ದೇಶ-ರಾಜ್ಯದಲ್ಲಿ ಬದಲಾವಣೆ ಪರ್ವ ಕರ್ನಾಟಕದಿಂದಲೇ ಆರಂಭವಾಗಬೇಕು- ಮಲ್ಲಿಕಾರ್ಜುನ ಖರ್ಗೆ

ತುಮಕೂರು: ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯ ಪರ್ವ ಕರ್ನಾಟಕದಿಂದಲೇ ಆರಂಭವಾಗಬೇಕು. ಹಲವು ಹೊಸತುಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ. ಅದೇರೀತಿ ಈ ಬಾರಿಯ ಚುನಾವಣೆಯಲ್ಲೂ ಕರ್ನಾಟಕ ಮತ್ತೊಮ್ಮೆ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗಲಿದೆ ಎಂಬ ನಂಬಿಕೆ ವಿಶ್ವಾಸ ನನಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನುಡಿದರು.

ಮಾಜಿ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ನೇತೃತ್ವದಲ್ಲಿ ಕೊರಟಗೆರೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾಂಗ್ರೆಸ್ ಭವನ ಉದ್ಘಾಟನೆ ಮಾಡಿ ನಂತರ ಜಮಾಯಿಸಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.

ಜಾತಿ, ಧರ್ಮದ ಹೆಸರಲ್ಲಿ ದೇಶದ ಜನರಲ್ಲಿ ಕೋಮುವಾದವನ್ನು ಭಿತ್ತುವುದರ ಅಶಾಂತಿ ಉಂಟುಮಾಡುತ್ತಿರುವÀ, ಭ್ರಷ,್ಟ ಬಡವರ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಬಿಜೆಪಿ ಸರ್ಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಕಿತ್ತೊಗೆದು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಮನವಿ ಮಾಡಿದರು.

Big Gadared in Congress Function in kortagere

ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಶೂನ್ಯ, ಪ್ರಧಾನಿ ಮೋದಿ ಅವರು ನೀಡಿದ್ದ ಯಾವುದೇ ಭರವಸೆಗಳು ಈಡೇರಿಲ್ಲ, ಬದಲಾಗಿ ಉದ್ಯೋಗಗಳು ಕಡಿತಗೊಂಡು ಲಕ್ಷಾಂತರಜನ ಬೀದಿಗೆ ಬಿದ್ದರು, ಮೋದಿ ಅವರು, ಸರ್ಕಾರದ ವಾಹನ ಹಾಗೂ ಇನ್ನಿತರ ಸೌಲಭ್ಯಗಳನ್ನು ಬಳಸಿಕೊಂಡು ಚುನಾವಣಾ ಪ್ರಚಾರಕ್ಕೆಕರ್ನಾಟಕಕ್ಕೆ ಆಗಮಿಸಿ ನನ್ನ ಹಾಗೂ ಸೋನಿಯಾಗಾಂಧಿ ವಿರುದ್ದ ಟಿಕೆಗಳನ್ನು ಮಾಡುತ್ತಾರೆಯೇ ಹೊರತು ಯಾವುದೇ ಅಭಿವೃದ್ದಿ ಕುರಿತು ಮಾತನಾಡುವುದಿಲ್ಲ, ಅವರು ಮಾಡಿದಅಭಿವೃದ್ದಿ ಶೂನ್ಯಎಂದು ಮೋದಿ ವಿರುದ್ದ ಖರ್ಗೆ ಹರಿಹಾಯ್ದರು.

