ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ (ಅಪರಾಧ ವೀಭಾಗ)ಎಂ.ಎಲ್.ಪರುಷೋತ್ತಮ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಈ ಹುದ್ದೆಯಲ್ಲಿದ್ದ ಅಬ್ದುಲ್ ಖಾದರ್ ಅವರು ನಿವೃತ್ತರಾದ ನಂತರ ತೆರವಾದ ಸ್ಥಾನಕ್ಕೆ ಸರ್ಕಾರ ಪುರುಷೋತ್ತಮ್ ಅವರನ್ನು ವರ್ಗಾವಣೆ ಮಾಡಿದೆ.
ಮತ್ತೊಬ್ಬರು ಅಡಿಷನಲ್ ಎಸ್ಪಿ ಸಿ.ಗೋಪಾಲ್ ಅವರು ಪುರುಷೋತ್ತಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇಲಾಖೆಯ ಅಧಿಕಾರಿ, ಸಿಬ್ಬಂದಿ ಆಗಮಿಸಿ ನೂತನ ಅಡಿಷನಲ್ ಎಸ್ಪಿಯವರಿಗೆ ಶುಭ ಕೋರಿದರು.