ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಕಲಂ.ಸಂಖ್ಯೆ 461ರಲ್ಲಿ ‘ಹಿಂದು ಸಾದರ’ ಎಂದು ಬರೆಸಲು ಮನವಿ

ತುಮಕೂರು:ರಾಜ್ಯ ಸರಕಾರ ಸೆಪ್ಟಂಬರ್ 22 ರಿಂದ ರಾಜ್ಯದಲ್ಲಿ ಕೈಗೊಂಡಿರುವ ಸಾಮಾಜಿಕ, ಅರ್ಥಿಕ ಸಮೀಕ್ಷೆಯಲ್ಲಿ ಹಿಂದೂ ಸಾದರ ಸಮುದಾಯಕ್ಕೆ ಎಲ್ಲರೂ ಜಾತಿ ಮತ್ತು ಉಪಜಾತಿ ಕಲಂಗಳಲ್ಲಿ ಕ್ರಮ ಸಂಖ್ಯೆ 461 ರಲ್ಲಿ ಹಿಂದು ಸಾದರ ಎಂದು ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಡಿ.ಈ.ರವಿಕುಮಾರ ಮನವಿ ಮಾಡಿದರು.

ನಗರದ ಕ್ಯಾತ್ಸಂದ್ರದಲ್ಲಿರುವ ಹಿಂದೂ ಸಾದರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮೈಸೂರು ಸಂಸ್ಥಾನದಲ್ಲಿಯೂ ಹಿಂದೂ ಸಾದರ ಎಂಬುದು ಪ್ರತ್ಯೇಕ ಜಾತಿಯಾಗಿದ್ದು,ನಮ್ಮ ಸಮುದಾಯಕ್ಕೆ ರಾಜಕೀಯವಾಗಿ ಮಾಜಿ ಮಂತ್ರಿಗಳಾದ ದಿ.ಲಕ್ಷ್ಮಿನರಸಿಂಹಯ್ಯ ಹಾಗೂ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರು ನಾಯಕರೇ ಹೊರತು ಬೇರೆಯವರಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದು ಸಾದರ ಎಂಬ ಜಾತಿಯ ಜನರು ಕರ್ನಾಟಕದ ತುಮಕೂರು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ, ಕೇಂದ್ರ ಜಿಲ್ಲೆಗಳ ಜೊತೆಗೆ,ತೆಮಿಳುನಾಡಿನ ಕೃಷ್ಣಗಿರಿ, ಆಂಧ್ರ ಪ್ರದೇಶದ ಆನಂತಪುರ, ಪೆನಗೊಂಡ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.ಇವರ ಮುಖ್ಯ ಕಸುಬು ವ್ಯವಸಾಯ.ಇತ್ತೀಚಿನ ದಿನಗಳಲ್ಲಿ ವ್ಯಾಪಾರ, ವ್ಯವಹಾರದಲ್ಲಿ ತೊಡಗಿದ್ದು,ಬೆಂಗಳೂರು ಮತ್ತಿತರರ ಕಡೆಗಳಲ್ಲಿ ಹೆಚ್ಚಿನದಾಗಿ ನೆಲೆಸಿದ್ದಾರೆ. ಉತ್ತರಕರ್ನಾಟಕ, ಹೈದ್ರಾಬಾದ್ ಕರ್ನಾಟಕ,ಬಾಂಬೆ ಕರ್ನಾಟಕದಲ್ಲಿರುವ ಸಾದರ ಲಿಂಗಾಯಿತರಿಗೂ, ಹಿಂದೂ ಸಾದರರಿಗೂ ಸಂಬಂಧವಿಲ್ಲ.ನಮ್ಮ ಆಚಾರ, ವಿಚಾರಗಳಲ್ಲಿ ಸಾಕಷ್ಟ ವೆತ್ಯಾಸವಿದೆ.ಸಾದರ ಲಿಂಗಾಯಿತರು ಲಿಂಗ ಧರಿಸುತ್ತಾರೆ.ಹಿಂದು ಸಾದರು ಲಿಂಗ ಧರಿಸುವುದಿಲ್ಲ.ನಮಲ್ಲಿ ಕೊಡು, ಕೊಳ್ಳುವಿಕೆ,ಮದುವೆ ಸಂಬಂಧಗಳಿಲ್ಲ.ಅಲ್ಲದೆ ಹಿಂದು ಸಾದರ ಶುದ್ದ ಸಸ್ಯಹಾರಿಗಳಾಗಿದ್ದಾರೆ.ಹಾಗಾಗಿ ಹಿಂದು ಸಾದರ ಕ್ರಮ ಸಂಖ್ಯೆ 461ನ್ನು ಮಾತ್ರ ಬರೆಸಬೇಕೆಂದು ಸಾದರ ಸಮುದಾಯದ ಜನರಲ್ಲಿ ಮನವಿ ಮಾಡುವುದಾಗಿ ಡಿ.ಈ.ರವಿಕುಮಾರ್ ತಿಳಿಸಿದರು.

ಹಿಂದು ಸಾದರು ಪ್ರವರ್ಗ 1 ರಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ.ರಾಜ್ಯದಲ್ಲಿ ಕೇವಲ 3.50 ಲಕ್ಷದಿಂದ 4 ಲಕ್ಷ ಜನಸಂಖ್ಯೆಯನ್ನು ಮಾತ್ರ ಹೊಂದಿದೆ.ಅರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಯಾಗಿದ್ದು,ಹಿರಿಯರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಒಂದಷ್ಟು ಅರ್ಥಿಕವಾಗಿ ಮೇಲ್ಮುಖವಾಗಿ ಚಲಿಸುತ್ತಿದೆ.ನಮ್ಮ ಬೆಳವಣಿಗೆ ಇದೇ ರೀತಿಯಲ್ಲಿ ಮುಂದುವರೆಯಬೇಕೆಂದರೆ ನಾವುಗಳು ಹಿಂದು ಸಾದರ ಸಮುದಾಯದಲ್ಲಿಯೇ ಗುರುತಿಸಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಬೇಕು.ಆಗ ಮಾತ್ರ ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯ ಎಂದು ಡಿ.ಈ.ರವಿಕುಮಾರ್ ಸಮುದಾಯದ ಯುವಜನರಲ್ಲಿ ಮನವಿ ಮಾಡಿದರು.

ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ತುಮಕೂರು ತಾಲೂಕು ಘಟಕದ ಅಧ್ಯಕ್ಷ ಅಣ್ಣೇನಹಳ್ಳಿ ಶಿವಕುಮಾರ್ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿಂದು ಸಾದರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಉಪಾಧ್ಯಕ್ಷ ರವಿಶಂಕರ್,ಕಾರ್ಯದರ್ಶಿ ಶಿವಶಂಕರ್, ಜಂಟಿ ಕಾರ್ಯದರ್ಶಿ ಶಶಿಧರ್, ತುಮಕೂರು ತಾಲೂಕು ಅಧ್ಯಕ್ಷ ಅಣ್ಣೇನಹಳ್ಳಿ ಶಿವಕುಮಾರ್, ಮಧುಗಿರಿ ತಾಲೂಕು ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ವಿವೇಕಾನಂದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಮೂರ್ತಿ, ಸಂಘದ ನಿರ್ದೇಶಕರಾದ ಲಕ್ಷ್ಮಿಧರ, ಹರ್ಷ, ಶಿವಕುಮಾರ್, ಎಸ್.ಟಿ.ಡಿ.ನಾಗರಾಜು, ವಕೀಲರಾದ ಶ್ರೀನಿವಾಸಮೂರ್ತಿ, ತಿಮ್ಮಾರೆಡ್ಡಿ, ರವಿಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *