ತುಮಕೂರು : ಜಿಲ್ಲೆಯ 3 ಆರ್.ಟಿ.ಓ ಕಛೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದರು.
ಆರ್.ಟಿ.ಓ ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ, ಲಂಚ ವಿಪರೀತವಾಗಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದ ಹಿನ್ನಲೆಯಲ್ಲಿ ತುಮಕೂರು, ಮಧುಗಿರಿ ಮತ್ತು ತಿಪಟೂರು ಆರ್‍ಟಿಓ ಕಛೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕ ಕಾಲದಲ್ಲಿ ದಾಳಿ ನಡೆಸಿದರು.
ದಾಳಿಯ ಸಂದರ್ಭದಲ್ಲಿ ಆರ್.ಟಿ.ಓ ಕಛೇರಿಯ ಅಧಿಕಾರಿಗಳನ್ನು ಮತ್ತು ನೌಕರರನ್ನು ವಿಚಾರಣೆಗೆ ಒಳಪಡಿಸಿದ್ದಲ್ಲದೆ ಆರ್.ಟಿ.ಓ ಕಛೇರಿಯ ವಿವಿಧ ದಾಖಲಾತಿಗಳನ್ನು ಪರಿಶೀಲಿಸಲಾಯಿತು. ತುಮಕೂರು ಆರ್‍ಟಿಓ ಕಛೇರಿಯ ತಪಾಸಣೆಯು ಕಚೇರಿ ವೇಳೆ ಮುಗಿದ ನಂತರವೂ ನಡೆಯುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಆರ್.ಟಿ.ಓ ಕಛೇರಿಗಳಲ್ಲಿ ಬ್ರೇಕ್ ಇನ್ಸ್‍ಪೆಕ್ಟರ್‍ಗಳು, ತಪಾಸಣಾ ಇನ್ಸ್‍ಪೆಕ್ಟರ್‍ಗಳು ಮಧ್ಯವರ್ತಿಗಳಿಂದ ಬಂದರೆ ಮಾತ್ರ ಕೆಲಸ ಮಾಡಿ ಕೊಡುವುದಲ್ಲದೆ, ಇಂತಹ ಕೆಲಸಕ್ಕೆ ಇಷ್ಟು ಹಣ ಎಂದು ನಿಗದಿ ಮಾಡಿ ಆರ್.ಟಿ.ಓ ಕಛೇರಿಗೆ ಬರುತ್ತಿದ್ದವರ ಸುಲಿಗೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
ದಾಳಿಯ ವೇಳೆ ಕಚೇರಿಗೆ ಬೀಗ ಹಾಕಿ ತನಿಖೆ ಕೈಗೊಳ್ಳಲಾಗಿತ್ತು.