ತಿಪಟೂರು-ಜನಸ್ಪಂದನಾ ಟ್ರಸ್ಟ್-ಸಂವಿಧಾನ ಸಂರಕ್ಷಣಾ ಪಡೆ ಸಹಯೋಗದಲ್ಲಿ ಜನ ಸ್ವಾತಂತ್ರೋತ್ಸವ

ತಿಪಟೂರು: ಜನಸ್ಪಂದನಾಟ್ರಸ್ಟ್ ತಿಪಟೂರು ಹಾಗೂ ಸಂವಿಧಾನ ಸಂರಕ್ಷಣಾ ಪಡೆ ಸಹಯೋಗದಲ್ಲಿ ಆಗಸ್ಟ್ 15ರಂದು ಸ್ಪತಂತ್ರ್ಯ ದಿನಾಚಾರಣೆ ಅಂಗವಾಗಿ ತಿಪಟೂರು ಗಾಂಧೀನಗರ ಪೊಲೀಸ್ ಚೌಕಿ ಸರ್ಕಲ್ ನಲ್ಲಿ ಜನಸ್ಪತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಮಾಜಿ ಟೂಡ ಅಧ್ಯಕ್ಷ ಸಿ.ಬಿ ಶಶಿಧರ್ ಹೇಳಿದರು.

ನಗರದ ಜನಸ್ಪಂದನಾ ಟ್ರಸ್ಟ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ್ಯ ದಿನವನ್ನ ಜನಸಂಭ್ರಮದ ಹಬ್ಬವಾಗಿಸ ಬೇಕು,ನಮ್ಮ ದೇಶ ನಮ್ಮ ಸ್ವತಂತ್ರ್ಯವನ್ನ ಪ್ರತಿಮನೆ ಮನಗಳಲ್ಲಿ ಹಬ್ಬವಾಗಿ ಆಚರಿಸಬೇಕು, ಹಬ್ಬವನ್ನ ಎಲ್ಲರೂ ಸಂಭ್ರಮಿಸಬೇಕು ಎನ್ನುವ ದೃಷ್ಠಿಯಿಂದ ಪ್ರತಿವರ್ಷದಂತೆ ತಿಪಟೂರು ಜಮಸ್ಪಂದನಾ ಟ್ರಸ್ಟ್ ವತಿಯಿಂದ ಜನಸ್ವತಂತ್ರ್ಯೋತ್ಸವ ಆಚರಿಸಲಾಗುತ್ತದೆ ಈ ಭಾರಿ ಸಂವಿಧಾನ ಸಂರಕ್ಷಣಾಪಡೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಜನ ಸ್ವತಂತ್ರ ದಿನದ ಅಂಗವಾಗಿ ತಿಪಟೂರು ನಗರದ ಕೋಡಿ ಸರ್ಕಲ್ ನಿಂದ ದೊಡ್ಡಪೇಟೆ,ಬಿ.ಹೆಚ್ ರಸ್ತೆ ಮೂಲಕ ನಗರಸಭೆ ವೃತ್ತ,ರೈಲ್ವೆಸ್ಟೇಷನ್ ರಸ್ತೆ.ಕಾರೋನೇಷನ್ ರಸ್ತೆ ಮೂಲಕ ಸಾಗಿ ಗಾಂಧೀನಗರ ಪೆÇೀಲೀಸ್ ಚೌಕಿ ಸರ್ಕಲ್ ನಲ್ಲಿ ಜನಸ್ವತಂತ್ರೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಶ್ರಮಿಕ ಸೇವಾನಿಗಳನ್ನ ಸನ್ಮಾನಿಸಲಾಗುವುದು ಎಂದು ತಿಳಿದರು.

ತಿಪಟೂರು ಜಮೀರ್ ಮತ್ತು ತಂಡದಿಂದ ಗೀತಾಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಸ್ವತಂತ್ರ್ಯ ಚಳುವಳಿ ಜನಚಳುವಳಿಯಾಗಿ ರೂಪುಗೊಂಡು,ಹಲವಾರು ಮಹನೀಯರ ಶ್ರನದಿಂದ ಸ್ವತಂತ್ರ್ಯ ದೊರೆತ್ತಿದೆ.ನಮ್ಮ ಸ್ವತಂತ್ರ್ಯ ಹೋರಾಟಗಾರರ ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು ಸ್ವತಂತ್ರ್ಯದಿಂದ.ಪ್ರತಿ ಮನೆಮನಗಳಲ್ಲಿ ಹಬ್ಬದಂತೆ ಆಚರಿಸಬೇಕು ಎಂದು ತಿಳಿಸಿದರು.

ಸಂವಿಧಾನ ಸಂರಕ್ಷಣಾಪಡೆ ಅಧ್ಯಕ್ಷ ಲೋಕೇಶ್ ಮಾತನಾಡಿ 79ನೇ ಸ್ವತಂತ್ರ್ಯದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ದೃಷ್ಠಿ ಎಲ್ಲಾಜನಾಂಗದ ಜನರು ಸೇರಿ ಹಬ್ಬವಾಗಿ ಆಚರಿಸಲಾಗುತ್ತದೆ.ಕಾರ್ಯಕ್ರಮದಲ್ಲಿ ಹಲವಾರು ಸಂಘಸಂಸ್ಥೆಗಳು ಭಾಗವಹಿಸುತ್ತಿವೆ ಎಂದು ತಿಳಿಸಿದರು

ಪತ್ರಿಕಾಘೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ತಿಮ್ಲಾಪುರ ದೇವರಾಜು.ಸದತ್,ತಿಪಟೂರು ಸೌಹಾರ್ದ ವೇದಿಕೆ ಅಧ್ಯಕ್ಷ ಅಲ್ಲಾಭಕ್ಷು,ಬೆಳೆಕಾವಲು ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೆಳಹಟ್ಟಿ.ಮೋಹನ್ ಸಿಂಘಿ.ಮುಂತ್ತಾದವರು ಉಪಸ್ಥಿತರಿದರು.

Leave a Reply

Your email address will not be published. Required fields are marked *