ತುಮಕೂರು: ಉತ್ತಮ ಇಂಜಿನಿಯರಿಂಗ್ ಶಿಕ್ಷಣದ ಅವಶ್ಯಕತೆಯಿರುವ ಎಲ್ಲಾ ಪ್ರತಿಭಾವಂತರಿಗೂ ಅವಕಾಶ ದೊರಕಿಸಲು ಸಂಸ್ಥೆಯಿಂದ ಸ್ಕಾಲರ್‍ಶಿಪ್ ಟೆಸ್ಟ್ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಉತ್ತಮ ಪ್ರಯೋಜನ ಪಡೆದುಕೊಳ್ಳಬೇಕು, ಅತ್ಯುತ್ತಮವಾದ ಶೈಕ್ಷಣಿಕ ಅನುಭವದ ಅರ್ಪಣಾ ಮನೋಭಾವದ ವಿದ್ಯಾರ್ಹತೆಯ ಉಪನ್ಯಾಸಕರ ತಂಡವು ಸಂಸ್ಥೆಯಲ್ಲಿದ್ದು, ವಿದ್ಯಾರ್ಥಿಗಳಿಗೆ ಶ್ರೇಷ್ಠ ಬೋಧನಾ ವಿಧಾನಗಳ ಮೂಲಕ ತರಗತಿಗಳನ್ನು ನಡೆಸಿ ಉತ್ತಮ ಫಲಿತಾಂಶ ಮತ್ತು ಉದ್ಯೋಗ ಲಭ್ಯತೆಗೆ ಹುರಿದುಂಬಿಸಲಾಗುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ “ಸ್ಕಿಲ್ ಲ್ಯಾಬ್ ತರಬೇತಿ”ಗೆಂದು ವಿಶೇಷ ಅನುಮತಿ ಹೊಂದಿರುವ ವಿದ್ಯಾಲಯವು ಪ್ರತಿ ಸೆಮಿಸ್ಟರ್‍ನಲ್ಲಿ ಸ್ಕಿಲ್ ಲ್ಯಾಬ್ ತರಬೇತಿ ನೀಡುವುದರ ಮೂಲಕ ಅತ್ಯಾಧುನಿಕ ವಿಷಯಗಳ ಕಲಿಕೆಗೆ ನೆರವಾಗಿ ತನ್ಮೂಲಕ ಉದ್ಯೋಗ ಲಭ್ಯತೆಗೆ ಸುಗಮ ಮಾರ್ಗವನ್ನುಂಟುಮಾಡಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ಹೇಳಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಮೇ. 17 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಪ್ರವೇಶಾತಿ ಮತ್ತು ವಿದ್ಯಾರ್ಥಿ ವೇತನ ಪರೀಕ್ಷೆಯ ಪ್ರತಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್‍ರವರು ಮಾತನಾಡುತ್ತಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಪ್ರತಿವರ್ಷವೂ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಅಗತ್ಯವಾದ ಉತ್ತಮ ಕಲಿಕಾ ವಾತಾವರಣ, ಲ್ಯಾಬ್‍ಗಳು ಹಾಗೂ ಮತ್ತೆಲ್ಲಾ ಸೌಕರ್ಯಗಳನ್ನು ಒದಗಿಸಿದ್ದು ಉದ್ಯೋಗ ನಿಯೋಜನೆ ಮತ್ತು ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆಯೆಂದರು. ಸಂಸ್ಥೆಯಿಂದ ಈವರೆಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ಎಂ. ಬಿ. ಎ ಶಿಕ್ಷಣ ಪಡೆದಿದ್ದು ಭಾರತ ಮತ್ತು ವಿಶ್ವದಾದ್ಯಾಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಅಗತ್ಯವಾದ ಉತ್ತಮ ಮೂಲಭೂತ ಸೌಕರ್ಯಗಳು, ಹಸಿರು ಕ್ಯಾಂಪಸ್, ಆಧುನಿಕ ತರಗತಿ, ಪ್ರಯೋಗಾಲಯಗಳು, ಸೆಮಿನಾರ್ ಹಾಲ್‍ಗಳು, ವಿಶಾಲವಾದ ಡಿಜಿಟಲ್ ವ್ಯವಸ್ಥೆಯುಳ್ಳ ಗ್ರಂಥಾಲಯ, ವಿಸ್ತಾರವಾದ ಆಡಿಟೋರಿಯಂ ಸಭಾಂಗಣ, ಬ್ಯಾಂಕಿಂಗ್ ವ್ಯವಸ್ಥೆ, ಎ.ಟಿ.ಎಂ, ಕ್ಯಾಂಟೀನ್, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಮೈದಾನಗಳು, ಜಿಮ್, 24×7 ಭದ್ರತಾ ವ್ಯವಸ್ಥೆಯುಳ್ಳ ಮಹಿಳಾ ಹಾಸ್ಟೆಲ್ ಮತ್ತು ಪ್ರತ್ಯೇಕ ಬಾಲಕರ ಹಾಸ್ಟೆಲ್, ನಗರದಿಂದ ಸುಲಭವಾದ ಕಾಲೇಜಿನ ಬಸ್ ಮತ್ತು ಸಾರ್ವಜನಿಕ ಬಸ್ ವ್ಯವಸ್ಥೆ, ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿ ಸ್ನೇಹಿ ಮತ್ತು ವಿದ್ಯಾ ಪ್ರೇರಕ ವಾತಾವರಣ ನಿರ್ಮಿಸಲಾಗಿದೆ ಎಂದರು.
ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನರೇಂದ್ರ ವಿಶ್ವನಾಥ್‍ರವರು ಮಾತನಾಡುತ್ತಾ ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಸಾಫ್ಟ್ ಸ್ಕಿಲ್ ತರಬೇತಿಗಳನ್ನು ನೀಡಿ ಅರ್ಹ ವಿದ್ಯಾರ್ಥಿಗಳಿಗೆ ಶೇಖಡಾ 90ರಷ್ಟು ಉದ್ಯೋಗಗಳನ್ನು ನೀಡಿದ್ದು ಅವರುಗಳ ವಾರ್ಷಿಕ ಸರಾಸರಿ ವರಮಾನ ಪ್ಯಾಕೇಜ್ ರೂ 4.50 ಲಕ್ಷಗಳಷ್ಟಿರುತ್ತದೆ. ಈ ಪ್ರಕ್ರಿಯೆಯನ್ನು ನಿರಂತರವಾಗಿಸಿ ಇನ್ನು ಹೆಚ್ಚಿನ ಉದ್ಯೋಗವಕಾಶಗಳನ್ನು ಕೊಡಿಸಲು “ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್” ವಿಭಾಗದಿಂದ ಸದಾ ಶ್ರಮಿಸಲಾಗುತ್ತಿದೆ. ಈ ವರ್ಷದ ಪ್ರವೇಶಾತಿಗಾಗಿ ಈಗಾಗಲೆ ನೊಂದಣಿ ಪ್ರಾರಂಭವಾಗಿದ್ದು, ಪಿ.ಯು.ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜಿನಿಂದಲೇ 2024-2025 ನೇ ಸಾಲಿಗೆ ದಿನಾಂಕ 19-05-2024 ರಂದು ಬೆಳಿಗ್ಗೆ 10.00 ಗಂಟೆಗೆ ಬಿ.ಇ ಸ್ಕಾಲರ್‍ಷಿಪ್ ಟೆಸ್ಟ್ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಿಇ ಪದವಿ ತರಗತಿಗಳ 09 ವಿಭಾಗಗಳು ಕೆಳಕಂಡಂತಿದೆ: ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್,
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡೇಟಾ ಸೈನ್ಸ್,ಇನ್‍ಫಾರ್ಮೆಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್,ಕಂಪ್ಯೂಟರ್ ಸೈನ್ಸ್ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್),ಕಂಪ್ಯೂಟರ್ ಸೈನ್ಸ್ (ಸೈಬರ್ ಸೆಕ್ಯೂರಿಟಿ),ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್,ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್,ಸಿವಿಲ್ ಇಂಜಿನಿಯರಿಂಗ್., ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್‍ಗಳು ಇದ್ದಾವೆ ಎಂದು ಹೇಳಿದರು.
ಸ್ನಾತಕೋತ್ತರ ಪದವಿ ತರಗತಿಗಳಾದ:ಎಂ.ಬಿ.ಎ (ಹೆಚ್.ಆರ್, ಫೈನಾನ್ಸ್),ಎಂ.ಟೆಕ್ (ಕಂಪ್ಯೂಟರ್ ಎಯ್ಡೆಡ್ ಡಿಸೈನ್ ಆಫ್ ಸ್ಟ್ರಕ್ಚರ್ಸ್),ಎಂ.ಟೆಕ್ (ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್),ಎಂ.ಟೆಕ್ (ವಿ. ಎಲ್. ಎಸ್. ಐ).ಎಂ. ಸಿ. ಎ ವಿಭಾಗಗಳಿವೆ.
ಪರೀಕ್ಷೆ ಬರೆದು ಕಾಲೇಜಿನಲ್ಲಿ ಪ್ರವೇಶಾತಿ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಎಂದು ಹೇಳಿದರು.
ಕೆಳಕಂಡಂತೆ ಸ್ಕಾಲರ್‍ಷಿಪ್ ಲಭ್ಯವಿರುತ್ತದೆ: 1 ರಿಂದ 10ನೇ ರ್ಯಾಂಕ್ ಪಡೆದವರಿಗೆ 4,00,000 ರೂಗಳು,11 ರಿಂದ 30ನೇ ರ್ಯಾಂಕ್ ಪಡೆದವರಿಗೆ 3,00,000 ರೂಗಳು, 31 ರಿಂದ 100ನೇ ರ್ಯಾಂಕ್ ಪಡೆದವರಿಗೆ 2,00,000 ರೂಗಳು,101 ರಿಂದ ನಂತರ ರ್ಯಾಂಕ್ ಪಡೆದವರಿಗೆ 1,00,000 ರೂಗಳು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಡಿಯಲ್ಲಿ 2002ರಲ್ಲಿ ಶ್ರೀದೇವಿ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಲಾಗಿ ಈಗ 22 ವರ್ಷಗಳ ಉತ್ಕøಷ್ಟ ಶೈಕ್ಷಣಿಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದೇ ಸಂದರ್ಭದಲ್ಲಿ ಪ್ರತಿಕಾ ಗೋಷ್ಠಿಯಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್, ಡಾ.ಸಿ.ನಾಗರಾಜ್, ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಪ್ರತಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
.