ತುಮಕೂರು: ಗ್ರಾಮೀಣ ಪ್ರದೇಶದ ಸಾಮಾನ್ಯ ಜನರಿಗೆ ಹೃದಯ ಸಂಬಂಧಿತ ಕಾಯಿಲೆಗಳ ಬಗ್ಗೆ ಅರಿವಿಲ್ಲದೆ ಸಾವನ್ನಪ್ಪುತ್ತಿದ್ದಾರೆ ಎಂದು ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಡಿಯಾಕ್ ಸೆಂಟರ್ ಖ್ಯಾತ ಹೃದ್ರೋಗ ತಜ್ಞ ಡಾ. ತಮಿಮ್ ಅಹಮದ್ ಅವರು ಅಭಿಪ್ರಾಯ ಪಟ್ಟರು.
ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್‍ನ ಡಾ. ಜಿ.ಪಿ ನೆಕ್ಸಸ್ ಸಭಾಂಗಣದಲ್ಲಿ ನಿನ್ನೆ ಇಂಟರ್ನಲ್ ಕ್ವಾಲಿಟಿ ಅಶುರೆನ್ಸ್ ಸೆಲ್ ಏರ್ಪಡಿಸಲಾಗಿದ್ದ ಡಾ. ಹೆಚ್.ಎಂ ಗಂಗಾಧಾರಯ್ಯ ಸ್ಮರಣಾರ್ಥ ಉಪನ್ಯಾಸ ಮಾಲಿಕೆಯಲ್ಲಿ ಸಾಮಾನ್ಯ ಹೃದಯ ರೋಗಗಳ ಚಿಕಿತ್ಸೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡಾ.ತಮೀಮ್ ಅಹಮ್ಮದ್ ಮಾತನಾಡಿದರು.
ಸಾಮಾನ್ಯ ಜನರು ಹೃದಯ ರೋಗ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಪರದಾಡುತ್ತಿರುತ್ತಾರೆ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಅವರಿಗೆ ಸಹಾಯ ಮಾಡಬೇಕೆಂಬುದು ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯ ಹೆಬ್ಬಯಕೆಯಾಗಿದ್ದು ಜನ ಸಾಮನ್ಯರಿಗೆ ಸಿದ್ಧಾರ್ಥ ಕಾಡಿಯಾಕ್ ಸೆಂಟರ್ ಧನ್ವಂತರಿ ಚಿಕಿತ್ಸೆಯಾಗಿ ಪರಿಣಮಿಸಿದೆ. ಮನುಷ್ಯ ಇಂದು ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಗೆ ಒಗ್ಗಿ ಕೊಳ್ಳುತ್ತಿದ್ದು ಸಣ್ಣ ಸಣ್ಣ ವಯಸ್ಸಿನ ಮಕ್ಕಳಿಗೂ, ವಯಸ್ಕರಿಗೆ ಹೃದಯ ಸಂಬಂಧಿತ ಕಾಯಿಲೆಗಳು ಕಾಡುತ್ತಿವೆ. ಇದಕ್ಕಾಗಿ ನಮ್ಮಲ್ಲಿ ಪರಿಹಾರಗಳಿದೆ. ಹಾರ್ಟ್ ಅಟ್ಯಾಕ್ ಬರುವ ಮುನ್ನ ಅನೇಕ ಮುನ್ಸೂಚನೆಗಳು ಕಾಣಬರುತ್ತವೆ. ಇದರಿಂದ ಎಚ್ಚರಿಕೆ ವಹಿಸಿ ವೈದ್ಯರ ಭೇಟಿ ಮಾಡಿ ಸೂಕ್ತ ಪರಿಹಾರ ಪಡೆದುಕೊಳ್ಳುವುದು ಅವಶ್ಯಕತೆ ಎಂದು ಅವರು ಕಿವಿ ಮಾತು ಹೇಳಿದರು.

ಕಾರ್ಡಿಯಾಕ್ ಸೆಂಟರ್ ನಲ್ಲಿ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ಕಂಡುಕೊಳ್ಳಲಾಗಿದ್ದು ರಾಜ್ಯದ ವಿವಿಧ ಮೂಲೆಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗೆ ದೊರೆಯುವ ಚಿಕಿತ್ಸೆ ಗಿಂತ ಉತ್ತಮ ಪಟ್ಟು ಚಿಕಿತ್ಸೆ ಇಲ್ಲಿ ನೀಡಲಾಗುತ್ತಿದ್ದು ನಮ್ಮಲ್ಲಿ ಹೃದಯದ ಬೈಪಾಸ್ ಶಸ್ತ ಚಿಕಿತ್ಸೆ ಒಳಗಾದವರು ಕೇವಲ 15 ನಿಮಿಷದಲ್ಲಿ ಗುಣಮುಖರಾಗಿ ಹೊರ ಹೊಮ್ಮುತ್ತಾರೆ ಈ ವಿಚಾರ ಈಗಾಗಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಚರ್ಚೆಯಲ್ಲಿದೆ ಇಂತಹ ಸಂಶೋಧನಾತ್ಮಕ ಚಿಕಿತ್ಸಾ ವಿಧಾನಗಳನ್ನು ಕಂಡುಕೊಂಡಿರುವುದು ನಮ್ಮ ಪುಣ್ಯವೆಂದು ಭಾವಿಸಿದ್ದೇನೆ ಈ ಚಿಕಿತ್ಸಾ ವಿಧಾನ ಜನಸಾಮಾನ್ಯರಿಗೆ ದೊರೆತಾಗ ಅದು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ ರವಿಪ್ರಕಾಶ್ ಅವರು ಮಾತನಾಡುತ್ತಾ, ಹೃದಯ ಸಂಬಂಧಿತ ವಿಚಾರವಾಗಿ ಅನೇಕ ಮಾಹಿತಿಗಳನ್ನ ಡಾ. ತಮ್ಮಿಮ್ ಅಹಮ್ಮದ್ ಅವರು ತಿಳಿಸಿಕೊಟ್ಟಿದ್ದು ಇದರಿಂದ ಪ್ರಾಧ್ಯಪಕರಿಗೆ ಉಪಯುಕ್ತ ಮಾಹಿತಿ ದೊರಕಿದೆ ಎಂದರು.
ಕಾರ್ಯಗಾರದಲ್ಲಿ ವಿವಿಧ ವಿಭಾಗದ ಅಧ್ಯಾಪಕರು ಹೃದಯ ಸಂಬಂಧಿತ ಕಾಯಿಲೆಗೆ ಬಗ್ಗೆ ಕೇಳಿದ ಪ್ರಶ್ನೆಗೆ ಡಾ. ತಮಿಮ್ ಅಹಮ್ಮದ್ ಅವರು ಉತ್ತರಿಸಿ ಪರಿಹಾರ ನೀಡಿದರು.
ಈ ಸಂದರ್ಭದಲ್ಲಿ ಡೀನ್ ಡಾ ರೇಣುಕಾಲತಾ, ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಡಾ. ರವಿರಾಮ್, ಎನ್ ಎಸ್ ಎಸ್ ವಿಭಾಗದ ಡಾ.ರವಿಕಿರಣ್ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.