ತುಮಕೂರು:ಕಸಾಪ ಸಮ್ಮೇಳನದಲ್ಲಿ ಇದೇ ಪ್ರಥಮ ಬಾರಿಗೆ ಯುವಜನರ ಕುರಿತು ಗೋಷ್ಠಿಯೊಂದನ್ನು ನಡೆಸುವ ಮೂಲಕ ಸಾಹಿತ್ಯ ಪರಿಷತ್ ಯುವಜನರ ಸಮಸ್ಯೆಗಳಿಗೆ ದ್ವನಿಯಾಗಿದೆ ಎಂದು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.
ನಗರದ ಗಾಜಿನಮನೆಯಲ್ಲಿ ಕಸಾಪ ವತಿಯಿಂದ ಆಯೋಜಿಸಿರುವ 16ನೇ ಜಿಲ್ಲಾ ಕಸಾಪ ಸಮ್ಮೇಳನದ ಎರಡನೇ ದಿನವಾದ ಇಂದು ಯುವಜನರಿಗಾಗಿ ಏರ್ಪಡಿಸಿದ್ದ ಕೌಶಲ್ಯಪಥ-ಯುವ ಸಬಲೀಕರಣ ಎಂಬ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಯುವಜನರಿಗೆ ಇರುವ ಅವಕಾಶಗಳು,ಅವುಗಳನ್ನು ತನ್ನದಾಗಿಸಿಕೊಳ್ಳಲು ಇರುವ ಮಾರ್ಗೋಪಾಯಗಳ ಬಗ್ಗೆ ಯುವಜನರಿಗೆ ತಿಳಿ ಹೇಳುವ ಸಲುವಾಗಿ ಈ ಗೋಷ್ಠಿ ಆಯೋಜಿಸಲಾಗಿದೆ. ಹಲವಾರು ಪ್ರಸಿದ್ದ ಕಂಪನಿಗಳ ಹೆಚ್.ಆರ್.ಗಳು ಇಲ್ಲಿಗೆ ಬಂದಿದ್ದು, ತಮ್ಮ ಕಂಪನಿಯ ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರತಿ ತಂದೆ. ತಾಯಿಗೆ ತಮ್ಮ ಮಕ್ಕಳನ್ನು ಸರಕಾರದ ಉನ್ನತ ಹುದ್ದೆಗಳಲ್ಲಿ ಕಾಣಬೇಕೆಂಬ ಹಂಬಲವಿರುತ್ತದೆ.ಅವರ ಆಶಯವನ್ನು ಕೈಗೂಡುವಂತೆ ಮಾಡುವುದು ಮಕ್ಕಳಾದ ತಮ್ಮಗಳ ಕರ್ತವ್ಯ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಲಹೆ, ಸಹಕಾರ, ಮಾರ್ಗದರ್ಶನ ಮಾಡಲು ಹಲವಾರು ಸಂಸ್ಥೆಗಳ ನಮ್ಮ ಮುಂದಿವೆ.ಅಲ್ಲದೆ ಉದ್ಯೋಗ ವಿನಿಮಯ ಕಚೇರಿ ಸಹ ನಮಗಾಗಿ ಕೆಲಸ ಮಾಡುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ತಾವು ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುವಂತೆ ಮುರುಳೀಧರ ಹಾಲಪ್ಪ ಕರೆ ನೀಡಿದರು.
ತಮ್ಮಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಇನ್‍ಕ್ಯಾಪ್,ಟಿ.ವಿ.ಎಸ್ ಸಂಸ್ಥೆಯ ಮನ್ವಿತ ಮಾತನಾಡಿದರು. ಉದ್ಯೋಗ ವಿನಿಮಯ ಅಧಿಕಾರಿ ಕಿಶೋರಕುಮಾರ್,ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆಂಪಯ್ಯ, ಜಿಟಿಜಿಟಿ ನಿರ್ದೇಶಕ ಅಶ್ವಿನ್. ಸಿಡಾಕ್ ಜಂಟಿ ನಿರ್ದೇಶಕ ಮಧು ಮತ್ತಿತರರು ಪಾಲ್ಗೊಂಡು ತಮ್ಮಲ್ಲಿ ದೊರೆಯುವ ಅವಕಾಶಗಳು, ಅವುಗಳನ್ನು ಪಡೆಯುವುದು ಹೇಗೆ ಎಂಬ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆ.ಎಸ್.ಈರಣ್ಣ, ಡಾ.ಜಿ.ತಿಪ್ಪೇಸ್ವಾಮಿ, ಎಂ.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು