ಪರಿಸರ ಸಂರಕ್ಷಣೆ ಮಾಡದಿದ್ದರೆ ಮಕ್ಕಳ ಶಾಪಕ್ಕೆ ಗುರಿ-ಸಾಲುಮರದ ತಿಮ್ಮಕ್ಕ

ತುಮಕೂರು:ಪರಿಸರ ಸಂರಕ್ಷಣೆಗೆ ನಾವು ಮುಂದಾಗದಿದ್ದರೆ, ನಮ್ಮ ಮಕ್ಕಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.ಹಾಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗದ ಅಗತ್ಯವಿದೆ ಎಂದು ಪದ್ಮಶ್ರೀ, ನಾಡೋಜ ಸಾಲುಮರದ ತಿಮ್ಮಕ್ಕ ಹೇಳಿದರು.

ತುಮಕೂರು ತಾಲೂಕು ಶ್ರೀವೀರಭದ್ರೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಾನಾಗಲಿ,ನನ್ನ ಪತಿಯಾಗಲಿ,ಪ್ರಶಸ್ತಿಯ ಆಸೆಯಿಂದ ಗಿಡಮರಗಳನ್ನು ನೆಟ್ಟದಲ್ಲ.ನಮಗೆ ಮತ್ತು ದಾರಿ ಹೋಕರ ನೆರಳಿಗೋಸ್ಕರ ರಸ್ತೆಯ ಇಕ್ಕೆಲಗಳಲ್ಲಿ ಆಲ,ಗೋಣಿ ಮರಗಳನ್ನು ನೆಟ್ಟು,ದೂರದಿಂದ ನೀರು ತಂದು ಹಾಕಿ ಪೋಷಿಸಿದವು. ಇಂದಿಗೂ ಅವುಗಳನ್ನು ನೋಡಿದರೆ ಏನೋ ಸಂತೋಷ ಆಗುತ್ತದೆ.ಮನಸ್ಸು ಉಲ್ಲಾಸಗೊಳ್ಳುತ್ತದೆ. ಹಾಗಾಗಿ ಪರಿಸರದೊಂದಿಗಿನ ಸ್ನೇಹ ಎಂತಹವರನ್ನು ಪುಳಕಿತಗೊಳಿಸುತ್ತದೆ ಎಂದು ಪದ್ಮಶ್ರೀ ಸಾಲುಮರದ ತಿಮ್ಮಕ್ಕ ನುಡಿದರು.

ನಮ್ಮ ಕಾಲದಲ್ಲಿ ಓದು, ಬರಹಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಅಲ್ಲದೆ ಹೆಣ್ಣು ಮಕ್ಕಳಿಗೆ ಓದು, ಬರಹ ಕಷ್ಟ ಸಾಧ್ಯವಾಗಿತ್ತು. ಇಂದು ಸರಕಾರವೇ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿ ಪ್ರೋತ್ಸಾಹ ನೀಡುತ್ತಿದೆ. ಇದರ ಲಾಭವನ್ನು ಪಡೆದುಕೊಂಡು ಉತ್ತಮ ಅಂಕಗಳೊಂದಿಗೆ ಒಳ್ಳೆಯ ಪ್ರಜೆಗಳಾಗಿ ಸಮಾಜಕ್ಕೆ, ತಂದೆ, ತಾಯಿಗಳಿಗೆ, ಓದಿದ ಶಾಲೆಗೆ ಕೀರ್ತಿ ತರಬೇಕೆಂದು ಮಕ್ಕಳಿಗೆ ಸಾಲುಮರದ ತಿಮ್ಮಕ್ಕ ಸಲಹೆ ನೀಡಿದರು.

ಸಂಸ್ಕøತ ಪಾಠಶಾಲೆಯ ಮುಖ್ಯ ಶಿಕ್ಷಕರಾದ ರಾಜಣ್ಣನವರು ಮಾತನಾಡಿ, ಶ್ರೀವೀರಭದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಕೊಠಡಿಗಳ ಕೊರತೆ ಇದೆ. ಸಾಲುಮರದ ತಿಮ್ಮಕ್ಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೂರು ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಟ್ರಸ್ಟ್‍ನ ಅಧ್ಯಕ್ಷರಾದ ಸಾಲುಮರದ ತಿಮ್ಮಕ್ಕ ಟ್ರಸ್ಟ್‍ನ ಅಧ್ಯಕ್ಷರಾದ ಉಮೇಶ್ ಅವರಲ್ಲಿ ಮನವಿ ಮಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀವೀರಭದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಗುರುಮೂರ್ತಿ ಅವರು 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲು ಸಹಕರಿಸಿದ ಧಾನಿಗಳ ಸಹಕಾರವನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ವಾಸ ಸೈಂಟಿಪಿಕ್ ಕಂಪನಿಯ ಮಾಲೀಕರಾ ಪ್ರಕಾಶ್ ವಹಿಸಿದ್ದರು. ಶಾಲಾ ಮಕ್ಕಳಿಗೆ ಸಮವಸ್ತ್ರ, ಸ್ಕೂಲ್ ಬ್ಯಾಗ್,ಲೇಖನ ಸಾಮಗ್ರಿಗ

Leave a Reply

Your email address will not be published. Required fields are marked *