ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಅನ್ನದಾನ, ವಿದ್ಯಾದಾನ, ಆದ್ಯಾತ್ಮಿಕ ಪರಂಪರೆಯನ್ನು ತಿಳಿಸುವ ಮೂಲಕ ಕೋಟ್ಯಾಂತರ ಜನರಿಗೆ ದಾರಿದೀಪವಾಗಿದ್ದಾರೆ. ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಹರಿದ್ವಾರದ ಪತಂಜಲಿ ಯೋಗಪೀಠದ ಪರಮಪೂಜ್ಯ ಸ್ವಾಮಿ ರಾಮದೇವ್ ಜೀ ಬಣ್ಣಿಸಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪದ್ಮಭೂಷಣ ಕರ್ನಾಟಕ ರತ್ನ, ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 117 ಜಯಂತಿ ಹಾಗೂ ಗುರುವಂದನಮಹೋತ್ಸವದ ಅಂಗವಾಗಿ 117 ದೀಪಗಳನ್ನು ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭವಂತನ ದಯೆಯಿಂದ ಮಠಕ್ಕೆ ಬಂದಾಗ ಲಿಂಗದೀಕ್ಷೆ ಆಗಿ ರಾಮದೇವನಿಂದ ರಾಮಲಿಂಗ ಆಗಿ ಬದಲಾಗಿದ್ದೇನೆ. ತಪಸ್ವಿ ಗುರುಗಳ ಪ್ರೇರಣ ಶಕ್ತಿ. ಕಾಯಕ ನಿμÉ್ಠಯೂ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಬೇಕಾಗಿದೆ. ಸಿದ್ದಲಿಂಗ ಸ್ವಾಮೀಜಿಗಳು ಶಿವಕುಮಾರ ಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ ಅವರ ಪ್ರತಿ ರೂಪದಂತೆ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ದಿವ್ಯ ಸಾನಿಧ್ಯವನ್ನು ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ಬಸವಣ್ಣನವರ ವ್ಯಕ್ತಿತ್ವವನ್ನು ಅನುಕರಣೀಯವಾಗಿ ಯಥಾವತ್ತಾಗಿ ಪಾಲಿಸಿಕೊಂಡು ಬಂದವರು ಡಾ.ಶ್ರೀ ಶಿವಕುಮಾರಸ್ವಾಮೀಜಿಯವರು. ನಮ್ಮ ಮಠದ ದಾಸೋಹಕ್ಕೆ ಸುದೀರ್ಘವಾದ ಇತಿಹಾಸವಿದೆ. ಶ್ರೀ ಅಟವಿ ಶಿವಯೋಗಿಗಳಿಂದ ಅಲ್ಪ ಪ್ರಮಾಣದಲ್ಲಿ ಪ್ರಾರಂಭವಾಗಿ ಶ್ರೀ ಉದ್ಧಾನ ಶಿವಯೋಗಿಗಳ ಕಾಲದಲ್ಲಿ ಹೆಚ್ಚಾಗಿ ಬೆಳೆಯಿತು. ಈ ಕ್ಷೇತ್ರದ ಗುರುಪರಂಪರೆಯ ಅನ್ನದಾಸೋಹ ಹಾಗೂ ವಿದ್ಯಾದಾಸೋಹವನ್ನು ಸಾಸಿರಮಡಿಯಾಗಿ ಹೊಸಬಾಷ್ಯ ಬರೆದವರು ಪರಮಪೂಜ್ಯ ಶಿವಕುಮಾರ ಮಹಾಶಿವಯೋಗಿಗಳು. ಅವರ ಹಾದಿಯಲ್ಲಿ ನಡೆಯುವ ಕಾಯ ಮಾಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸೂತ್ತುರು ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ ವಹಿಸಿದ್ದರು. ನಾಡೋಜ ಮುಂಡರಗಿ ಅನ್ನದಾನೇಶ್ವರ ಮಹಾಸಂಸ್ಥಾನ ಮಠದ ಡಾ. ಶ್ರೀ ಅನ್ನದಾನೇಶ್ವರ ಮಹಾಸ್ವಾಮೀಜಿ, ಧಾರವಾಡದ ಶ್ರೀ ಮುರುಘಾ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯ ಅಜ್ಜರು. ಶ್ರೀ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮೀಜಿ ಭಾಗವಹಿಸಿದ್ದರು.