ತುಮಕೂರು: “ಕ್ರೀಡಾ ನೀತಿ” ಜಾರಿಗೊಳಿಸಲು ಹಾಗೂ ತುಮಕೂರು ಜಿಲ್ಲೆಯ ಕ್ರೀಡಾಪಟುಗಳ ಮತ್ತು ಕ್ರೀಡಾ ಕ್ಲಬ್‍ಗಳ ಸಮಸ್ಯೆಗಳನ್ನು ಚರ್ಚಿಸಲು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಯುವ ಸಬಲೀಕರಣ ಅಭಿಯಾನ ಅಧ್ಯಕ್ಷ ಮುರಳೀಧರ ಹಾಲಪ್ಪ ಅವರೊಂದಿಗೆ ತುಮಕೂರಿನ ವಿವಿಧ ಕ್ರೀಡಾಸಂಸ್ಥೆಗಳ ಪದಾಧಿಕಾರಿಗಳು, ಕ್ರೀಡಾಪಟುಗಳು, ಕ್ರೀಡಾಸಕ್ತರ ನಿಯೋಗ ಭೇಟಿ ನೀಡಿ ತುಮಕೂರಿಗೆ ಆಗಮಿಸುವ ದಿನಾಂಕವನ್ನು ನಿಗದಿ ಪಡಿಸಬೇಕೆಂದು ಮನವಿ ಮಾಡಿದರು.
ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ನವೀಕರಣ ಪೂರ್ಣಗೊಂಡಿದ್ದು, ಕ್ರೀಡಾಪಟುಗಳು ಉಪಯೋಗಿಸಲು ಅನುಕೂಲ ಮಾಡಿಕೊಡಬೇಕು, ತುಮಕೂರಿನ 10 ತಾಲ್ಲೂಕುಗಳಲ್ಲಿ ಕ್ರೀಡಾಂಗಣ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕ್ರೀಡಾ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಹೇಳಿದರು.

ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಕೋಚಿಂಗ್ ಬಗ್ಗೆ, ಸ್ಕಾಲರ್ ಶಿಪ್, ಆಯ್ಕೆಯ ವಿಧಾನ, ವಸತಿ, ಸರ್ಕಾರಿ-ಖಾಸಗಿ ಪ್ರಾಯೋಜತ್ಪಕದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು, ವಿದೇಶಗಳಲ್ಲಿ ಕ್ರೀಡೆಗಳ ಬೆಳವಣಿಗೆಗೆ ವಿಶ್ವವಿದ್ಯಾಲಯಗಳೇ ಮೂಲಸೆಲೆ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮಥ್ರ್ಯಕ್ಕನುಗುಣವಾಗಿ ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ನೀಡಬೇಕು. ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಯುರೋಪ್ ದೇಶಗಳ ಅಥ್ಲೀಟ್‍ಗಳೆಲ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಮ್ಮಲ್ಲೂ ಸಹ ಕ್ರೀಡೆ ಮತ್ತು ಓದಿಗೆ ಸಮಾನ ಆದ್ಯತೆ ಮತ್ತು ಸಹಕಾರ ನೀಡಬೇಕು. ಸಾಧಕರಿಗೆ ಅನುದಾನ, ಹುದ್ದೆಗಳ ಪೆÇ್ರೀತ್ಸಾಹ ನೀಡಬೇಕು. ಕ್ರೀಡಾ ಚಟುವಟಿಕೆಗಳಿಗೆ ಬೇಕಾಗಿರುವ ಎಲ್ಲಾ ಸಾಮಗ್ರಿಗಳು ಪ್ರತಿಯೊಂದು ಪಂಚಾಯಿತಿ ಕೇಂದ್ರಗಳಲ್ಲಿ ಲಭ್ಯವಿರುವಂತೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಯುವಸಬಲೀಕರಣ ಇಲಾಖೆ ನಿವೃತ್ತ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಕ್ರೀಡೆಗಳ ಬಗ್ಗೆ ಉತ್ತಮ ಪೆÇ್ರೀತ್ಸಾಹ ಹಾಗೂ ಭವಿಷ್ಯದಲ್ಲಿ ಅದರ ಪ್ರಯೋಜನಗಳ ಬಗ್ಗೆ ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಹಾಗೂ ಪೆÇಲೀಸ್ ಇಲಾಖೆಯಲ್ಲಿ ಶೇ. 50% ರಷ್ಟು ಮೀಸಲಾತಿ ತಿಳುವಳಿಕೆಯನ್ನು ಎಲ್ಲಾ ಶಾಲೆಗಳಲ್ಲಿ ದೊರಕುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಖೋಖೋ, ಕಬಡ್ಡಿ, ವಾಲಿಬಾಲ್, ಫುಟ್ಬಾಲ್, ಬ್ಯಾಡ್ಮಿಂಟನ್, ಅಥ್ಲೆಟಿಕ್‍ಗಳ ಬಗ್ಗೆ ಉತ್ತಮ ಮಾಹಿತಿ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಸಧೃಢ ಕ್ರೀಡಾಪಟುಗಳ ತಯಾರಿ ಬಗ್ಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು.

ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು ಟಿ.ಕೆ ಆನಂದ್ ಮಾತನಾಡಿ, ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದೇಸಿ ಕ್ರೀಡೆ ಹಾಗೂ ಇತರೆ ಪಂದ್ಯಾವಳಿಗಳ ಆಯೋಜನೆಗೆ ಸಿದ್ಧತೆಗಳು. ಕಬಡ್ಡಿ, ಖೋಖೋ ಅಂಕಣ, ವಾಲಿಬಾಲ್ ಅಂಕಣ, ಬ್ಯಾಡ್ಮಿಂಟನ್ ಅಂಕಣಗಳ ನಿರ್ಮಾಣಕ್ಕೆ ಒತ್ತು ನೀಡಬೇಕು. ಉತ್ತಮ ಸೌಕರ್ಯವುಳ್ಳ ಬಯಲು ರಂಗಮಂದಿರವನ್ನು ಜರೂರಾಗಿ ಮುಕ್ತಾಯಗೊಳಿಸುವುದು ಹಾಗೂ ಒಳಾಂಗಣ ಮತ್ತು ಹೊರಾಂಗಣ ಜಿಮ್‍ಗಳ ಅಭಿವೃದ್ಧಿ, ಶೌಚಾಲಯ, ಮಕ್ರ್ಯೂರಿ- ಫ್ಲಡ್ ಲೈಟ್ಸ್‍ಗಳನ್ನು ಅಳವಡಿಸಬೇಕಿದೆ. ಹಿರಿಯ ನಾಗರೀಕರ, ವಾಯು ವಿಹಾರಿಗಳಿಗೆ ಟ್ರಾಕ್ ಅಗತ್ಯತೆಗಳನ್ನು ಸಹ ಪೂರೈಸಬೇಕು ಎಂದು ಮನವಿ ಮಾಡಿದರು.
ಯಂಗ್ ಚಾಲೆಂಜರ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೇಣುಗೋಪಾಲ್ ಕೃಷ್ಣ ಮಾತನಾಡಿ, ಯುವ ಸಬಲೀಕರಣ ಯೋಜನೆಯ ಅಡಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಯುವ ಜನತೆಗೆ ಕೌಶಲ್ಯ ತರಬೇತಿ ಕಾರ್ಯಗಾರಗಳನ್ನು ಕೈಗೊಳ್ಳುವುದು ಸೇರಿದಂತೆ ತುಮಕೂರು ಜಿಲ್ಲೆಯ ಕ್ರೀಡಾಪಟುಗಳ ಮತ್ತು ಕ್ರೀಡಾ ಕ್ಲಬ್‍ಗಳ ಸಮಸ್ಯೆಗಳನ್ನು ಚರ್ಚಿಸಲು ದಿನಾಂಕವನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಪಂಧಿಸಿದ ಶಾಲಿನಿ ರಜನೀಶ್ ಅವರು, ಮಾರ್ಚ್ 5 ರಂದು ತುಮಕೂರಿನ ಎಂ.ಜಿ.ಸ್ಟೇಡಿಯಂ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸುವ ಹಿನ್ನಲೆಯಲ್ಲಿ ಅಂದೇ ಕ್ರೀಡಾಪಟುಗಳನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಮುಲೈ ಮುಹಿಲನ್ ಅವರೂ ಸಹ ಸಕಾರತ್ಮಕವಾಗಿ ಸ್ಪಂದಿಸಿ, 176 ತರಬೇತುದಾರರನ್ನು ನೇಮಕಾತಿಗೆ ಆದೇಶಿಸಲಾಗಿದೆ ತಿಳಿಸಿದರು.
ನಿಯೋಗದಲ್ಲಿ ತುಮಕೂರು ಫುಟ್ಬಾಲ್ ಅಸೋಸಿಯೇಷನ್‍ನ ಲಕ್ಷ್ಮೀಕಾಂತ್, ತುಮಕೂರು ರೈಫಲ್ ಅಸೋಸಿಯೇಷನ್‍ನ ಅನಿಲ್, ತುಮಕೂರು ವಾಲಿಬಾಲ್ ಅಸೋಸಿಯೇಷನ್‍ನ ನಂದೀಶ್, ಬುದ್ಧ ಬಸವ ಅಂಬೇಡ್ಕರ್ ಅಸೋಸಿಯೇಷನ್‍ನ ನಾಗರಾಜು, ಹರೀಶ್, ವಿವೇಕಾನಂದ ಸ್ಪೋಟ್ರ್ಸ್‍ನ ನಿಖಿಲ್, ಯಂಗ್ ಚಾಲೆಂಜರ್ಸ್ ಕ್ಲಬ್‍ನ ಟಿ.ಎಸ್ ನಿರಂಜನ್, ಆದರ್ಶ ಫೌಂಡೇಶನ್‍ನ ಡಿ.ಟಿ ವೆಂಕಟೇಶ್, ಗೋವಿಂದ ಗೌಡರು, ಕುಮಾರ್, ರಘು, ದಿಲೀಪ್, ದೇವಾನಂದ್, ದೀಪಿಕ ಸೇರಿದಂತೆ ಹಲವರು ಭಾಗವಹಿಸಿದ್ದರು.