ತುಮಕೂರು: ಪ್ಯೂಚರ್‌ಜೆನ್ ಸ್ಕಾಲರ್ ಕ್ಯಾಲಿಪೋರ್ನಿಯ ಯು.ಎಸ್.ಎ ವತಿಯಿಂದ ಆಗಸ್ಟ್ 01ರ ಗುರುವಾರ ಬೆಳಗ್ಗೆ 11 ಗಂಟೆಗೆ ಏಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಆಡಿಟೋರಿಯಂನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಜಿ.ಎಸ್. ಬಸವರಾಜು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರು ಹಾಗೂ ಹೆಚ್.ಎಂ.ಎಸ್ ಎಜುಕೇಷನ್ ಸೊಸೈಟಿಯ ನಿರ್ದೇಶಕರಾದ ಡಾ. ರಫೀಕ್ ಅಹಮದ್, ಏಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಪ್ರೊ.ಮಲ್ಲಯ್ಯ ಹೆಚ್.ಎ. ಅವರುಗಳು ಭಾಗವಹಿಸಲಿದ್ದು, ಪ್ಯೂಚರ್‌ಜೆನ್ ಸ್ಕಾಲರ್‌ನ ಮುಖ್ಯಸ್ಥರಾದ ತುಮಕೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ರ‍್ಯಾಂಕ್ ನಜೀರ್ ಅಹಮದ್ ಅವರ ಮೊಮ್ಮಗಳು ನೈಲಾ ಅಹಮದ್ ಅವರು ಪ್ರತಿಭಾವಂತರಿಗೆ ಬಹುಮಾನ ವಿತರಿಸಲಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಸಲುವಾಗಿ ರ‍್ಯಾಂಕ್ ನಜೀರ್ ಅಹಮದ್ ಅವರು ಸ್ಥಾಪಿಸಿರುವ ಪ್ಯೂಚರ್‌ಜ್ಹೆನ್ ಸ್ಕಾಲರ್ ಸಂಸ್ಥೆ ಪ್ರತಿವರ್ಷ ಒಳ್ಳೆಯ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಬಹುಮಾನ ರೂಪದಲ್ಲಿ ನಗದು ಪುರಸ್ಕಾರ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಬೆಳೆವಣಿಗೆಗೆ ಸಹಕಾರ ನೀಡುತ್ತಾ ಬಂದಿದೆ.