ತುಮಕೂರಿನ ಸಿದ್ಧವಿನಾಯಕ ಸಮುದಾಯ ಭವನದಲ್ಲಿ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಶ್ರೀ ಸಿದ್ಧಿ ವಿನಾಯಕನ ವಿಸರ್ಜನಾ ಮೆರವಣಿಗೆಯಲ್ಲಿ ಡೋಲು, ನಂದಿಧ್ವಜ, ನಾಸಿಕ್ ಡೋಲು, ನಾದಸ್ವರ, ವೀರಗಾಸೆ, ಪೂಜಾ ಕುಣಿತ, ಕೀಲುಕುದುರೆ ನೃತ್ಯ, ಚಂಡೆವಾದ್ಯ, ಪಟ್ಟಣದ ಕುಣಿತ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.

ವಿನಾಯಕನಗರದ 3ನೇ ಮುಖ್ಯ ರಸ್ತೆಯಿಂದ ಹೊರಟ ಮೆರವಣಿಗೆ ಬಿ.ಹೆಚ್.ರಸ್ತೆ, ಬಿ.ಜಿ.ಎಸ್. ವೃತ್ತ, ಎಂ.ಜಿ. ರಸ್ತೆ, ಹೋಟೆಲ್ ದ್ವಾರಕ ಬಲ ಭಾಗದಿಂದ ಹೊರಪೇಟೆ, ಗುಂಚಿ ಚೌಕ, ವಿವೇಕಾನಂದ ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಆಯಿಲ್ ಮಿಲ್ ರಸ್ತೆ, ಅಗ್ರಹಾರ ಮುಖ್ಯ ರಸ್ತೆ, ಚಿಕ್ಕಪೇಟೆ, ಕೋಟೆ ಆಂಜನೇಯಸ್ವಾಮಿ ದೇವಾಲಯದ ವೃತ್ತದಿಂದ ಅಮಾನಿಕೆರೆ ತಲುಪಿತು.
ವಿಸರ್ಜನಾ ಮಹೋತ್ಸವದ ಅಂಗವಾಗಿ ಅಮಾನಿಕೆರೆ ಪಾರ್ಕ್ ಬಳಿ ಆಕರ್ಷಕ ಸಿಡ್ಡಿಮದ್ದು ಪ್ರದರ್ಶನ ನಡೆಸಿ, ತೆಪೆÇ್ಪೀತ್ಸವದೊಂದಿಗೆ ವಿನಾಯಕನನ್ನು ಅಮಾನಿಕೆರೆಯಲ್ಲಿ ವಿಸರ್ಜಿಸಲಾಯಿತು.