ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಚಿಂತನೆಗಳು ಪ್ರೇರಣದಾಯಕ

ತುಮಕೂರು: ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರು ಸಮಾಜವಾದಿ ಚಳುವಳಿಯ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರು ತಮ್ಮ ಜೀವನದ ಉದ್ದಕ್ಕೂ ರೈತರು ಮತ್ತು ದುರ್ಬಲ ವರ್ಗದವರ ಪರವಾಗಿ ಹೋರಾಡಿದರು. ಅವರ ಚಿಂತನೆಗಳು ಮತ್ತು ಹೋರಾಟಗಳು ಇಂದಿಗೂ ಪ್ರೇರಣಾದಾಯಿಯಾಗಿವೆ ಎಂದು ನಿವೃತ್ತ ಮೌಲ್ಯಮಾಪನ ಕುಲ ಸಚಿವ ಡಾ. ಕೆ. ಜೆ. ಸುರೇಶ್ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೆÇ್ರ. ಎಂ.ಡಿ. ನಂಜುಂಡಸ್ವಾಮಿಯವರು ಹೋರಾಟ ಮತ್ತು ಚಿಂತನೆಗಳು ರೈತರ ಹಕ್ಕುಗಳಿಗಾಗಿ ಮತ್ತು ಆರ್ಥಿಕ ಸುಧಾರಣೆಗಾಗಿ ಮೀಸಲಾಗಿದ್ದವು. ಅವರಿಗೆ ಈ ಮನೋಭಾವ ಮೂಡಲು ಅವರು ಬೆಳೆದ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಹಿನ್ನೆಲೆ ಪ್ರೇರಣೆ ನೀಡಿತು. ಹಾಗಾಗಿ ಅವರು ಸಮಾಜವಾದಿ ಚಳುವಳಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಭಾಗವಹಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಶ್ರಮಿಸಿದರು ಎಂದರು.

ಭಾರತವು ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ. ನಮ್ಮ ದೇಶದ ಬೆನ್ನೆಲುಬು ರೈತ. ಅತಿ ಹೆಚ್ಚು ಬೆಳೆ ಬೆಳೆಯುವ ಪ್ರದೇಶಗಳು ದೇಶದ ಆರ್ಥಿಕತೆಗೆ ಬಹುಮುಖ್ಯ, ಆದರೆ ನಮ್ಮ ಯುವಜನತೆ ದೇಶ ವಿದೇಶಗಳ ಕಾರ್ಖಾನೆಗಳಲ್ಲಿ ಬಟ್ಟೆ ತಯಾರಿಕೆ, ಜಂಕ್ ಫುಡ್ ತಯಾರಿಕೆಯಂತ ಕೆಲಸಗಳಿಗೆ ಸೇರುತಿದ್ದಾರೆಯೇ ಹೊರತು ಭತ್ತ, ಗೋಧಿ, ರಾಗಿ ಬೆಳೆಗಳನ್ನು ಬೆಳೆಯಲು ಏಕೆ ಮುಂದೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಮಾತನಾಡಿ, ರೈತರ ಸಂಕಷ್ಟಗಳು ಹೆಚ್ಚಾಗುತ್ತಿದ್ದು ನಾವು ಕೇವಲ ವಿದೇಶಿ ಕಂಪನಿಗಳಿಗೆ ಮಣೆ ಹಾಕುತ್ತಿದ್ದೇವೆ. ರೈತರಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಬೇಕು. ವಿದ್ಯಾರ್ಥಿಗಳು ತರಗತಿಗಳಿಗೆ ಸೀಮಿತವಾಗಬಾರದು, ಬದಲಿಗೆ ರೈತರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಅವರ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಕೃಷಿಯನ್ನು ಗೌರವಿಸಬೇಕು ಎಂದರು.

ರೈತರ ಮಕ್ಕಳು ಎಂದು ನಾವು ನಾಚಿಕೆ ಪಡಬಾರದು. ಕಠಿಣ ಪರಿಶ್ರಮದಿಂದ ಕಷ್ಟಗಳನ್ನು ಎದುರಿಸಿ ದೇಶದ ಬೆನ್ನೆಲುಬಾಗಿ ನಿಲ್ಲುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಪ್ರೊ. ಜಯಶೀಲ, ಪ್ರೊ.ಎಂ. ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ.ಮುನಿರಾಜು ಎಂ., ಪ್ರಾಧ್ಯಾಪಕರಾದ ಪ್ರೊ. ವಿಲಾಸ್ ಕದ್ರೋಲ್ಕರ್, ಡಾ. ನೀಲಕಂಠ ಎನ್.ಟಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *