ಹುಳಿಯಾರಿನಲ್ಲಿ ಮಳೆಯ ತೋಂಧನನ

ಹುಳಿಯಾರು : ಹುಳಿಯಾರಿನಲ್ಲಿ ಮಳೆಯ ತೋಂಧನನ  ನರ್ತನ ಮಾಡಿ
ಹುಳಿಯಾರಿನಲ್ಲಿ ಗಂಟೆಗೂ ಹೆಚ್ಚು ಕಾಲ ಮಳೆಯಾಗಿ ತಂಪೆರೆಯಿತು.

ಆಲಿಕಲ್ ಸಮೇತ ಬಿದ್ದ ಮಳೆಯು ರಸ್ತೆಗಳೆಲ್ಲಲ್ಲಾ ಹಳ್ಳಗಳಂತೆ ನೀರು ಹರಿದು ಬೇಸಿಗೆಯ ಬಿರು ಬಿಸಿಲನ್ನು ಕೊನೆಗೂ ಕೊನೆಗಾಣಿಸುವ ಕಾಲ ಬಂದಿದೆ ಎಂಬುದನ್ನು ಮಳೆ ಹೇಳಿತು.

ಬಿಸಿಲಿಗೆ ಕಾದ ಕಬ್ಬಿಣದಂತಾಗಿದ್ದ ಭೂಮಿಯು ಬಿದ್ದ ಮಳೆ ನೀರನ್ನು ಕ್ಷಣಮಾತ್ರದಲ್ಲಿ ಇಂಗಿಸಿಕೊಳ್ಳುತ್ತಿತ್ತು.
ಮೊನ್ನೆಯಿಂದಲೇ ಮಳೆ ಬರುವ ಸೂಚನೆ ಇದ್ದರೂ ಗುಡುಗು ಮಿಂಚು ಮೇಲಾಟ ಅಷ್ಟೇ ನಡೆಯುತ್ತಿತ್ತು.

ನಿನ್ನೆ ಸುಮಾರು ನಾಲ್ಕರಿಂದ ನಾಲ್ಕು ವರೆ ಸುಮಾರಾಗಿ ಪ್ರಾರಂಭವಾದ ಮಳೆಯು ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಮಿಂಚಿನೊಂದಿಗೆ ಸುರಿಯಿತು.

ಆಲಿಕಲ್ಲುಗಳು ಬಿದ್ದು ರಸ್ತೆ, ಮನೆ ಮುಂಭಾಗ ಆಲಿ ಕಲ್ಲಿನ ಮುತ್ತಿನ ಸರವನ್ನು ಸೃಷ್ಟಿಸಿತು.

ಬಿರು ಬೇಸಿಗೆಯ ಬಿಸಿಲಿನಿಂದ ಬಸವಳಿದಿದ್ದ ಜನತೆ ಮಳೆಯ ಸಿಂಚನವನ್ನು ಕಂಡು ಸಂತೋಷವೂ ಸಂತೋಷ ಪಟ್ಟರು.

40ರ  ಡಿಗ್ರಿ ಸೆಲ್ಸಿಯಸಿನಲ್ಲಿದ್ದ  ಬಿಸಿಲಿನಿಂದ ಜನತೆ ತತ್ತರಿಸಿ ಹೋಗಿದ್ದರು.

ಮಳೆರಾಯ ಬಾರಲ್ಲಿ ಎಣ್ಣೆ ಹೊಡೆಯೋಕೆ ಹೋಗಿ ಎಣ್ಣೆ ಹೊಡೆದು ಜಾಸ್ತಿಯಾಗಿ ಧಾರಾಕಾರವಾಗಿ ಮಳೆ ಯನ್ನು ವರುಷ ಸುರಿಸಿದನು.

ಪ್ರಾಣಿ ,ಪಕ್ಷಿಗಳು, ಜನಜಾನುವಾರುಗಳು ನೀರು ನಿಡಿ ಇಲ್ಲದೆ ಪರಿ ತಪ್ಪಿಸುತ್ತಿದ್ದವು, ವರ್ಷದ ಮೊದಲ ಮಳೆಯಿಂದ ಹುಳಿಯಾರು ಹರ್ಷದ ಊರಾಗಿ ಮಾರ್ಪಟ್ಟಿ ತು.

ಎಲ್ಲಾ ರಸ್ತೆಗಳಲ್ಲಿ ಹಳ್ಳದಂತೆ ಹರಿದ ನೀರು ಚರಂಡಿಗಳೆಲ್ಲ ತುಂಬಿ ಹರಿದವು. ಕೆಲವರು ಮಳೆ ಬಿಡುವ ತನಕ ಮಳೆ ಬೀಳುತ್ತಿವಿಕೆಯನ್ನು ತದೇಕ   ಚಿತ್ತದಿಂದ ಕಣ್ಣು ತುಂಬಿಕೊಂಡರು.

ಒಟ್ಟಿನಲ್ಲಿ ಕೊನೆಗೂ ಮಳೆರಾಯ ಭುವಿಯ ಸಂಕಟವನ್ನು  ಅಲ್ಪ ಮಟ್ಟಿಗೆ ತಣಿಸಿದ್ದಾನೆ.

ಮಳೆಯ ಜೊತೆಗೆ ಬಿರುಗಾಳಿ ಬೀಸಿದ್ದರಿಂದ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಟಿಸಿಗಳು ಉರುಳಿ ಬಿದ್ದು ವಿದ್ಯುತ್ ಅಡಷಣೆ ಉಂಟಾಗಿದೆ.

ಇದರ ಜೊತೆಗೆ ತೆಂಗು,ಅಡಿಕೆ ಮರಗಳು ಬಿದ್ದಿವೆ, ಕೆಲವೆಡೆ ಮನೆಗಳ ಮೇಲೆ ಮರಗಳು ಬಿದ್ದು ನಷ್ಟ ಉಂಟಾಗಿದೆ.

Leave a Reply

Your email address will not be published. Required fields are marked *