇಶ್ ಆಗ್ರಹಾರ ಅವರಿಗೆ, ಇಡೀ ಕೃತಿಯನ್ನು ವಿನ್ಯಾಸಗೊಳಿಸಿ, ಮುದ್ರಿಸಿದ ಆಲೇಖ್ಯ ಎಂಟರ್‍ಪ್ರೈಸೆಸ್‍ನ ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ ಅವರಿಗೆ ಧನ್ಯವಾದಗಳು.
ಮುಂದೆ ‘ಚಲನ’ದಿಂದ ಕೆ ಬಿ ಸಿದ್ದಯ್ಯನವರ ಭಾಷಣಗಳ ಸಂಗ್ರಹ, ಲೇಖನಗಳ ಸಂಗ್ರಹ… ಹೀಗೆ ಅವರನ್ನು ಜೀವಂತವಾಗಿಡಲು ಪ್ರತಿ ವರ್ಷ ಒಂದೊಂದು ಕಾರ್ಯಕ್ರಮವನ್ನು ರೂಪಿಸಿವ ಹುಮ್ಮಸ್ಸಿನಲ್ಲಿ ‘ಚಲನ’ ಸದಾ ಚಲನಶೀಲವಾಗಿ ಇರುತ್ತದೆ. ತಾವೆಲ್ಲಾ ನಮ್ಮೊಂದಿಗೆ ಇರುತ್ತೀರ ಎಂಬ ಆಶಯ ನಮ್ಮದು.

-ಚಲನ ಪ್ರಕಾಶನ ಸಹಕಾರಿ

Leave a Reply

Your email address will not be published. Required fields are marked *