ತುಮಕೂರು.ಸೆ.14:ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಸರಕಾರಿ ಆದೇಶಗಳನ್ನು ಸರಕಾರಿ ನೌಕರರ ಪರವಾಗಿ ಮಾಡಿಸಿದ್ದು,ಇದರ ಹಿಂದಿನ ಶಕ್ತಿ ನೀವು.ಮುಂದೆಯೂ ಇದೇ ರೀತಿಯ ಸಹಕಾರ ನೀಡದರೆ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ನಗರದ ಗ್ರಂಥಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಕೇಂದ್ರ ಸಂಘ, ಹಾಗು ತುಮಕೂರು ಜಿಲ್ಲಾ ಶಾಖೆಯ ವತಿಯಿಂದ ಆಯೋಜಿಸಿದ್ದ ಪ್ರತಿಬಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಕ್ಷರಿ,ಪ್ರತಿಭಾ ಪುರಸ್ಕಾರ ಒಂದೇ ಬಾರಿ ಸಿಗುವ ಅವಕಾಶ. ಸರಕಾರಿ ನೌಕರರು ಮಧ್ಯಮವರ್ಗಕ್ಕೆ ಸೇರಿದವರು, 1920 ಸರಕಾರಿ ನೌಕರರ ಸಂಘ ಆರಂಭವಾಯಿತು. ನೌಕರರರು ಹಕ್ಕು ಮತ್ತು ಸೌಲಭ್ಯಗಳಿಗೆ ಹೋರಾಟ ಸಹಜ. ನಮ್ಮ ಮಕ್ಕಳ ಸಾಧನೆ ಮಾಡಿದಾಗ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಇದುವರೆಗೂ 40 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ.ಮಕ್ಕಳ ಸಾಧನೆ ತಂದೆ.ತಾಯಿಗಳಿಗೆ ಗೌರವ ತರುವಂತದ್ದು. ಇನ್ನು ಮುಂದೆಯೂ ಪ್ರತಿಭಾ ಪುರಸ್ಕಾರ ನಡೆಯಲಿದೆ.ಆ ರೀತಿಯ ನಿರ್ಣಯ ಕೈಗೊಂಡಿದ್ದೇವೆ. ವಿದ್ಯೆ ಸ್ವಾಭಿಮಾನದ ಬದುಕು ಸಾಧ್ಯ.ದೊಡ್ಡ ಹುದ್ದೆಗಳಿಗೆ ಹೋದಾಗ ಸಂಬAಧಗಳನ್ನು ಮರೆಯಬೇಡಿ.ಹಿರಿಯರ ಮೇಲಿನ ಗೌರವ ಕಡಿಮೆಯಾಗ ಬಾರದು. ನಿಮ್ಮ ಸಾಧನೆಯ ಹಿಂದೆ ಅವರ ಶ್ರಮವಿದೆ ಎಂದು ಕಿವಿ ಮಾತು ಹೇಳಿದರು.
ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೆ ಬಂದಿದೆ. ಒಳ್ಳೆಯ ವೇತನ ದೊರೆತಿದೆ. 21500 ಕೋಟಿ ನೀಡಿದೆ.ಅಗಸ್ಟ್ ತಿಂಗಳ ವೇತನಕ್ಕೆ ಸೇರಿದೆ.ಇದಕ್ಕಾಗಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರಿಗೆ ಆಭಿನಂದನೆ ಸಲ್ಲಿಸುತ್ತೇನೆ.ನಮ್ಮ ಹೋರಾಟದಲ್ಲಿ ತುಮಕೂರು ಜಿಲ್ಲೆ ಸಕ್ರಿಯವಾಗಿದೆ. ಸಂಘ ಅರ್ಥಿಕವಾಗಿ ಸದೃಢವಾಗಿದೆ.ನಿಮ್ಮೆಲ್ಲರ ಬೆಂಬಲಕ್ಕೆ ಚಿರಋಣಿ. ಎನ್.ಪಿ.ಎಸ್.ಹೋಗಿ ಒಪಿಎಸ್ ಶೀಘ್ರವಾಗಿ ಜಾರಿಗೆ ಬರಲಿದೆ.25ಕ್ಕು ಹೆಚ್ಚು ಸರಕಾರಿ ಆದೇಶ ಮಾಡಿಸಿದ್ದೆನೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಪ್ರತಿಭಾ ಪುರಸ್ಕಾರ ಎನ್ನುವುದು ಮಕ್ಕಳ ಶ್ರಮಕ್ಕೆ ಸಿಗುವ ಗೌರವ.ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ಒಣ ಭಾಷಣಗಳಿಂದ ಯಾವುದೇ ಪ್ರಯೋಜನವಿಲ್ಲ.ಮಕ್ಕಳ ಪ್ರತಿಭೆಯನ್ನು ವಿಕಾಸಗೊಳಿಸುವ ಸಂಪನ್ಮೂಲಗಳ ವ್ಯಕ್ತಿಗಳನ್ನು ಆಹ್ವಾನಿಸಿ ಮಕ್ಕಳಿಗೆ ಭವಿಷ್ಯದಲ್ಲಿ ಎದುರಿಸಬಹುದಾದ ಸವಾಲುಗಳ ಕುರಿತು ಜಾಗೃತಿ ಮೂಢಿಸಿ,ಆ ಮೂಲಕ ಮಕ್ಕಳ ಶೈಕ್ಷಣಿಕ,ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಮಾಡಿ ಎಂದು ಸಲಹೆ ನೀಡಿದರು.
ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜು ಮಾತನಾಡಿ,ಪ್ರತಿಭಾ ಪುರಸ್ಕಾರ ಅಂಕಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಿದೆ.ಸಮಾಜದಲ್ಲಿ ವಿದ್ಯಾವಂತರಿAದಲೇ ಅತಿ ಹೆಚ್ಚು ಅವಘಡ, ಉಗ್ರಗಾಮಿ ಗಳಲ್ಲಿ ವಿದ್ಯಾವಂತರೇ.ಜಾತಿಯಿAದಲೇ ಎಲ್ಲವೂ, ಪ್ರತಿಭೆಯನ್ನು ಜಾತಿಯ ಮೂಲಕ ಅಳೆಯಲಾಗುತ್ತಿದೆ. ಜಾತಿ ವ್ಯವಸ್ಥೆ ಹೋಗದೆ ಅಭಿವೃದ್ಧಿ ಸಾಧ್ಯ.ಜಾತಿ,ಧರ್ಮಗಳ ನಡುವೆ ಯುದ್ದ ನಡೆದರೆ ಆಶ್ಚರ್ಯ ವಿಲ್ಲ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ,ಪ್ರತಿಭೆ ಯಾರ ಸ್ವತ್ತು ಅಲ್ಲ.ಕಠಿಣ ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ಎಲ್ಲವನ್ನು ತನ್ನದಾಗಿಸುವ ಶಕ್ತಿ ಇಂದಿನ ಮಕ್ಕಳಿಗೆ ಇದೆ. ಬದಲಾವಣೆ ಜಗದ ನಿಯಮ, ಆ ಬದಲಾವಣೆಗೆ ಸಿದ್ದರಾದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಸಾಧ್ಯ. ಬುದ್ದಿ ಮತ್ತು ವಿದ್ಯೆ ಎರಡು ಒಂದಾದರೆ ಮಾತ್ರ ಹೆಚ್ಚು ಅಂಕಗಳಿಸಲು ಸಾಧ್ಯ.ಇದಕ್ಕೆ ಕೌಶಲ್ಯ ಎಂಬ ಹೆಸರಿದೆ.ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಬದುಕಿನ ಮಹತ್ವದ ಘಟಕಗಳು, ನಿರಂತರತೆ ಕಾಯ್ದುಕೊಂಡರೆ ಒಳ್ಳೆಯ ಸಾಧನೆ ಸಾಧ್ಯ.ನಿಮ್ಮ ಸಾಧನೆಗೆ ಅಡ್ಡ ದಾರಿಗಳಿಲ್ಲ.ನಿಮಗೆ ನೀವೆ ಶಿಲ್ಲಿಗಳು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ 200 ಕ್ಕೂ ಹೆಚ್ಚು ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ಮಕ್ಕಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ನಿವಾಸ್ ತಿಮ್ಮೇಗೌಡ, ಖಜಾಂಚಿ ಡಾ.ಸಿದ್ದರಾಮಯ್ಯ, ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಪಾಂಡುರAಗ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಜಿ.ವಿ.ಮೋಹನಕುಮಾರ, ವಿವಿಧ ನೌಕರರ ಸಂಘದ ಅಧ್ಯಕ್ಷರಾದ ಆರ್.ಪರಶಿವಮೂರ್ತಿ, ರಮೇಶ್ ಹೆಚ್.ವಿ., ಬಿ.ಆರ್. ವೆಂಕಟೇಶ್, ಕರುಣಾಕರಶೆಟ್ಟಿ, ಹೆಚ್.ಎಂ.ರುದ್ರೇಶ್, ಪದಾಧಿಕಾರಿಗಳಾದ ಟಿ.ಎನ್.ಜಗದೀಶ್, ಮಂಜುಳ, ಹೆಚ್.ಕೆ.ನರಸಿಂಹಮೂರ್ತಿ, ಆರ್ ಪರಶಿವಮೂರ್ತಿ, ರೇಣುಕಾರಾಧ್ಯ, ದೊಡ್ಡಯ್ಯ,ಆರ್.ವೆಂಕಟೇಶ್, ದೇವರಾಜ್, ಹೆಚ್.ಇ.ರಮೇಶ್, ಡಿ.ಪದ್ಮರಾಜ್,ಜಿ.ಎಸ್.ಇರ್ಫಾಅಹಮದ್ ಮತ್ತಿತರರು ಉಪಸ್ಥಿತರಿದ್ದರು.