ತುಮಕೂರು : ಗೆದ್ದರೆ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರ ಮಾಡುತ್ತೇನೆ ಎಂದು ಆಮಿಷಗಳ ಸುರಿಮಳೆಗೈದು ಗೆದ್ದ ನಂತರ ಎಲ್ಲಿ ಹೋದ್ರಿ ಸುಳ್ಳೇಶ್ವರ ಎಂದು ತುಮಕೂರು ಗ್ರಾಮಾಂತರದ ಶಾಸಕರಾದ ಬಿ.ಸುರೇಶ್ ಗೌಡರನ್ನು ತು.ಗ್ರಾ.ದ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ತಮ್ಮ ಪತ್ರಿಕಾ ಪ್ರಕಟಣೆ ಯಲ್ಲಿ ಟೀಕಿಸಿದ್ದಾರೆ.
ಸನ್ಮಾನ್ಯ ಶಾಸಕರಾದ ಸುರೇಶ್ ಗೌಡ್ರೆ ಎಲ್ಲಿ ಹೋದರಿ ಗೆದ್ದು ವರ್ಷ ಕಳೆದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ಚುನಾವಣೆ ಸಮಯದಲ್ಲಿ ಮತದಾರನಿಗೆ ಆಮಿಷಗಳ ಸುರಿಮಳೆ ನಾನು ಬದಲಾಗಿದ್ದಿನಿ ಇನ್ನೂ ಮುಂದೆ ಎಲ್ಲಾ ಮತದಾರನಿಗೆ ಗೌರವ ಕೊಟ್ಟು ಕ್ಷೇತ್ರ ಅಭಿವೃದ್ಧಿ ಮಾಡತ್ತಿನಿ ಎಲ್ಲಾ ರಸ್ತೆಗಳನ್ನ ಶಾಲೆಗಳನ್ನ ಅಭಿವೃದ್ಧಿ ಮಾಡಿ ತೋರಿಸುತ್ತಿನಿ,
ನನ್ನನ್ನು ಇದೊಂದು ಬಾರಿ ಗೆಲ್ಲಿಸಿ ಎಂದು
ಮತದಾರರ ಮುಂದೆ ಮೊಸಳೆ ಕಣ್ಣಿರು ಹಾಕಿದ್ರಲ್ಲ ಆಗ ನಿನ್ನ ಶಕ್ತಿಸೌಧಕ್ಕೆ ಮತದಾರನನ್ನು ಕರೆಯಿಸಿ ಕಾಲು ಹಿಡಿದು ಮತ ಕೇಳಿದ್ರಿ, ಆದರೆ ನೀವು ಗೆದ್ದು ವರ್ಷ ಕಳೆದರೂ ಮತದಾರನಿಗೆ ಏನು ಅಭಿವೃದ್ಧಿ ಕೊಟ್ಟಿದ್ದಿಯ ಒಂದು ಉದಾಹರಣೆ ತೋರಿಸಿ ಸುಳ್ಳೇಶ್ವರ ಶಾಸಕರಾದ ಸುರೇಶ್ ಗೌಡ್ರೆ ಎಂದು ಗೌರಿಶಂಕರ್ ಕುಟಿಕಿದ್ದಾರೆ.
ಇಲ್ಲಿದೆ ನೋಡಿ ನೀವು ಮತದಾರನಿಗೆ ಕೊಟ್ಟ ಅಭಿವೃದ್ಧಿ ಮಾತು, ನೀವು ತುಮಕೂರು ಗ್ರಾಮಾಂತರ ಕ್ಷೇತ್ರದ ಗಳಗೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೇಣಸಂದ್ರ ಗ್ರಾಮದ ರಸ್ತೆ ಅಭಿವೃದ್ಧಿ ಹೇಗೆ ಮಾಡಿದ್ದೀರಿ ನಿಮ್ಮ ಕಣ್ಣಾರೆ ನೋಡಿ, ಆನಂದಿಸಿ, ಈ ರಸ್ತೆಯಲ್ಲಿ ದಿನಕ್ಕೆ ಸುಮಾರು ಎಂಟರಿಂದ ಹತ್ತು ಶಾಲಾ ಬಸ್ಸುಗಳು, ನೂರಾರು ಬೈಕ್ ಗಳು ಮಕ್ಕಳನ್ನು ಕರೆದುಕೊಂಡು ಹೋಗುವ ದಾರಿ ಹೇಗಿದೆ ನೋಡಿ ನಿಮ್ಮ ಅಭಿವೃದ್ಧಿ ಮಾನ್ಯ ಶಾಸಕರಾದ (ಸುಳ್ಳೇಶ್ವರ )ಸುರೇಶ್ ಗೌಡರೆ
ಎಂದು ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ವ್ಯಂಗ್ಯವಾಡಿ, ನೀವು ಚುನಾವಣಾ ಕಾಲದಲ್ಲಿ ಕೊಟ್ಟ ಆಮಿಷ ಗಳೂ ಈ ರಸ್ತೆಯ ಕೆಸರಿನಂತಾಗಿವೆ ಅಲ್ಲವೆ ಎಂದಿದ್ದಾರೆ.