ತುಮಕೂರು: ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ನಸಿಂಗ್ ಕಾಲೇಜಿನ ಆವರಣದಲ್ಲಿ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.
ಕಾಲೇಜಿನ ಆವರಣದಲ್ಲಿರುವ ಡಾ.ಎಚ್.ಎಂ.ಗಂಗಾಧರಯ್ಯನವರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರಿಸ್‍ಮಸ್ ಹಬ್ಬದ ಆಚರಣೆಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ.ಜಿ. ಸುಜಾತ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಪ್ರಪಂಚದಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಡಿಸೆಂಬರ್ ಅಂತ್ಯದಲ್ಲಿ ಆಚರಿಸಲಾಗುತ್ತದೆ. ಪ್ರಪಂಚದ ರಕ್ಷಕನನ್ನು ಸ್ವೀಕರಿಸಲು ನಾವು ನಮ್ಮ ಹೃದಯವನ್ನು ತೆರೆಯುವ ಸಮಯ ಇದು. ಕ್ರಿಸ್ತನ ಜನ್ಮದಿನದ ಸಂದರ್ಭದಲ್ಲಿ ಸರ್ವದರ್ಮಗಳ ಕುಟುಂಬಗಳಿಗೆ ಸಂತೋಷ, ಶಾಂತಿಯನ್ನು ದೊರಕಲಿ ಎಂದು ಅವರು ಆಶಿಸಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ರಮೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕ್ರಿಸ್‍ಮಸ್ ಹಬ್ಬದಲ್ಲಿ ಸರ್ವರಿಗೂ ಒಳ್ಳೆಯದನ್ನು ಬಯಸೋಣ. ಎಲ್ಲಾ ದುರುದ್ದೇಶಗಳನ್ನು ತೊಡೆದು ಹಾಕುವ ಶಕ್ತಿಯನ್ನು ಯೇಸುಕ್ರಿಸ್ತ ನೀಡಲಿ ಎಂದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಗ್ರೇಸಿ, ಶ್ರೀಮತಿ ಮರ್ಸೀ ಮತ್ತು ಶ್ರೀಮತಿ ಶರ್ಮೀಲಿ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.
ವಿದ್ಯಾರ್ಥಿಗಳಿಂದ ಸಂಭ್ರಮಾಚರಣೆ:
ಸ್ನಾತಕೋತ್ತರ, ಪದವಿ ಮತ್ತು ಡಿಪ್ಲೋಮೋ ನರ್ಸಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವು ‘ಆವಾಹನೆ ನೃತ್ಯ’ ದೊಂದಿಗೆ ದೇವರ ಆಶೀರ್ವಾದವನ್ನು ಕೋರುವ ಮೂಲಕ ಪ್ರಾರಂಭವಾಯಿತು.
ಗಾಯನ,ನೃತ್ಯ ಮತ್ತು ಮನರಂಜನೆ ಸೇರಿದಂತೆ ವಿವಿಧ ಪ್ರದರ್ಶನಗಳು ಕ್ರಿಸ್‍ಮಸ್ ಆಚರಣೆಯಲ್ಲಿ ಕಂಡುಬಂದವು. ಸಾಂತಾ ಕ್ಲಾಸ್ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ಆಕರ್ಷಣಿಯ ಕೇಂದ್ರ ಬಿಂದುವಾಗಿದ್ದರು. ಸಾಂತಾಕ್ಲಾಸ್ ಅವರು ವೇದಿಕೆಯಲ್ಲಿದ್ದವರಿಗೆ ಕ್ರಿಸ್‍ಮಸ್ ಉಡುಗೊರೆಯನ್ನು ನೀಡಿದರು.