ವೈದ್ಯರಿಂದ ಮಹಿಳೆ ಮೇಲೆ ಅತ್ಯಾಚಾರ-ಬೆಚ್ಚಿಬಿದ್ದ ಜನತೆ

ತುಮಕೂರು : ದಂತ ಚಿಕಿತ್ಸಾಲಯಕ್ಕೆ ತಪಾಷಣೆಗೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರವನ್ನು ವೈದ್ಯರೇ ಮಾಡಿರುವ ಘಟನೆ ನಡೆದಿದೆ ಎಂದು ದೂರು ದಾಖಲಾಗಿದೆ.

ತುಮಕೂರು ನಗರದ ಶೆಟ್ಟಿಹಳ್ಳಿ ಗೇಟ್ ಬಳಿಯ ರಾಘವೇಂದ್ರ ಮಠದ ಎದುರಿನ ದಂತ ಚಿಕಿತ್ಸಾಲಯದಲ್ಲಿ ಶುಕ್ರವಾರ ಸಂಜೆ ಚಿಕಿತ್ಸೆ ಪಡೆಯಲು ಬಂದ ಯುವತಿಯ ಮೇಲೆ ದಂತವೈದ್ಯ ಡಾ.ಸಂಜಯ್ ನಾಯಕ್ ಅತ್ಯಾಚಾರ ಎಸಗಿರುವುದಾಗಿ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ಜನರು ಬೆಚ್ಚಿ ಬಿದ್ದಿದ್ದಾರೆ.

ಆರೋಪಿ ವೈದ್ಯ ಶುಕ್ರವಾರ ಸಂಜೆ ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿ ಮನೆಗೆ ತೆರಳಿ ಮಂಕಾಗಿ ಕುಳಿತಿದ್ದಳು. ಆಗ ತಂದೆ-ತಾಯಿ ವಿಚಾರಿಸಲಾಗಿ ದಂತ ವೈದ್ಯ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದರು ಎನ್ನಲಾಗಿದೆ.

ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದು ಆರೋಪಿ ವೈದ್ಯನನ್ನು ಬಂಧಿಸಿದ್ದು, ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವೈದ್ಯೋನಾರಾಯಣ ಎಂದು ಕರೆಸಿಕೊಳ್ಳುವ ವೈದ್ಯ ದೇವರೇ ಈ ರೀತಿ ನಡೆದುಕೊಂಡರೆ ಸಮಾಜಕ್ಕೆ ಏನು ಸಂದೇಶ ಏನು ಹೋಗುತ್ತದೆ. ವೈದ್ಯರ ಬಗ್ಗೆ ಇರುವ ಗೌರವ ಏನಾಗಬಹುದು.

Leave a Reply

Your email address will not be published. Required fields are marked *