ವಿಶ್ವವಿದ್ಯಾಲಯದ ಉನ್ನತ ಹುದ್ದೆಯನ್ನು ಪಡೆದು ದಾಖಲಾಗುವ ಅವಕಾಶಗಳಿಂದ ವಂಚಿತರಾದರು ಪ್ರೊ.ಮುಜಾಫರ್ ಅಸಾದಿ

ತುಮಕೂರು : ಕಳೆದ 10ದಿನಗಳ ಹಿಂದೆ ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯಲ್ರಮವೊಂದರಲ್ಲಿ ಲವಲವಿಕೆಯಿಂದಲೇ ಭಾಗವಹಿಸಿದ್ದ ಪ್ರೊ.ಮುಜಾಫರ್ ಅಸಾದಿಯವರು ಇಂದು ನಿಧನ ಹೊಂದಿದ್ದಾರೆಂಬುದನ್ನು ನಂಬಲಾಗುತ್ತಿಲ್ಲ.

ಪ್ರೊ.ಮುಜಾಫರ್ ಅಸಾದಿಯವರ ಬಗ್ಗೆ ನಾಗರಾಜ ಶೆಟ್ಟಿಯವರು ಈ ರೀತಿ ಹೇಳಿದ್ದಾರೆ.

ತುಮಕೂರು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಸಿದ್ದ ಚಿತ್ರ, ಪ್ರೊ.ಮುಜಾಫರ್ ಅಸಾದಿ, ಅಯ್ಯನೂರು ಮಂಜುನಾಥ, ಜೆ.ಸಿ.ಮಾಧುಸ್ವಾಮಿ ಮತ್ತು ದಿನೇಶ್ ಅಮ್ಮಿನ್ ಮಟ್ಟು

ಡಾ ಮುಜಾಫರ್ ಅಸ್ಸಾದಿಯವರು ಇನ್ನಿಲ್ಲವೆಂದು ಕೇಳಿ ದಂಗಾಗಿ ಹೋದೆ. ಅವರು ಅಳವಾದ ಓದು, ವಿಚಾರವಂತಿಕೆಯಿಂದ ಸ್ಪಷ್ಟವಾದ ನಿಲುವು ತಾಳುತ್ತಿದ್ದ ಜನಪರ ವಿದ್ವಾಂಸ. ಒಂದಿನಿತೂ ಕಹಿ ಇಲ್ಲದೆ ಹೇಳಬೇಕಾದ್ದನ್ನು ನೇರವಾಗಿ ಹೇಳುತ್ತಿದ್ದ ಅವರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗದೇ ಹೋಯಿತು. ಆದರೆ ಆ ಬಗ್ಗೆ ಆಕ್ಷೇಪಿಸದೆ, ನಿರ್ಮಲ ಮನಸ್ಸಿನಿಂದ ಸಾಮಾಜಿಕ ಆಗುಹೋಗುಗಳ ಬಗ್ಗೆ ಕಾಳಜಿ ವ್ಯಕ್ತ ಪಡಿಸಲು ಅವರೆಂದೂ ಹಿಂಜರಿಯುತ್ತಿರಲಿಲ್ಲ.

ನನಗೆ ಕೆಲವರು ಅಸ್ಸಾದಿ ಗೆಳೆಯರಿದ್ದರು. ದಕ್ಷಿಣ ಕನ್ನಡದಲ್ಲೂ ಇವರ ಸಂಖ್ಯೆ ಕಡಿಮೆ. ಡಾ ಮುಜಾಫರ್ ಅಸ್ಸಾದಿಯವರೇ ಹೇಳುವಂತೆ ‘ಅಸ್ಸಾದಿಗಳು ವಸಾಹತು ಶಾಹಿಯ ಜನಗಣತಿಯಲ್ಲಾಗಲೀ, ಕುಲಶಾಸ್ತ್ರೀಯ ಅಧ್ಯಯನಗಳಲ್ಲಾಗಲೀ ದಾಖಲಾಗುವುದೇ ಇಲ್ಲ. ಸೋಜಿಗವೆಂದರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ, ಸರ್ಕಾರಗಳ ಮತ್ತು ಆಯೋಗಗಳ ಪಟ್ಟಿಯಲ್ಲಿಯೂ ದಾಖಲಾಗುವುದಿಲ್ಲ’

ಇಂತಹ ಎಲ್ಲೂ ದಾಖಲಾತಿಗೆ ಒಳಗಾಗದ ಅಸ್ಸಾದಿಗಳಲ್ಲಿ ಒಬ್ಬರಾದ ಡಾ ಮುಜಾಫರ್ ಅಸ್ಸಾದಿಯವರೂ ಅತ್ಯುನ್ನತ ಶೈಕ್ಷಣಿಕ ಅರ್ಹತೆಗಳಿದ್ದೂ ವಿಶ್ವವಿದ್ಯಾಲಯದ ಉನ್ನತ ಹುದ್ದೆಯನ್ನು ಪಡೆದು ದಾಖಲಾಗುವ ಅವಕಾಶಗಳಿಂದ ವಂಚಿತರಾದರು. ದಮನಕ್ಕೆ ಒಳಗಾದವರ ಅರ್ಹತೆಯೂ ಪರಿಗಣನೆಗೆ ಒಳಗಾಗುವುದಿಲ್ಲ ಎನ್ನುವುದಕ್ಕೆ ಇದು ಉದಾಹರಣೆ.

ಅಪರೂಪದ ಒಳನೋಟಗಳನ್ನು ನೀಡಬಲ್ಲ, ಸಂದಿಗ್ಧ ಸಮಯದಲ್ಲಿ ಸರಿಯಾಗಿ ಯೋಚಿಸಬಲ್ಲ ವಿಚಾರವಂತನನ್ನು ಕಳೆದುಕೊಂಡಿದ್ದೇವೆ.
ಆದರೆ ಅಸ್ಸಾದಿ ಅವರ ನೆನಪು ಸ್ಥಿರವಾಗಿರುತ್ತದೆ.

ನಮನಗಳು
ನಾಗರಾಜ ಶೆಟ್ಟಿ

ದಂತಗೋಪುರಕ್ಕೆ ಸೀಮಿತವಾಲಿಲ್ಲ.

ರಾಜಕಾರಣ, ಸಾಮಾಜಿಕ ಚಳುವಳಿಗಳು, ಆರ್ಥಿಕತೆ, ಅಭಿವೃದ್ಧಿ, ಜಾತಿ ಧರ್ಮ ಮತ್ತು ಲಿಂಗ ಸಮಾನತೆಯ ಪ್ರಶ್ನೆಗಳ ಕುರಿತು ಮೂರು ದಶಕಗಳಿಗೂ ಹೆಚ್ಚು ವರ್ಷ ಭೋಧನೆ, ಸಂಶೋಧನೆ, ಬರವಣಿಗೆ ಮಾಡಿ ಅಪಾರವಾದ ಬೌದ್ಧಿಕ ಕಾಣ್ಕೆಯನ್ನು ಕೊಟ್ಟ ಡಾ. ಮುಜಾಪ್ಫರ್ ಅಸ್ಸಾದಿ ನಮ್ಮನ್ನೆಲ್ಲ ಅಗಲಿದ್ದಾರೆ.

ಕೇವಲ ಅಕಾಡೆಮಿಕ್ ವಲಯದ ದಂತಗೋಪುರಕ್ಕೆ ಸೀಮಿತವಾಗದೆ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಬರೆಯುತ್ತಿದ್ದ ಅಸ್ಸಾದಿಯವರ ಸಾವು ಈ ನಾಡಿಗೆ ಆದ ಬಹಳ ದೊಡ್ಡ ನಷ್ಟ.

ಕನ್ನಡದಲ್ಲಿ ಬರೆದಿರುವುದರ ಜೊತೆಗೆ ಇಂಗ್ಲೀಷಿನಲ್ಲೂ ಅಪಾರವಾದ ಬರವಣಿಗೆ ಮಾಡಿರುವ ಅಸ್ಸಾದಿಯವರ ಬರಹಗಳನ್ನು ಓದಿ, ಚರ್ಚಿಸುವ ಮೂಲಕ ಅವರನ್ನು ಗೌರವಿಸುವ ಜವಾಬ್ದಾರಿ ಎಲ್ಲರ ಮೇಲಿದೆ.

ಹೋಗಿಬನ್ನಿ ಸರ್

ವಿ.ಎಲ್.ನರಸಿಂಹಮೂರ್ತಿ

Leave a Reply

Your email address will not be published. Required fields are marked *