ನವೆಂಬರ್ 2ರಂದು ಎಸ್‍ಐಟಿ 27ನೇ ಹಳೆ ವಿದ್ಯಾರ್ಥಿಗಳ ಸಮ್ಮೇಳನ

ತುಮಕೂರು : ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು (SITAA) 1997 ರಲ್ಲಿ ಸ್ಥಾಪಿಸಲಾಗಿದ್ದು, 2013 ರಲ್ಲಿ ನೋಂದಾಯಿತ ಸಂಸ್ಥೆಯಾಗಿದ್ದು, ನವೆಂಬರ್ 2ರಂದು 27ನೇ ಹಳೆ ವಿದ್ಯಾರ್ಥಿಗಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಂಟಿ ಕಾರ್ಯದರ್ಶಿ ಶಿವಕುಮಾರಯ್ಯ ತಿಳಿಸಿದ್ದಾರೆ.

ಪ್ರಸ್ತುತ SITAA  ದಲ್ಲಿ ಸುಮಾರು 42,000 ಹಳೆಯ ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ. ಇವರು 24 ದೇಶಗಳಲ್ಲಿ ವಿಸ್ತರಿಸಿಕೊಂಡಿದ್ದು, ಅಮೆರಿಕಾ ಮತ್ತು ಕೆನಡಾ, ಯು.ಕೆ. ಮತ್ತು ಯುರೋಪ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್, ದಕ್ಷಿಣ ಪೂರ್ವ ಏಷ್ಯಾ ಹಾಗೂ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (MENA) ಪ್ರದೇಶಗಳಲ್ಲಿ ಸಂಘದ ಅಂತಾರಾಷ್ಟ್ರೀಯ ಘಟಕಗಳು (ಚಾಪ್ಟರ್‍ಗಳು) ಸ್ಥಾಪಿಸಲ್ಪಟ್ಟಿವೆ. ಇದಲ್ಲದೆ, ಭಾರತದ ಹಲವು ರಾಜ್ಯಗಳಲ್ಲಿಯೂ ಸ್ಥಳೀಯ ಘಟಕಗಳು (ಚಾಪ್ಟರ್‍ಗಳು) ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

ಪ್ರತಿ ವರ್ಷ ಅಕ್ಟೋಬರ್ 2 ರಂದು ಹಳೆ ವಿದ್ಯಾರ್ಥಿಗಳ ಸಭೆ ಹಾಗೂ ವಾರ್ಷಿಕ ಸಾಮಾನ್ಯ ಸಭೆಯನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷ, 12 ನೇ ಸಾಮಾನ್ಯ ಸಭೆ ಹಾಗೂ 27 ನೇ ಹಳೆ ವಿದ್ಯಾರ್ಥಿ ಸಮ್ಮೇಳನವನ್ನು 2025 ರ ನವೆಂಬರ್ 2 ರಂದು (ಭಾನುವಾರ) ಬೆಳಿಗ್ಗೆ 9.30 ಕ್ಕೆ ಎಸ್.ಐ.ಟಿ. ಯ ಬಿರ್ಲಾ ಸಭಾಂಗಣದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

SITAA ಸಂಸ್ಥೆಯು ಪ್ರತಿ ವರ್ಷ ತನ್ನ ಹಳೆಯ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಸಂಶೋಧನೆ ಅಭಿವೃದ್ಧಿ ಮತ್ತು ವಿಜ್ಞಾನ, ಉದ್ಯಮಶೀಲತೆ, ಜಾಗತಿಕ ಪ್ರಭಾವ, ಅತ್ಯುನ್ನತ ಅಂತಾರಾಷ್ಟ್ರೀಯ ಹಳೆ ವಿದ್ಯಾರ್ಥಿ, ಕ್ರೀಡೆ, ಮನೋರಂಜನೆ ಮತ್ತು ಸಾಮಾಜಿಕ ಸೇವೆ ಸಾಧಕ ವಿಭಾಗಗಳಲ್ಲಿ ಅವರುಗಳ ಅಸಾಧಾರಣ ಸಾಧನೆಗಳು ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಗಳಿಗಾಗಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವರ್ಷ ಈ ಕೆಳಕಂಡ 13 ಮಂದಿ ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿದ ವಿಶಿಷ್ಟ ಕೊಡುಗೆಗಾಗಿ “ವಿಶಿಷ್ಟ ಹಳೆಯ ವಿದ್ಯಾರ್ಥಿ ಪ್ರಶಸ್ತಿಗಳನ್ನು” ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿಗಳನ್ನು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ಪ್ರಧಾನ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ 1975 ನೇ ಹಾಗೂ 2000 ನೇ ಇಸವಿಗಳಲ್ಲಿ ಪದವೀದರರಾಗಿರುವ ಹಳೆ ವಿದ್ಯಾರ್ಥಿಗಳಿಗೆ ಕ್ರಮವಾಗಿ ಸುವರ್ಣ ಮಹೋತ್ಸವ ಹಾಗೂ ಬೆಳ್ಳಿ ಮಹೋತ್ಸವ ಪದವೀದರರೆಂದು ಸನ್ಮಾನಿಸಲಾಗುತ್ತಿದೆ.

SITAA ಸಂಸ್ಥೆಯು ಕಾಲೇಜಿನಲ್ಲಿ ನವೀನತೆ, ತರಬೇತಿ ಮತ್ತು ಉದ್ಯಮಶೀಲತೆ ವಾತಾವರಣವನ್ನು ಉತ್ತೇಜಿಸಲು SITAA – ಇನ್ನೋವೇಷನ್ ಟ್ರೈನಿಂಗ್ ಅಂಡ್ ಡೆವಲಪ್‍ಮೆಂಟ್ ಸೆಂಟರ್ (SITAA-ITDC)ಎಂಬ ಕೇಂದ್ರವನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳಿಂದಲೇ ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡುವ ಮಹತ್ತರ ಯೋಜನೆಯನ್ನು ಪ್ರಾರಂಭಿಸಿದೆ. ಈ ಕೇಂದ್ರವು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹಾಗೂ ಉತ್ತಮ ತಂತ್ರಜ್ಞಾನದ ಪ್ರಗತಿಗಳ ಅರಿವು ಮೂಡಿಸುವಲ್ಲಿ ಸಹಕಾರಿಯಾಗಲಿದೆ. ಈ ಯೋಜನೆಯ ಅಂದಾಜು ವೆಚ್ಚ ರೂ. 15.00 ಕೋಟಿ ಆಗಿದ್ದು, 32,000 ಚ.ಅಡಿ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರ ಅಡಿಪಾಯ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *