ಮನುಸ್ಮೃತಿಯ ಸಂಕೋಲೆಯ ಆಚೆಗೆ ಸಮಾಜದ ಒಳಿತಿಗಾಗಿ ದುಡಿದ ಸಾವಿತ್ರಿ ಬಾಯಿ ಫುಲೆ-ದಿನೇಶ್ ಅಮಿನ್ ಮಟ್ಟು

ತುಮಕೂರು: ಮನುಸ್ಮೃತಿಯ ಸಂಕೋಲೆಯ ಆಚೆಗೆ ಸಮಾಜದ ಒಳಿತಿಗಾಗಿ ದುಡಿದ ಸಾವಿತ್ರಿ ಬಾಯಿ ಫುಲೆ ಚಿಂತನೆ ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಸಾಕಷ್ಟು ಕಷ್ಟಗಳ ನಡುವೆ ಅನಕ್ಷರಸ್ಥ ಮಹಿಳೆಯರಿಗಾಗಿ ಶಾಲೆಯನ್ನು ನಡೆಸಲು ಸಾಕಷ್ಟು ಕಷ್ಟಪಟ್ಟರು. ಸಮಾಜದ ಕಿರುಕುಳ ಎದುರಿಸಿ ಶಾಲೆಯನ್ನು ನಡೆಸುವ ಮೂಲಕ ಶೋಷಿತ ಸಮುದಾಯಕ್ಕೆ ಅಕ್ಷರವನ್ನು ಕಲಿಸಿದ ಮಹಾನ್ ಚೇತನ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಜನ್ಮಾದಿನಾಚರಣೆಯಲ್ಲಿ ಮುಖ್ಯ ಭಾಷಣÀಕಾರರಾಗಿ ಮಾತನಾಡುತ್ತಿದ್ದರು.

ಮಹಿಳೆಯರು ಎಲ್ಲ ಸಮಾಜದಲ್ಲಿಯೂ ಶೋಷಿತರೇ, ಬ್ರಾಹ್ಮಣ ಸಮುದಾಯದಲ್ಲಿ ಮಹಿಳೆಯರ ಶೋಷಣೆ ಶೋಚನೀಯವಾಗಿದೆ. ಶೂದ್ರ ಸಮಾಜದ ಮಹಿಳೆಯರ ಸ್ಥಿತಿ ಇದ್ದಿದ್ದರಲ್ಲಿ ಉತ್ತಮವಾಗಿದೆ. ದುಡಿದು ತಿನ್ನುವುದಕ್ಕಾಗಿ ಮನೆಯಿಂದ ಹೊರ ಬರುವಂತ ಪರಿಸ್ಥಿತಿ ಇತ್ತು. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚಿದೆ ಎಂದರು.

ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಅವರು ಹುಟ್ಟುವ ಮೊದಲೇ ಹುಟ್ಟಿದ ಸಾವಿತ್ರಿ ಬಾಯಿ ಫುಲೆ ಅವರು ಮನುಸ್ಮೃತಿ ಸಂಕೋಲೆಯ ನಡುವೆ ಬದುಕಿ ಅಕ್ಷರ ಕಲಿತವರು, ಹೆಣ್ಣು ಮಕ್ಕಳನ್ನು ಶೋಷಣೆ ಮಾಡಿದ ಮನುಸ್ಮೃತಿಯನ್ನು ಅಂಬೇಡ್ಕರ್ ಅವರು ನೂರು ವರ್ಷಗಳ ನಂತರ ಸುಟ್ಟು ಹಾಕಿದರು, ಅಂಬೇಡ್ಕರ್ ಸುಟ್ಟಿದ್ದ ಬೂದಿಯಿಂದ ಮತ್ತೆ ಮನುಸ್ಮೃತಿ ಎದ್ದು ಬರುತ್ತಿದೆ ಎಂದರು.

ಇಂದು ಮೂಢ ನಂಬಿಕೆ, ಅಂಧಶ್ರದ್ಧೆ ಪಾಲಿಸುವವರಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಿದೆ. ಅದರಲ್ಲಿ ಸರ್ಕಾರಿ ನೌಕರರು ಸೇರಿದ್ದಾರೆ, ಅಂಬೇಡ್ಕರ್ ಅವರು ಹೇಳಿದ ಉಪದೇಶಗಳನ್ನು ಸ್ಲೋಗನ್ ಆಗಿ ಇಟ್ಟುಕೊಂಡಿದ್ದೆವೆ ಹೊರತು ಪಾಲಿಸುತ್ತಿಲ್ಲ, ಶಿಕ್ಷಣದಿಂದ ಅಂಧಶ್ರದ್ಧೆ, ಬಡತನ ಹೋಗುತ್ತದೆ ಎನ್ನುವ ಅಭಿಪ್ರಾಯ ಈಗ ಬದಲಾಗಿದೆ ಎಂದರು.

ಸಾವಿತ್ರಿ ಬಾಯಿ ಫುಲೆ ಅವರ ಪಠ್ಯವನ್ನು ಪುಸ್ತಕಗಳನ್ನು ರಾಜ್ಯದಲ್ಲಿ ತರಬೇಕಿದೆ ಆಗಷ್ಟೇ ಅವರಿಗೆ ನೈಜ ಗೌರವ ದೊರಕುತ್ತದೆ. ಹೆಣ್ಣು ಮಕ್ಕಳಿಗೆ ಅಂತಿಮ ಸಂಸ್ಕಾರ ಮಾಡಲು ಬಿಡದ ಸಮಾಜ ಇಂದಿಗೂ ಇದೆ. ಅಂತಹದರಲ್ಲಿ ಸಾವಿತ್ರಿ ಬಾಯಿ ಅವರ ದತ್ತು ಮಗನಿಗೆ ಜ್ಯೋತಿ ಬಾ ಫುಲೆ ಅವರ ಅಂತಿಮ ಸಂಸ್ಕಾರ ಮಾಡಲು ಬಿಡದೇ ಇದ್ದಾಗ ಸಾವಿತ್ರಿ ಬಾಯಿ ಫುಲೆ ಅವರೇ ಅಂತ್ಯ ಸಂಸ್ಕಾರ ಮಾಡುತ್ತಾರೆ ಎಂದರೆ ಅದು ಸಾಧಾರಣ ವಿಚಾರ ಅಲ್ಲ ಎಂದರು.

ಸಾಧಕ ಶಿಕ್ಷಕಿಯರಿಗೆ ಸನ್ಮಾನಿಸಿ ಅವರು ಮಾತನಾಡಿದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಾವಿತ್ರಿಬಾಯಿಫುಲೆ ಅವರನ್ನು ಬೀದಿಯಲ್ಲಿ ಅವಮಾನಿಸಿದ ಮಂದಿಯೇ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಾಗ ವಿರೋಧಿಸಿದರು. ಸಮಾಜವನ್ನು ಮೌಢ್ಯ ಹಾಗೂ ಅಂಧಶ್ರದ್ಧೆಯಲ್ಲಿಡಲು ಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಮೌಢ್ಯ ನಿಷೇಧ ಕಾಯ್ದೆ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದರಿಂದ ಒಂದು ವರ್ಗ ವಿರೋಧಿಸಿತ್ತು. ಈಗಿನ ಸಂದರ್ಭದಲ್ಲಿಯೇ ಇಷ್ಟು ವಿರೋಧ ವ್ಯಕ್ತವಾಗಿತ್ತು ಎಂದರೆ ಸಾವಿತ್ರಿಬಾಯಿ ಅಕ್ಷರ ಕಲಿಸಲು ಪ್ರಾರಂಭಿಸಿದ್ದಾಗ ಎಷ್ಟು ವಿರೋಧ ವ್ಯಕ್ತವಾಗಿತ್ತು ಎನ್ನುವುದು ಊಹಿಸಲು ಅಸಾಧ್ಯ ಎಂದರು.

ಸರ್ಕಾರ ಸಾವಿತ್ರಿಬಾಯಿಫುಲೆ ಹೆಸರಿನಲ್ಲಿ ಶಿಕ್ಷಕರಿಗೆ ಪ್ರಶಸ್ತಿಯನ್ನು ನೀಡುವ ಮೂಲಕ ಅಕ್ಷರದ್ವ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಚಿರಸ್ಥಾಯಿಗೊಳಿಸಬೇಕಿದೆ, ಸಾವಿತ್ರಿಬಾಯಿ ಅವರಿಂದಾಗಿಯೇ ಇಂದು ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಸಾವಿತ್ರಿ ಬಾಯಿ ಅವರಿಂದ ಪ್ರೇರಣೆಗೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮಹಿಳೆಯರಿಗೆ ಶಿಕ್ಷಣ ಪಡೆಯುವ ಹಕ್ಕನ್ನು ನೀಡಿದರು ಎಂದು ಸ್ಮರಿಸಿದರು.

ವಿವಿ ಕುಲಸಚಿವೆ ನಾಹೀದಾ ಜಮ್ ಜಮ್ ಮಾತನಾಡಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಇತಿಮಿತಿ ಹೇರುವವರೆಗೆ ಫೆಮಿನಿಸಂ ಮಹಿಳೆಯರಿಗೆ ಅವಶ್ಯಕವಾಗಿದೆ. ಪಿರೆಂಡ್ಸ್ ಪ್ರಾರ್ವಟಿ ಹೆಚ್ಚಿದೆ, ಮುಟ್ಟಿನ ಸಂದರ್ಭದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಲು ಆಗದಂತಹ ಬಡತನವಿದೆ ಎಂದರು.

ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಬೇಕಿದೆ, ಗ್ರಾಮೀಣರಲ್ಲಿ ಇದರ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಿದೆ. ಮಹಿಳೆಯರು ಸದೃಢವಾಗುವುದಕ್ಕೆ ಅಗತ್ಯವಾಗಿ ಆರ್ಥಿಕ ಸಬಲತೆ ಸಾಧಿಸಬೇಕಿದೆ. ಮನೆಯಲ್ಲಿ ದುಡಿಯುವ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಬೇಕಿದೆ ಎಂದರು.

¬¬ಕಾರ್ಯಕ್ರಮದಲ್ಲಿ ಶಿವಶಂಕರ್, ವೈ.ಕೆ.ಬಾಲಕೃಷ್ಣಪ್ಪ, ವೈ.ಟಿ.ತಿಮ್ಮಯ್ಯ, ವಿಜಯ್ ಕುಮಾರ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಡಾ.ಹೆಚ್.ನಾಗರಾಜು, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಕುಮಾರ್, ಸಿಎಒ ನರಸಿಂಹಮೂರ್ತಿ, ಗೋಪಿನಾಥ್, ಆರ್ ಎಫ್ ಒ ಸುರೇಶ್, ಕೋಟೆ ಕಲ್ಲಯ್ಯ, ಹನುಮಂತರಾಜು ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *