ತುಮಕೂರು: ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಅತ್ಯಂತ ಉಪಯುಕ್ತ ಹಾಗೂ ಬೇಡಿಕೆಯ ವಿಷಯವಾಗಿರುವ ಸಮಾಜಕಾರ್ಯ ದೇಶದ ಬದಲಾವಣೆಗೆ ಭದ್ರ ಬೂನಾದಿ. ಸೇವಾ ಮನೋಭಾವವೇ ಮುಖ್ಯ ಗುರಿಯಾದಾಗ ನಮ್ಮಲ್ಲಿರುವ ಕೆಡುಕುಗಳ ಶಕ್ತಿ ಕಡಿಮೆಯಾಗಿ, ಸಕಾರಾತ್ಮಕ ಅಂಶಗಳಷ್ಟೇ ಸಾಧನೆಗೆ ಪೂರಕವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಇಂಡಿಯನ್ ಸೊಸೈಟಿ ಆಫ್ ಪ್ರೋಫೆಷನಲ್ ಸೋಷಿಯಲ್ ವರ್ಕ್‍ನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಶಿಕ್ಷಣದಲ್ಲಿ ಸಮಾಜಕಾರ್ಯ’ ವಿಷಯ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಾನ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಸಮಾಜ ಕಾರ್ಯದ ನಿರ್ಣಾಯಕ ಪಾತ್ರವನ್ನು ಅನ್ವೇಷಿಸಲು ಈ ಸಮ್ಮೇಳನವು ಒಂದು ಅನನ್ಯ ಅವಕಾಶವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ದೇಶದ ವಿವಿಧ ಭಾಗಗಳಿಂದ ಸಮ್ಮೇಳನಕ್ಕೆ ಆಗಮಿಸಿರುವ ಪ್ರತಿನಿಧಿಗಳು ತುಮಕೂರು ವಿವಿಯಿಂದ ಉತ್ತಮ ಸಂದೇಶವನ್ನು ಕೊಂಡೊಯ್ಯಿರಿ. ಸ್ತ್ರೀಯರು ಭಾರತದ ಶಕ್ತಿ ಕೇಂದ್ರ, ಸಮಾಜ ಕಾರ್ಯವು ಲೈಂಗಿಕ ಅಸಮಾನತೆಯನ್ನು ಹೋಗಲಾಡಿಸಬೇಕು ಎಂದರು.
ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪೆÇ್ರ. ವೈ. ಎಸ್. ಸಿದ್ದೇಗೌಡ ಮಾತನಾಡಿ, ಮೂರು ದಿನಗಳ ಈ ಸಮ್ಮೇಳನವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಜ್ಞಾನ ಸಂಪಾದನೆ ಹಾಗೂ ವ್ಯಕ್ತಿತ್ವ ವರ್ಧನೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಮುಂಬೈಯ್ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‍ನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಮುರಳಿ ದೇಸಾಯಿ, ಸಮಾಜಕ್ಕೆ ಶಿಕ್ಷಣ ನೀಡುವುದು ಸಮಾಜ ಕಾರ್ಯದ ಜವಾಬ್ದಾರಿಯಾಗಿರುತ್ತದೆ. ಈ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಪೆÇ್ರ. ಪರಶುರಾಮ ಕೆ. ಜಿ., ಈ ಸಮ್ಮೇಳನದಲ್ಲಿ ರಾಷ್ಟ್ರದ ವಿವಿಧ ಭಾಗಗಳ 1200 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಮತ್ತು 174 ಸಂಶೋಧಕರು ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸುತ್ತಿರುವುದು ಸಂತಸÀದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್, ನಿಮ್ಹಾನ್ಸ್ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಐ. ಎ. ಶರೀಫ್, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರಮೇಶ್ ಬಿ, ಪ್ರೊ. ಜನಾರ್ದನ್ ಎನ್. ಭಾಗವಹಿಸಿದ್ದರು.