ಅರವಿಂದ ಕೇಜ್ರಿವಾಲ ಬಂಧನ ವಿರೋಧಿಸಿ ಮೌನ ಪ್ರತಿಭಟನೆ

ತುಮಕೂರು : ನಗರದ ಟೌನ್ ಹಅಲ್ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದಿಂದ ಡಾ. ವಿಶ್ವನಾಥ್ ಮತ್ತು ಜಯರಾಮಯ್ಯನವರ ನೇತೃದ್ವದಲ್ಲಿ ದೆಹಲಿ ಮುಖ್ಯಮಂತ್ರಿಯ ಅರವಿಂದ್ ಕೇಜ್ರಿವಾಲ್ ರವರನ್ನು ವಿನಾಕಾರಣ ಬಂಧಿಸಿರುವುದನ್ನು ವಿರೋಧಿಸಿ ಮೌನ ಪ್ರತಿಭಟನೆ ಮಾಡಲಾಯಿತು.

 ಈ ಸಂದರ್ಭದಲ್ಲಿ ಡಾIIವಿಶ್ವನಾಥ ಮಾತನಾಡಿ ಇದು ಪ್ರಜಾಪ್ರಭುತ್ವಕ್ಕೆ ಕರಾಳ ದಿನ. ಮೋದಿ ಸರ್ಕಾರ  ಇ.ಡಿ. ಎಂಬ ಏಜೆನ್ಸಿಯನ್ನು ಉಪಯೋಗಿಸಿಕೊಂಡು ಅರವಿಂದ್ ಕೇಜ್ರಿವಾಲ್ ಎಂಬ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಅಬಕಾರಿ ಹಗರಣ ಎಂಬ ಸುಳ್ಳು ಆರೋಪದ ಮೇಲೆ ಬಂದಿಸಿರುವುದು ಮೋದಿಯ ಸರ್ವಾಧಿಕಾರಿ ಧೋರಣೆ ಖಂಡಿಸಿದರು.

ಜಿಲ್ಲಾಧ್ಯಕ್ಷರಾದ ಜಯರಾಮಯ್ಯ ಮಾತಾನಾಡಿ ಬಿಜೆಪಿಯಲ್ಲಿ ಇರುವವರು ಉತ್ತಮರು ಬೇರೆ ಪಕ್ಷದ ನಾಯಕರು ಭ್ರಷ್ಟರು ಎಂಬ ಭಾವನೆ ಮೂಡಿಸಲಾಗುತ್ತಿದೆ. ಬಿಜೆಪಿ ಯವರ ಮೇಲೆ ಇವರೆಗೂ ಯಾವುದೇ ಇ.ಡಿ. ಸಿ.ಬಿ.ಐ ಎಂಬ ಏಜೆನ್ಸಿ ಯಾವುದೇ ದಾಳಿ ಮಾಡಲ್ಲ ಎಂದರೆ ಇವರ ಮನೋಭಾವ ಎಂತದ್ದು ಎಂದು ತೋರಿಸುತ್ತದೆ.

 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಲಸಂದ್ರ ಮಧುಸೂಧನ್ ಮಾತನಾಡಿ ಇದೊಂದು ಸರ್ವಾಧಿಕಾರಕ್ಕೆ ಹಿಡಿದ ಕೈ ಕನ್ನಡಿ ಬಿಜೆಪಿಯವರಿಗೆ ಎಎಪಿ ಕಂಡು ಭಯವಾಗಿದ್ದು ಎಂಬುದನ್ನು ತೋರಿಸುತ್ತದೆ. ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರುಕ್ಸಾನ ಬಾನು, ರೈತ ಘಟಕದ ಅಧ್ಯಕ್ಷರಾದ ಕರೀಗೌಡ, ನಗರಾಧ್ಯಕ್ಷರಾದ  ಗೌಸ್ ಪೀರ್, ದಿನೇಶ್ ಕುಮಾರ್ , ರಮ್ಯ, ಲಿಂಗರಾಜು ಮತ್ತು ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *