ತುಮಕೂರು: ಹೊಸ ಹೊಸ ಕೋರ್ಸ್ ಮತ್ತು ಪಠ್ಯಕ್ರಮಕ್ಕೆ ಹೊಂದಿಕೊಳ್ಳಲು ಪ್ರಾಧ್ಯಾಪಕರು ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಹೊಸ ವಿಚಾರಗಳು ಮತ್ತು ಜ್ಞಾನ ವೃದ್ಧಿಯಾಗಿ ಕಲಿಸುವಿಕೆಗೆ ಅನುಕೂಲವಾಗುತ್ತದೆ ಎಂದು ಧಾರವಾಡದ ಐಐಟಿ ನಿರ್ದೇಶಕರಾದ ಡಾ. ಮಹೇಂದ್ರ ಪ್ರಸನ್ನ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್‍ನ ಪಿಜಿ ಸೆಮಿನಾರ್ ಹಾಲ್ ನಲ್ಲಿ ಎಲೆಕ್ಟ್ರಿಕಲ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ “ನಿಸ್ತಂತು ಸಂವಹನ ಮತ್ತು ಸರ್ವಕ್ಕೂ ಅಂರ್ತಜಾಲ” ವಿಷಯ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ ಇಂದು ಚಾಲನೆ ಅವರು ಮಾತನಾಡಿದರು.
‘ತಾಂತ್ರಿಕ ವಿದ್ಯಾರ್ಥಿಗಳಿಗೆ ವರ್ಷದಿಂದ ವರ್ಷಕ್ಕೆ ಪಠ್ಯಕ್ರಮದಲ್ಲಿ ಪ್ರತಿಶತ 30% ಹೊಸದಾಗಿ ಕೂಡಿಸಿ, ತಂತ್ರಜ್ಞಾನ ಆಧಾರಿತ ವಿಷಯಗಳನ್ನು ಕೊಡಲಾಗುತ್ತಿದೆ. ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ಸೈಬರ್ ಕ್ರೈಂ ನಂತಹ ವಿಷಯಗಳಿಗೆ ತಂತ್ರಜ್ಞಾನ ಎನ್ನುವಂತಹದ್ದು ಬಹಳ ಅತ್ಯವಶ್ಯಕವಾಗಿದೆ. ಜೊತೆಗೆ ಈ ಎಲ್ಲ ವಿಷಯಗಳಿಗೆ ಜಾಗತಿಕವಾಗಿ ಮನುಷ್ಯನ ಶಕ್ತಿ ಸಾಮಥ್ರ್ಯವು ಬೇಕು. ಮತ್ತು ಹೊಸ ಹೊಸ ವಿಷಯಗಳನ್ನು ಕಲಿಯುವಂತಹದ್ದು ಒಂದು ಕಲೆಯಾಗಿದ್ದು, ಹಾಗಾಗಿ ಇಂಟರ್ನೆಟ್ ಆಧಾರಿತ ವಿಷಯಗಳನ್ನು ಎಲ್ಲರೂ ಕಲಿತುಕೊಳ್ಳಬೇಕು’ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಲುಕ್ಸಆಫ್ಟ್ ಇಂಡಿಯಾದ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕರಾದ ಬ್ರಹ್ಮ ಚೈತನ್ಯ ಚಿನಿವಾರ ಮಾತನಾಡಿ ‘ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಹೊಸ ಯೋಜನೆಗಳನ್ನು ಮಾಡಲು ಹಾಗೂ ತಮ್ಮ ವೃತ್ತಿ ಕ್ಷೇತ್ರಕ್ಕೆ ಕಾಲಿಟ್ಟಾಗ ಇಂಟರ್ನೆಟ್ ಮತ್ತು ತಂತ್ರಜ್ಞಾನ ಎನ್ನುವಂತಹದ್ದು ಬಹಳ ಪ್ರಯೋಜನಕಾರಿಯಾಗುತ್ತದೆ. ನಾವು ಯಾವುದೇ ವಿಷಯವನ್ನೇ ಆಗಲಿ ಹೊಸದಾಗಿ ಕಲಿತಾಗ ಎಂದಿಗೂ ಅದು ವ್ಯರ್ಥವಾಗುವುದಿಲ್ಲ, ಎಲ್ಲಿಯಾದರೂ ಉಪಯೋಗಕ್ಕೆ ಬಂದೇ ಬರುತ್ತದೆ. ಜೊತೆಗೆ ಇಂದಿನ ಈ ಸಮ್ಮೇಳನವು ಮುಂದಿನ ಭವಿಷ್ಯದಲ್ಲಿ ಸಾಫ್‍ಟ್ವೇರ್ ಕಂಪನಿಗಳಲ್ಲಿ ಉದ್ಯೋಗಕ್ಕೆ ಹೋಗುವಂತಹ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಹಾಗಾಗಿ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು’ ಕಿವಿ ಮಾತು ಹೇಳಿದರು.
ಸಾಹೆ ವಿವಿ ರಿಜಿಸ್ಟರ್ ಡಾ. ಎಂ. ಜೆಡ್ ಕುರಿಯನ್ ಮಾತನಾಡಿ, ಇಂದು ಕಂಪ್ಯೂಟರ್ ಸೈನ್ಸ್, ಸೈಬರ್ ಕ್ರೈಂ ,ಎ.ಐ ನಂತಹ ತಂತ್ರಜ್ಞಾನ ಆಧಾರಿತ ವಿಷಯಗಳಿಗೆ ಬೋಧನೆ ಮಾಡಲು ಆ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಶಿಕ್ಷಕರು ಸಿಗುತ್ತಿರುವುದು ಬಹಳ ವಿರಳವಾಗಿದೆ. ಇಂದಿನ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಒಬ್ಬ ಶಿಕ್ಷಕ ಎಲ್ಲ ವಿಷಯಗಳಲ್ಲೂ ಪರಿಣಿತಿ ಹೊಂದಿ, ಬೋಧನೆ ಮಾಡಬೇಕು. ಬೋಧನೆ ಮಾಡಲು ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳು ಬಹಳ ಅನುಕೂಲವಾಗುತ್ತವೆ ಎಂದರು.
ಸ್ಪೇನ್‍ನ ಯುನಿವರ್ಸಿಟಿ ಆಫ್ ಜೇನ್ ನ ಪ್ರೊಫೆಸರ್ ಡಾ.ರೇಸಿಯೋ ಪೆರೆಜ್ ಡಿ ಪ್ರಾಡೊ, ಇಟಲಿಯ ಯೂನಿವರ್ಸಿಟಿ ಆಫ್ ರೋಮ್ ಟೊರ್ ವಗ್ರ್ಯಾಟಾದ ಡಾ.ಲೂಸಾ ಡಿ ನುಂಜಿಯೋ , ಮಲೇಶಿಯಾದ ಯುಪಿಎಸ್ ಐ ಯೂನಿವರ್ಸಿಟಿ ಕೌಲಾ ಲಂಪುರ್ ನ ಉಪನಿರ್ದೇಶಕಿ ಡಾ. ಸೀಕಹವೆಲಿಂಗ್ ಪರ್ಲೈನ್ ಅವರು ವೀಡಿಯೋ ಕಾನ್ಪರೆನ್ಸ್ ಮೂಳಕ ಸಂದೇಶ ನೀಡಿದರು.
ಎಸ್ ಎಸ್ ಐ ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ವಿಚಾರ ಸಂಕಿರಣದ ಸಂಯೋಜಕರು ಹಾಗೂ ಎಲೆಕ್ಟ್ರಿಕಲ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎನ್. ಈಶ್ವರಪ್ಪ ಮಾತನಾಡಿದರು.
ಡೀನ್ ಡಾ. ರೇಣುಕಾಲತಾ, ಹಿರಿಯ ಪ್ರಾಧ್ಯಾಪಕರಾದ ಡಾ.ಎಂ.ಸುರೇಶ್, ಡಾ.ಚಿದಾನಂದ ಮೂರ್ತಿ, ಡಾ.ಅಜಯ್ ಕುಮಾರ್ ಸೇರಿದಂತೆ ವಿವಿಧ ದೇಶದ ವಿವಿಧ ಕಾಲೇಜಿನಿಂದ ಬಂದ ಸಂಶೋಧನಾರ್ಥಿಗಳು, ಪ್ರಬಂಧ ಮಂಡಿಸುವ ವಿಷಯ ತಜÐರು ಬೇರೆ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.