ಇನ್ನೂರಾಜ್ಯ ಬಿಜೆಪಿ ಸರ್ಕಾರ 40% ಗೆ ಹೆಸರುವಾಸಿ, ಸರ್ಕಾರದ ಸಚಿವರು, ಶಾಸಕರುಕಮೀಷನ್‍ದಂಧೆಯಿಂದಾಗಿಗುತ್ತಿಗೆದಾರರು ಬೀದಿ ಪಾಲಾಗುತ್ತಿದ್ದಾರೆಎಂದು ಬೊಮ್ಮಾಯಿ ಸರ್ಕಾರದ ವಿರುದ್ದಕಿಡಿಕಾರಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪಕ್ಷ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ನೌಕರಿ ಪಡೆಯಲು ಪದವಿ ಬೇಕಿಲ್ಲ, ಸರ್ಕಾರಕ್ಕೆ ಲಂಚ ಕೊಡಲು ಆಸ್ತಿ ಇರಬೇಕು ಎಂಬ ಭಾವನೆಯನ್ನು ಬಿಜೆಪಿ ಜನರಲ್ಲಿ ಬೆಳೆಸುತ್ತಿದೆ. ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಭ್ರμÁ್ಟಚಾರ ಉತ್ತುಂಗಕ್ಕೇರಿದೆ ಎಂದು ದೂರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೂಗಿನ ನೇರಕ್ಕೆ ಭ್ರμÁ್ಟಚಾರ ನಡೆಯುತ್ತಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ಬೊಮ್ಮಾಯಿ ಸರ್ಕಾರದಲ್ಲಿನ ಭ್ರμÁ್ಟಚಾರದ ಪ್ರಮಾಣದ ಬಗ್ಗೆ ಸಂಪೂರ್ಣ ವರದಿ ಮತ್ತು ಭ್ರμÁ್ಟಚಾರದ ಆರೋಪಗಳ ಬಗ್ಗೆ ಕರ್ನಾಟಕ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಈ 40 ಪಸೆರ್ಂಟ್ ಕಮಿಷನ್ ಸರ್ಕಾರದಲ್ಲಿ ಭ್ರμÁ್ಟಚಾರವು ಆವರಿಸಿರುವ ರೀತಿ ಇಡೀ ರಾಜ್ಯವನ್ನೇ ನಾಚಿಸುವಂತೆ ಮಾಡಿದೆ. ಕರ್ನಾಟಕ ಸೋಪ್ಸ್ ಅಂಡ್ ಡಿಟಜೆರ್ಂಟ್ಸ್ ಲಿಮಿಟೆಡ್ ಅಧ್ಯಕ್ಷ ಹಾಗೂ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ 40 ಲಕ್ಷ ರೂಪಾಯಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನ್ನು ನಾವು ನೋಡಿದ್ದೇವೆ ಎಂದು ಅವರು ದೂರಿದರು.

ಕಾರ್ಯಕ್ರಮದ ರೂವಾರಿಗಳಾದ ಕೊರಟಗೆರೆ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಇವತ್ತಿನರಾಜೀವ ಭವನದಉದ್ಘಾಟನಾ ಸಮಾರಂಭಕ್ಕೆ, ಎಐಸಿಸಿ ಅಧ್ಯಕ್ಷರು ಆಗಮಿಸಿದ್ದು ನಮ್ಮೆಲ್ಲರಿಗೂಅತೀವ ಸಂತಸತಂದಿದೆ, ಈ ಭವನಯಾರೊಬ್ಬರ ಸ್ವತ್ತುಅಲ್ಲ, ಇದುಕಾಂಗ್ರೆಸ್ ಪಕ್ಷದದೇಗುಲ ಎಂದರು.

ಭಾರತಕ್ಕೆಗಟ್ಟಿ ಬುನಾದಿ ಹಾಕಿದ ಪಕ್ಷಅದುಕಾಂಗ್ರೆಸ್ ಪಕ್ಷ, ಕಾಂಗ್ರಸ್‍ನಕೊಡುಗೆದೇಶಕ್ಕೆಅಪಾರ, ಭ್ರಷ್ಟ, ಕೋಮುವಾದಿ ಬಿಜೆಪಿ ಸರ್ಕಾರದೇಶದಲ್ಲಿಅಶಾಂತಿಉಂಟುಮಾಡುತ್ತಿದೆ, ಮುಂಬರುವಕರ್ನಾಟಕ ವಿಧಾನಸಭಾಚುನಾವಣೆಯಲ್ಲಿ ಮತದಾರರು ಈ ಸರ್ಕಾರಕ್ಕೆತಕ್ಕ ಪಾಠ ಕಲಿಸಲಿದ್ದಾರೆಎಂದು ಸರ್ಕಾರದ ವಿರುದ್ದಕೆಂಡಕಾರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಮಾತನಾಡಿ ಡಬಲ್ ಇಂಜೀನ್ ಸರ್ಕಾರ ಜನರನ್ನೂ ದಾರಿ ತಪ್ಪಿಸಿ ಮೂರ್ಖರನ್ನಾಗಿಸುತ್ತಿದೆ, ಬಿಜೆಪಿ ಸರ್ಕಾರ ಬಂದಾಗಿನಿಂದಲೂಒಂದರ ಮೇಲೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಈ ಬಾರಿ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಿ, ನಮ್ಮಕಾಂಗ್ರೆಸ್ ಸರ್ಕಾರ ಬರಲಿಕ್ಕೆ ಪ್ರತಿಯೊಬ್ಬಕಾರ್ಯಕರ್ತರು ಶ್ರಮಿಸಬೇಕುಎಂದುಕರೆ ನೀಡಿದರು. ಡಾ.ಜಿ.ಪರಮೇಶ್ವರಅವರನ್ನು ಈ ಬಾರಿ ಹೆಚ್ಚಿನ ಮತಗಳ ಅಂತರದಿಂದಗೆಲ್ಲಿಸುವುದರ ಮೂಲಕ ಅವರ ಕೈ ಬಲಪಡಿಸಬೇಕು, ಹಾಗೇ ಅವರ ನೇತೃತ್ವ ಈ ಬಾರಿಯಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎಚ್.ಮುನಿಯಪ, ಬಿ.ಎಲ್.ಶಂಕರ್, ಸಲೀಂ ಅಹಮ್ಮದ್, ಸತೀಶ್ ಜಾರಕಿಹೊಳಿ,ಎಲ್.ಹನುಮಂತಯ್ಯ, ರಾಣೀಸತೀಶ್, ಎಚ್. ಆಮಜನೇಯ, ಜಿಲ್ಲೆಯ ಮುಖಂಡರಾದ ರಾಜಣ್ಣ, ವೆಂಕಟರಮಣಪ್ಪ, ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಬ್ಲಾಕ್ ಅಧ್ಯಕ್ಷ ಅಶ್ವಥ ನಾರಾಯಣ್, ಗ್ರಾಮಾಂತರ ಅಧ್ಯಕ್ಷರಾದ ಅರಕೆರೆ ಶಮಖರ್ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು
.
ಕ್ಷೇತ್ರದ ಕಾಂಗ್ರೆಸ್‍ನ ಮುಂಚೂಣಿ ಘಟಕಗಳ ಪಧಾಧಿಕಾರಿಗಳು, ಜಿ.ಪಂ. ತಾ.ಪಂ ಮತ್ತು ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯ್ತಿ ಮಾಜಿ ಮತ್ತು ಹಾಲಿ ಚುನಾಯಿತ ಜನಪ್ರತಿನಿಧಿಗಳು, ಸಹಕಾರ ಕ್ಷೇತ್ರದ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಕಾಂಗ್ರೆಸ್ ಪಕ್ಷದ ಎಲ್ಲಾ ಪಧಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Road Show

ರೋಡ್ ಶೋ:
ಕೊರಟಗೆರೆ ಬಸ್ ನಿಲ್ದಾಣದಿಂದ ಹೊರಟ ಪ್ರಜಾದ್ವನಿ ಯಾತ್ರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಬಸ್‍ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ,ರಾಜ್ಯಕಾಂಗ್ರೆಸ್‍ಉಸ್ತುವಾರಿರಣದೀಪಸಿಂಗ್ ಸುರ್ಜೇವಾಲಾ, ಮಾಜಿಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ.ಜಿ.ಪರಮೇಶ್ವರ ಹಾಗೂ ಇನ್ನೂ ಹಲವು ನಾಯಕರು ಇದ್ದರು. ರಸ್ತೆಯ ಉದ್ದಕ್ಕೂ ಕಾಂಗ್ರೆಸ್‍ಕಾರ್ಯಕರ್ತರ ಹರ್ಷೊದ್ದಾರ ಮುಗಿಲು ಮುಟ್ಟಿತು.

Leave a Reply

Your email address will not be published. Required fields are marked *