ಎಸ್‍ಎಸ್‍ಎಂಸಿಗೆ ಥ್ರೋ ಬಾಲ್‍ನಲ್ಲಿ ಬಾಲಕಿಯರ ತಂಡಕ್ಕೆ ರನ್ನರ್ಸ್ ಪ್ರಶಸ್ತಿ

ತುಮಕೂರು: ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳು ಮಣಿಪಾಲ್‍ನಲ್ಲಿ ಇತ್ತೀಚಿಗೆ ನಡೆದ ದಕ್ಷಿಣ ಭಾರತೀಯ ಮಣಿಪಾಲ ಕ್ರೀಡಾಕೂಟ-2024 ರಲ್ಲಿ ಬಾಲಕಿಯರ ತಂಡ ಥ್ರೋ ಬಾಲ್ ನಲ್ಲಿ ರನ್ನರ್ಸ್ ಪ್ರಶಸ್ತಿ ಮತ್ತು ಹುಡುಗರ ವಾಲಿಬಾಲ್ ತಂಡ 3 ನೇ ಸ್ಥಾನವನ್ನು ಪಡೆದಿದೆ.

ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ, ವಿಜೇತ ಬಾಲಕೀಯರ ಮತ್ತು ಬಾಲಕರ ತಂಡ ಗೆಲುವಿಗೆ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಲಾಯಿತು. ಮುಂದಿನ ಟೂರ್ನಿಗಳಲ್ಲೂ ನಿರಂತರವಾಗಿ ಭಾಗವಹಿಸುವುದಕ್ಕೆ ಪೋತ್ಸಾಹ ನೀಡುವುದಾಗಿ ಕಾಲೇಜಿನ ಆಡಳಿತ ಮಂಡಳಿ ಪ್ರಕಟಿಸಿತು.

ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಾಣಿಕೊಪ್ಪ, ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ್, ಕಾಲೇಜಿನ ಅಧೀಕ್ಷಕರಾದ ಡಾ.ವೆಂಕಟೇಶ್, ಸಾಹೇ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿಕುಮಾರ್ ಅವರು ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ, ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ. ಎಂ.ಜೆಡ್.ಕುರಿಯನ್ ಅವರು ಗೆಲವು ಸಾಧಿಸಿದ ಕಾಲೇಜಿನ ಉಭಯ ತಂಡಗಳನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *