ಪೂಲೀಸ್-ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ವಕೀಲರ ವಿರುದ್ಧ ಪ್ರತಿಭಟನೆ

ತುಮಕೂರು : ತುಮಕೂರು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬೋವಿ ಸಮುದಾಯದ ಪೂಲೀಸ್ ಅಧಿಕಾರಿಯಾದ ದೊಡ್ಡಯ್ಯ ಮತ್ತು ಈ ಸಂಜೆ ಜಿಲ್ಲಾ ವರದಿಗಾರರಾದ ರಮೇಶ.ವಿ ರವರ ಮೇಲೆ ದಿನಾಂಕ ನವೆಂಬರ್ 5 ರಂದು ವಕೀಲರ ಗುಂಪು ನಡೆಸಿದ ಹಲ್ಲೆಯನ್ನು ಭೋವಿ ಸಮುದಾಯ ಖಂಡಿಸಿದೆ.

ದೊಡ್ಡಯ್ಯನವರು ಕರ್ತವ್ಯ ನಿರಾತರಾಗಿದ್ದಾಗ ಈ ಘಟನೆ ನಡೆದಿದ್ದು, ವಕೀಲರ ಪ್ರತಿಭಟನೆಯ ಸುದ್ದಿ ಮಾಡಲು ಈ-ಸಂಜೆ ವರದಿಗಾರರಾದ ರಮೇಶ್‍ರವರು ತೆರಳಿದ್ದಾಗ ವಕೀಲರ ಸಂಘದ ಎದುರು ವಕೀಲರ ಗುಂಪು ಯಾರೋ ಸಾರ್ವಜನಿಕರನ್ನು ತಳಿಸುತ್ತಿದೆ, ಹಲ್ಲೆ ನಡೆಸಿತ್ತಿದೆ ಎಂದು ಸುದ್ದಿ ಮಾಡಲು ಇದೊಂದು ಸಾಕ್ಷ್ಯವಾಗುತ್ತದೆ ಎಂದು ವಿಡಿಯೋ ಮಾಡಲು ಪ್ರಾರಂಭ ಮಾಡಿದಾಗ ರಮೇಶರವರ ಮೊಬೈಲ್ ಕಸಿದು, ತಳಿಸಿದ್ದರು.

ಈ ಘಟನೆ ನಡೆಯುವಾಗ ಸ್ಥಳದಲ್ಲಿ ಮಾಜಿ ಗೃಹರಕ್ಷಕ ದಳದ ಕಮಾಂಡ್ ಆರ್ ಪಾತಣ ಹಾಗೂ ವಕೀಲರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಸಹ ಇರುತ್ತಾರೆ ಇವರಿಗೆ ಹಲ್ಲೆ ನಡಿಸಿದವರು ಯಾರೆಂದು ತಿಳಿದಿರುತ್ತದೆ. ಪೂಲೀಸ್ ಅಧಿಕಾರಿಯ ಮೇಲೆ ನಡೆಯುತ್ತಿರುವ ಹಲ್ಲೆಯು ಸಾಕ್ಷಿಯಾಗುತ್ತದೆ ಯಾರು ವಿಡಿಯೋ ಮಾಡಬಾರದು ಎಂಬ ಉದ್ದೇಶ ಇಟ್ಟುಕೊಂಡೆ ಪತ್ರಕರ್ತ ರಮೇಶರವರ ಮೇಲೆ ಹಲ್ಲೆ ನಡೆಸಿದ ಗುಂಪು ಮೊಬೈಲ್‍ನ್ನು ಪಾತಣ್ಣ ರವರಿಗೆ ನೀಡಿರುತ್ತಾರೆ. ಇಪ್ಪತ್ತು ನಿಮಿಷಗಳ ಬಳಿಕ ಮೊಬೈಲ್ ವಾಪಸ್ ನೀಡಿರುತ್ತಾರೆ. ದೊಡ್ಡಯ್ಯ ಮತ್ತು ರಮೇಶ ಇಬ್ಬರು ಸಹ ನಮ್ಮ ಭೋವಿ ಸಮುದಾಯದವರಾಗಿದ್ದು ಇವರ ಮೇಲೆ ಹಲ್ಲೆ ನಡೆಸಿದ ವಕೀಲರ ಗುಂಪಿನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಪೂಲೀಸ್ ಇಲಾಖೆಯು ಘಟನೆ ನಡೆದು ಐದು ದಿನಗಳು ಕಳೆದರು ಯಾವುದೇ ಕ್ರಮ ಜರುಗಿಸದೆ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೂಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರು ಇಲಾಖೆ ಮೌನ ವಹಿಸಿದ್ದು, ಪೂಲೀಸ್ ಇಲಾಖೆ ಕೂಡಲೆ ಕ್ರಮ ಜರುಗಿಸದೆ ಇದ್ದರೆ ಭೋವಿ ಸಮುದಾಯದ ಮುಖಂಡರು,ದಲಿತ ಸಂಘನೆಗಳು,ಪ್ರಗತಿಪರ ಸಂಘಟನೆಗಳು ಸೇರಿ ಅನಿರ್ದಿಷ್ಠಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಭೋವಿ ಪರಿಷತ್ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ್, ವಿಶ್ವನಾಥ್, ಗಿರಿಯಪ್ಪ, ವೆಂಕಟಸ್ವಾಮಿ, ಕಾಶಿನಾಥ್, ದಲಿತ ಸಂಘಟನೆಗಳ ಮುಖಂಡರಾದ ಜೆಸಿಬಿ ವೆಂಕಟೇಶ್, ಡ್ಯಾಗೇರಹಳ್ಳಿ ವೀರುಪಾಕ್ಷಪ್ಪ, ಹಂದ್ರಹಾಸಳ್ ನಾಗಭೋಷಣ್, ಮೋಹನ್ ಕುಮಾರ್, ದೊಡ್ಡ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *